ಯಕ್ಷಗಾನ ಆಯ್ತು, ಭಜನೆಯಲ್ಲೂ 'ಪುಷ್ಪ' ಚಿತ್ರದ ಶ್ರೀವಲ್ಲಿ ಹಾಡಿನ ಸ್ಟೆಪ್, ಕಮಾಲ್ ಮಾಡಿದ ಅಲ್ಲು ಅರ್ಜುನ್ ಸಿನೆಮಾ!
ಅಲ್ಲು ಅರ್ಜುನ್(Allu Arjun) ನಾಯಕನಾಗಿ ನಟಿಸಿ ಇತ್ತೀಚೆಗೆ ತೆರೆಕಂಡ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'(Pushpa the rise film) ಸೂಪರ್ ಹಿಟ್(Super hit) ಆಗಿದ್ದು ಹಳೆಕಥೆ. ನಂತರ ಒಟಿಟಿಯಲ್ಲಿಯೂ ಬಿಡುಗಡೆಯಾಯಿತು. ಚಿತ್ರದ ಗಳಿಕೆಯಲ್ಲಿ ದಾಖಲೆ ಮಾಡಿದ ಸಿನಿಮಾದ ಹಾಡುಗಳು ಕೂಡ ಒಂದರ ಮೇಲೊಂದು ಸೂಪರ್ ಹಿಟ್ ಆದವು.
Published: 12th March 2022 10:37 AM | Last Updated: 12th March 2022 10:37 AM | A+A A-

ಭಜನೆಯಲ್ಲಿ ಶ್ರೀವಲ್ಲಿ ಹಾಡಿನ ಸ್ಟೆಪ್
ಅಲ್ಲು ಅರ್ಜುನ್(Allu Arjun) ನಾಯಕನಾಗಿ ನಟಿಸಿ ಇತ್ತೀಚೆಗೆ ತೆರೆಕಂಡ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'(Pushpa the rise film) ಸೂಪರ್ ಹಿಟ್(Super hit) ಆಗಿದ್ದು ಹಳೆಕಥೆ. ನಂತರ ಒಟಿಟಿಯಲ್ಲಿಯೂ ಬಿಡುಗಡೆಯಾಯಿತು. ಚಿತ್ರದ ಗಳಿಕೆಯಲ್ಲಿ ದಾಖಲೆ ಮಾಡಿದ ಸಿನಿಮಾದ ಹಾಡುಗಳು ಕೂಡ ಒಂದರ ಮೇಲೊಂದು ಸೂಪರ್ ಹಿಟ್ ಆದವು.
ಚಿತ್ರದ ಹಾಡುಗಳಿಗೆ ರೀಲ್ಸ್ ಮಾಡಿದವರು ಅದೆಷ್ಟೋ ಮಂದಿ. ಕಳೆದ ಎರಡು ತಿಂಗಳಿನಿಂದ ಪುಷ್ಪ (Pushpa) ಚಿತ್ರದ ಶ್ರೀವಲ್ಲಿ(Srivalli song) ಹಾಡು ಹೊಸ ಟ್ರೆಂಡ್ನ್ನೇ ಸೃಷ್ಟಿ ಮಾಡಿದೆ. ಸಾಮಾನ್ಯರು ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು, ಖ್ಯಾತ ಕ್ರಿಕೆಟಿಗರು ಶ್ರೀವಲ್ಲಿ ಹಾಡಿಗೆ ತಮ್ಮದೇ ರೀತಿಯಲ್ಲಿ ಸ್ಟೆಪ್ ಹಾಕಿ ಎಂಜಾಯ್ ಮಾಡುತ್ತಿದ್ದಾರೆ. ಮಕ್ಕಳು, ಯುವಕ-ಯುವತಿಯರು, ವಯಸ್ಕರು, ವೃದ್ಧರು ಕೂಡ ಇದಕ್ಕೆ ಫಿದಾ ಆಗಿದ್ದಾರೆ.
ಕೆಲ ದಿನಗಳ ಹಿಂದೆ ಕರಾವಳಿಯಲ್ಲಿ ಯಕ್ಷಗಾನದಲ್ಲಿ ಶ್ರೀವಲ್ಲಿ ಹಾಡಿನ ಟ್ಯೂನ್ ನ್ನು ಭಾಗವತರು ಹಾಡಿ ಕಲಾವಿದರು ನಾಟ್ಯ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಪರ-ವಿರೋಧ ಅಭಿಪ್ರಾಯ ಕೇಳಿಬಂದಿತ್ತು.
ಇದೀಗ ಹುಬ್ಬಳ್ಳಿಯಲ್ಲಿ ಭಜನೆ ಹಾಡುವಾಗ ಕಲಾವಿದರು ಶ್ರೀವಲ್ಲಿ ಡ್ಯಾನ್ಸ್ ನ ಸ್ಟೆಪ್ ಹಾಕಿದ್ದು ವೈರಲ್ ಆಗಿದೆ. ಶ್ರೀವಲ್ಲಿ ಡ್ಯಾನ್ಸ್ ನ ಸ್ಟೆಪ್ ಹಾಕುತ್ತಾ ಭಜನೆ ಮಾಡಿದ್ದಾರೆ. ಪಕ್ಕದಲ್ಲಿ ಪಕ್ಕ ವಾದ್ಯ ಕಲಾವಿದರು ಕೂಡ ಇದ್ದಾರೆ.
#PushpaTheRise dance moves now becomes part of a bhajan in this viral video@karnatakacom @allaboutbelgaum @Hubballi_Infra @NammaBengaluroo @NammaKalyana @AnandSingh_hpt @nagabhushanb @upendravk @hubliexpress1 @HubliCityeGroup @PrinceJebakumar @Arunkumar_TNIE @KiranTNIE1 pic.twitter.com/Uv6nSgoVmm
— Amit Upadhye (@Amitsen_TNIE) March 12, 2022