
ಅಗ್ನಿ ಅವಘಡ
ಬೆಂಗಳೂರು: ಶಿವಾಜಿನಗರ ಬಳಿಯ ಬಂಬೂ ಬಜಾರ್ನಲ್ಲಿ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಮೆಟ್ರೊ ಕಾಮಗಾರಿಯಲ್ಲಿದ್ದ ಕಟ್ಟಡದ ಸಾಮಗ್ರಿಗಳು ಸುಟ್ಟು ಕರಕಲಾಗದ ಘಟನೆ ನಡೆಯಿತು.
ಅಗ್ನಿ ಅವಘಡದಿಂದಾಗಿ ಸ್ಥಳದಲ್ಲಿ ಭಾರೀ ಪ್ರಮಾಣದ ಹೊಗೆ ಆವರಿಸಿದ್ದು, ಇದರ ಪರಿಣಾಮ ನಿವಾಸಿಗಳು ಆತಂಕಗೊಂಡು, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಬೆಂಕಿ ನಂದಿಸಿದರು. ಸ್ಥಳದಲ್ಲಿ ಪ್ಲೈವುಡ್, ಪ್ಲಾಸ್ಟಿಕ್ ಹಾಗೂ ಗಮ್ ಇದ್ದ ಪರಿಣಾಮ ಬೆಂಕಿ ಹೊತ್ತಿ ಉರಿದಿತ್ತು. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ತಜ್ಞರೂ ಭೇಟಿ ನೀಡಿದ್ದು ಪರಿಶೀಲನೆ ಆರಂಭಿಸಿದ್ದಾರೆ.