ವಿಧಾನಸೌಧದಲ್ಲಿ ಡ್ಯೂಟಿ, ಉಪ್ಪಾರಪೇಟೆ ಠಾಣೆಯಲ್ಲಿ 'ರೋಲ್-ಕಾಲ್': ಎಎಸ್ ಐ 'ವಸೂಲಿ' ಕರಾಮತ್ತು!
ಉಪ್ಪಾರಪೇಟೆ ಠಾಣೆಯಿಂದ ವಿಧಾನಸೌಧ ಠಾಣೆಗೆ ವರ್ಗಾವಣೆಗೊಂಡು 11 ತಿಂಗಳಿಂದ ಕೆಲಸಕ್ಕೆ ಹಾಜರಾಗದ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಅವರನ್ನು ಅಮಾನತುಗೊಳಿಸಲಾಗಿದೆ.
Published: 14th March 2022 01:18 PM | Last Updated: 14th March 2022 02:13 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಉಪ್ಪಾರಪೇಟೆ ಠಾಣೆಯಿಂದ ವಿಧಾನಸೌಧ ಠಾಣೆಗೆ ವರ್ಗಾವಣೆಗೊಂಡು 11 ತಿಂಗಳಿಂದ ಕೆಲಸಕ್ಕೆ ಹಾಜರಾಗದ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಅವರನ್ನು ಅಮಾನತುಗೊಳಿಸಲಾಗಿದೆ.
ಉಪ್ಪಾರಪೇಟೆ ಠಾಣೆಯಲ್ಲಿ ಹಿರಿಯ ಅಧಿಕಾರಿಗಳಿಗೆ ತಿಳಿಯದಂತೆ ಅಕ್ರಮವಾಗಿ ಕೆಲಸ ಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.
ಉಪ್ಪಾರಪೇಟೆ ಠಾಣೆಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಶ್ರೀನಿವಾಸ್ ಶೆಟ್ಟಿ ಅವರನ್ನು ಕಳೆದ ವರ್ಷದ ಆರಂಭದಲ್ಲಿ ವಿಧಾನಸೌಧ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. 11 ತಿಂಗಳು ಕಳೆದರೂ ವಿಧಾನಸೌಧ ಠಾಣೆಗೆ ಕೆಲಸಕ್ಕೆ ಹಾಜರಾಗಲಿಲ್ಲ, ಆದರೆ ಉಪ್ಪಾರಪೇಟೆ ಠಾಣೆಯಲ್ಲಿ ಆದೇಶವಿಲ್ಲದಿದ್ದರೂ ಕೆಲಸ ಮುಂದುವರೆಸಿದ್ದರು ಎಂದು ಮೂಲಗಳು ತಿಳಿಸಿವೆ.
ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಉಪ್ಪಾರಪೇಟೆ ಠಾಣೆಗೆ ಬರುತ್ತಿದ್ದ ಶ್ರೀನಿವಾಸ ಶೆಟ್ಟಿ, ಅಪರಾಧಗಳಲ್ಲಿ ಭಾಗಿಯಾಗಿರುವ ಕೆಲವು ವ್ಯಕ್ತಿಗಳನ್ನು ಕರೆತಂದು ಎಫ್ಐಆರ್ಗಳನ್ನು ದಾಖಲಿಸದೆ ಹಣ ಪಡೆದು ಅವರನ್ನು ಬಿಟ್ಟುಬಿಡುತ್ತಿದ್ದರು.
ಇದನ್ನೂ ಓದಿ: ಅಡುಗೆ ಎಣ್ಣೆ ಅನಧಿಕೃತ ದಾಸ್ತಾನು ಮಾಡುವವರ ವಿರುದ್ಧ ಕ್ರಮ: ಅಧಿಕಾರಿಗಳ ಎಚ್ಚರಿಕೆ
ತಮ್ಮ ಕಾನೂನುಬಾಹಿರ ವ್ಯವಹಾರವನ್ನು ನಡೆಸಲು ಮತ್ತು ಅಪರಾಧಿಗಳೊಂದಿಗೆ ವ್ಯವಹಾರಗಳನ್ನು ನಡೆಸಲು ಉಪ್ಪಾರ ಪೇಟೆ ಪೊಲೀಸ್ ಠಾಣೆಯನ್ನು ಬಳಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ, ಶ್ರೀನಿವಾಸ ಶೆಟ್ಟಿ ಅವರ ಈ ಕೆಲಸವ್ನವನ್ನು, ಹಿರಿಯ ಅಧಿಕಾರಿಗಳು ಸೇರಿದಂತೆ ಯಾರೂ ಪ್ರಶ್ನಿಸಲಿಲ್ಲ.
ಇತ್ಯರ್ಥವಾಗದ ಕೆಲವು ಪ್ರಮುಖ ಕೇಸ್ ಗಳ ತನಿಖೆಗೆ ಅವರ ಅಗತ್ಯವಿತ್ತು ಎಂದು ಆರೋಪಿಸಿ ಉಪ್ಪಾರಪೇಟೆ ಪೊಲೀಸರು ಶ್ರೀನಿವಾಸ ಶೆಟ್ಟಿಯನ್ನು ಉಳಿಸಿಕೊಂಡಿದ್ದಾರೆ ಎಂದು ವಿಧಾನಸೌಧ ಠಾಣೆಯ ಮೂಲಗಳು ತಿಳಿಸಿವೆ.
ಬುಧವಾರ ಗಾಂಧಿನಗರದಲ್ಲಿ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆಯ ನಂತರ ಶೆಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ.
ಆದರೆ ಸ್ಟೇಷನ್ ಮಟ್ಟದಲ್ಲಿ ಪೊಲೀಸ್ ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಈ ಪ್ರಕರಣ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳೆದ 11 ತಿಂಗಳಿಂದ ಎಎಸ್ಐ ಕೆಲಸಕ್ಕೆ ಹಾಜರಾಗದಿದ್ದರೂ ವಿಧಾನಸೌಧ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ.
ಈತನ ವಿರುದ್ಧ ಹಲವು ಆರೋಪಗಳಿದ್ದರೂ ಉಪ್ಪಾರಪೇಟೆ ಠಾಣೆ ಅಧಿಕಾರಿಗಳು ಈತನ ಚಟುವಟಿಕೆಗಳನ್ನು ಪರಿಶೀಲಿಸಲು ಮುಂದಾಗಲಿಲ್ಲ. ಹೀಗಿರುವಾಗ, ಹಿರಿಯ ಅಧಿಕಾರಿಗಳ ಶಾಮೀಲು ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ,’’ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಈ ಬಗ್ಗೆ ವರದಿ ಮಾಡುವ ಅಗತ್ಯವೇನು ಎಂದು ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಪ್ರಶ್ನಿಸಿದ್ದಾರೆ.