
ಬೆಂಗಳೂರಿನಲ್ಲಿ ಶನಿವಾರ ಮಧ್ಯರಾತ್ರಿ ನಡೆದ ರೈಡ್ನಲ್ಲಿ ಭಾಗಿಯಾಗಿದ್ದ ಮಹಿಳೆಯರ ಗುಂಪು.
ಬೆಂಗಳೂರು: ಸುರಕ್ಷತೆ ಹಾಗೂ ಸಬಲೀಕರಣಕ್ಕಾಗಿ ಮಹಿಳೆಯರು ನಗರದಲ್ಲಿ ಭಾನುವಾರ ಬೈಕ್ ಜಾಥಾ ನಡೆಸಿ, ಜಾಗೃತಿ ಮೂಡಿಸಿದರು.
ಮಾರತಹಳ್ಳಿಯ ರೈನ್ಬೋ ಮಕ್ಕಳ ಆಸ್ಪತ್ರೆಯು ‘ಮಿಡ್ನೈಟ್ ರೈಡ್ 2022’ ಶೀರ್ಷಿಕೆಯಡಿ ಹಮ್ಮಿಕೊಂಡ ಜಾಥಾಕ್ಕೆ ಆಸ್ಪತ್ರೆಯ ಅಧ್ಯಕ್ಷ ಡಾ. ರಮೇಶ್ ಕಂಚಾರ್ಲ, ನಟಿ ಮೇಘನಾ ರಾಜ್ ಮತ್ತು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಡಿ. ಮೌದ್ಗಿಲ್ ಚಾಲನೆ ನೀಡಿದರು.
ರಾತ್ರಿಯಲ್ಲಿ ಮಹಿಳೆಯರು ಬೈಕರ್ ಗಳಾಗಿ ಸವಾರಿ ಮಾಡುತ್ತಿರುವುದನ್ನು ನೋಡುವುದು ಸಂತೋಷವಾಗುತ್ತಿದೆ. ನಮ್ಮ ದೇಶದಲ್ಲಿ ಸಾಕಷ್ಟು ಮಹಿಳೆಯರು ಸಂಜೆಯಾಗುತ್ತಿದ್ದಂತೆಯೇ ಒಂಟಿಯಾಗಿ ಹೊರಗೆ ಬರಲು ಅಥವಾ ಇತರರು ಜೊತೆಗಿಲ್ಲದೆ ಹೊರಗೆ ಬರಲು ಅನುಮತಿ ನೀಡುವುದಿಲ್ಲ. ಪುರುಷರಿಗೆ ಎಲ್ಲಾ ಸ್ವಾತಂತ್ರ್ಯವಿರುವಾಗ ಹೆಣ್ಣಿಗೆ ಏಕೆ ನಿರ್ಬಂಧ ಹೇರಬೇಕು? ಎಂದು ರೂಪಾ ಮೌದ್ಗಿಲ್ ಅವರು ಪ್ರಶ್ನಿಸಿದ್ದಾರೆ.
“ಇದು ನಿಜವಾದ 'ನಾರಿ ಶಕ್ತಿ'ಯನ್ನು ಪ್ರತಿನಿಧಿಸುತ್ತದೆ. ನಾವು ಸಮಾಜದಲ್ಲಿ ಸಮಾನತೆಯನ್ನು ಉತ್ತೇಜಿಸಬೇಕಾಗಿದೆ ಮತ್ತು ಮಹಿಳೆಯರು ಯಾವುದೇ ಸಮಯದಲ್ಲಿ ರಸ್ತೆಗಳಲ್ಲಿ ಸವಾರಿ ಮಾಡಬಹುದು ಮತ್ತು ಸಮಯಕ್ಕೆ ಬದ್ಧರಾಗಿಲ್ಲ ಎಂಬುದನ್ನು ಈ ಮಧ್ಯರಾತ್ರಿಯ ಬೈಕ್ ಸವಾರಿ ತೋರಿಸಿಕೊಟ್ಟಿದೆ. ಒಬ್ಬ ಪುರುಷನು ಸಾಯಂಕಾಲ ಅಥವಾ ರಾತ್ರಿಯಲ್ಲಿ ಹೊರಗೆ ಹೋದರೆ, ಮಹಿಳೆಯೂ ಹೊರಗೆ ಹೋಗಬಹುದು ರೈನ್ಬೋ ಮಕ್ಕಳ ಆಸ್ಪತ್ರೆಯ ಅಧ್ಯಕ್ಷ ಡಾ. ರಮೇಶ್ ಕಂಚಾರ್ಲ ಅವರು ಹೇಳಿದ್ದಾರೆ.