ಬಿಡಿಎ ಇ-ಹರಾಜು: ಎಚ್ಆರ್ ಬಿಆರ್ ಲೇಔಟ್ ಸೈಟ್ ಬರೋಬ್ಬರಿ 6.81 ಕೋಟಿ ರೂ.ಗೆ ಮಾರಾಟ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಈ ಹಣಕಾಸು ವರ್ಷದಲ್ಲಿ ತನ್ನ ಸೈಟ್‌ಗಳ ಎರಡನೇ ಇ-ಹರಾಜಿನಲ್ಲಿ ಭರ್ಜರಿ ಯಶಸ್ವಿಯಾಗಿದೆ. ಹರಾಜಿನಲ್ಲಿ ಅನಿವಾಸಿ ಭಾರತೀಯ(ಎನ್‌ಆರ್‌ಐ)ರೊಬ್ಬರು ಎಚ್‌ಆರ್‌ಬಿಆರ್...
Published: 15th March 2022 08:02 PM | Last Updated: 15th March 2022 08:02 PM | A+A A-

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಈ ಹಣಕಾಸು ವರ್ಷದಲ್ಲಿ ತನ್ನ ಸೈಟ್‌ಗಳ ಎರಡನೇ ಇ-ಹರಾಜಿನಲ್ಲಿ ಭರ್ಜರಿ ಯಶಸ್ವಿಯಾಗಿದೆ. ಹರಾಜಿನಲ್ಲಿ ಅನಿವಾಸಿ ಭಾರತೀಯ(ಎನ್‌ಆರ್‌ಐ)ರೊಬ್ಬರು ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ನಿವೇಶನವೊಂದನ್ನು ಬರೋಬ್ಬರಿ 6.81 ಕೋಟಿ ರೂ.ಗೆ ಖರೀದಿಸಿದ್ದರಿಂದ ಎಲ್ಲರ ಕಣ್ಣು ಕುಕ್ಕಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ನಡೆದ 524 ಸೈಟ್‌ಗಳ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 1502 ವ್ಯಕ್ತಿಗಳು ಭಾಗವಹಿಸಿದ್ದರು. ಹರಾಜು ಪ್ರಕ್ರಿಯೆಗೆ ತೆರೆ ಬಿದ್ದಾಗ, ಬಿಡಿಎ 293 ಸೈಟ್‌ಗಳನ್ನು ಮಾರಾಟ ಮಾಡಿ ಒಟ್ಟು 344.38 ಕೋಟಿ ರೂ. ಗಳಿಸಿದೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸಿವೆ.
ಇದನ್ನು ಓದಿ: ಬಿಡಿಎಯಿಂದ ಹೊಸ ಮೂರು ಅಪಾರ್ಟ್ ಮೆಂಟ್ ಪ್ರಾಜೆಕ್ಟ್ ಗಳು: ಜನರಿಂದ ಹೆಚ್ಚಿದ ಬೇಡಿಕೆ
ಬಿಡಿಎ ನಿರೀಕ್ಷೆಗಿಂತ ಒಟ್ಟು 160.27 ಕೋಟಿ ರೂಪಾಯಿ ಹೆಚ್ಚು ಲಾಭ ಗಳಿಸಿದೆ. 172 ಸೈಟ್‌ಗಳು ಮಾರಾಟವಾಗದೆ ಉಳಿದಿದ್ದು, ಬಿಡ್‌ದಾರರು ಮೂಲ ಬೆಲೆಯ ಶೇಕಡಾ 5ಕ್ಕಿಂತ ಕಡಿಮೆ ಉಲ್ಲೇಖಿಸಿದ್ದರಿಂದ ಬಿಡಿಎ 26 ಸೈಟ್‌ಗಳ ಹರಾಜನ್ನು ರದ್ದುಗೊಳಿಸಿದೆ.
ಶುಕ್ರವಾರ ಹರಾಜಾದ ಎಲ್ಲಾ ಸೈಟ್‌ಗಳಿಗಿಂತ ಎಚ್‌ಆರ್‌ಬಿಆರ್ ಲೇಔಟ್ ಸೈಟ್‌ಗೆ ಹೆಚ್ಚಿನ ಬೆಲೆ ಬಂದಿದೆ. ಖರೀದಿದಾರನ ಬಗ್ಗೆ ಗೌಪ್ಯತೆಯನ್ನು ಕಾಪಾಡಬೇಕಾಗಿರುವುದರಿಂದ, ವಿವರಗಳನ್ನು ಬಿಡಿಎ ಹಂಚಿಕೊಂಡಿಲ್ಲ. ಈ "ಪ್ರದೇಶದ ಮೂರನೇ ಬ್ಲಾಕ್‌ನಲ್ಲಿರುವ 337.23 ಚದರ ಮೀಟರ್ ಸೈಟ್(50x80 ಚದರ ಅಡಿಗಿಂತ ಸ್ವಲ್ಪ ಕಡಿಮೆ)ಗೆ ನಾವು 4.94 ಕೋಟಿ ರೂ. ಬಿಡ್ ಬೆಲೆ ನಿಗದಿಪಡಿಸಿದ್ದೇವೆ. ಆದರೆ ಅದು ನಮ್ಮ ನಿರೀಕ್ಷೆಯನ್ನು ಮೀರಿ ರೂ 6.81 ಕೋಟಿಗೆ ಮಾರಾಟವಾಗಿದೆ. ಈ ಆಸ್ತಿಗೆ ಪ್ರತಿ ಚದರ ಮೀಟರ್ ಗೆ ರೂ. 2 ಲಕ್ಷ ಮತ್ತು ಹರಾಜಾದ ಎಲ್ಲಾ ಸೈಟ್‌ಗಳಲ್ಲಿ ಇದು ಅತ್ಯಂತ ದುಬಾರಿಯಾಗಿದೆ” ಎಂದು ಅವರು ಹೇಳಿದ್ದಾರೆ.
ಹೆಚ್ಚು ಆಸಕ್ತಿಯನ್ನು ಹುಟ್ಟುಹಾಕಿದ ಇನ್ನೊಂದು ಸೈಟ್ ಅಂಜನಾಪುರದಲ್ಲಿ, ಮೂರನೇ ಬ್ಲಾಕ್‌ನಲ್ಲಿದೆ. "ನಿಗದಿತ ಬಿಡ್ ಬೆಲೆ 64 ಲಕ್ಷ ರೂಪಾಯಿಗಳು ಆದರೆ ಅಂತಿಮವಾಗಿ ಅದನ್ನು 1.57 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ, ಇದು ನಾವು ಕೇಳಿದ್ದಕ್ಕಿಂತ 2.5 ಪಟ್ಟು ಹೆಚ್ಚಾಗಿದೆ" ಎಂದು ಅಧಿಕಾರಿ ಹೇಳಿದರು.