Koko Loan App ಬಗ್ಗೆ ಎಚ್ಚರ, ವಂಚಕರು ನಿಮ್ಮ ಅಕೌಂಟ್ ಗೆ ಅಲ್ಪ ಹಣ ಹಾಕಿ ದುಪ್ಪಟ್ಟು ಹಣ ಕೇಳಬಹುದು!
ಭಾರತದಲ್ಲಿ ಸೈಬರ್ ಅಪರಾಧ ಹೆಚ್ಚುತ್ತಿರುವಾಗ, ಕರ್ನಾಟಕ ಸೈಬರ್ ಕ್ರೈಮ್ ವಿಭಾಗ ಸಂತ್ರಸ್ತರು ಕೂಡಲೇ ದೂರು ಸಲ್ಲಿಸುವಂತೆ ಕೇಳುತ್ತಿದೆ. ಆದರೆ ಅಪರಾಧಿಗಳ ಮೇಲೆ ಕ್ರಮ ಕೈಗೊಂಡಿರುವ ಉದಾಹರಣೆಗಳು ಕಡಿಮೆ. Google Play Store ನಲ್ಲಿ ಲಭ್ಯವಿರುವ Koko Loan App ಒಂದು ಹಗರಣವಾಗಿದೆ. ಇದು ಸಂಘಟಿತ ಹಗರಣ ಎಂದು ಹಲವಾರು ದೂರುಗಳಿವೆ.
Published: 15th March 2022 02:27 PM | Last Updated: 15th March 2022 02:46 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಭಾರತದಲ್ಲಿ ಸೈಬರ್ ಅಪರಾಧ ಹೆಚ್ಚುತ್ತಿರುವಾಗ, ಕರ್ನಾಟಕ ಸೈಬರ್ ಕ್ರೈಮ್ ವಿಭಾಗ ಸಂತ್ರಸ್ತರು ಕೂಡಲೇ ದೂರು ಸಲ್ಲಿಸುವಂತೆ ಕೇಳುತ್ತಿದೆ. ಆದರೆ ಅಪರಾಧಿಗಳ ಮೇಲೆ ಕ್ರಮ ಕೈಗೊಂಡಿರುವ ಉದಾಹರಣೆಗಳು ಕಡಿಮೆ. Google Play Store ನಲ್ಲಿ ಲಭ್ಯವಿರುವ Koko Loan App ಒಂದು ಹಗರಣವಾಗಿದೆ. ಇದು ಸಂಘಟಿತ ಹಗರಣ ಎಂದು ಹಲವಾರು ದೂರುಗಳಿವೆ.
ಈ ಆಪ್ ಗೆ ಪಾಸಿಟಿವ್ ವಿಮರ್ಶೆಗಳು ಬಂದಿದ್ದರೂ 4.9 ರೇಟಿಂಗ್ ಇದ್ದರೂ ಇದೊಂದು ಸಂಘಟಿತ ಹಗರಣ ಎಂದು ಸಾವಿರಾರು ದೂರುಗಳು ಬಂದಿವೆ.
ನಾನು ಆಪ್ ನ್ನು ಡೌನ್ ಲೋಡ್ ಮಾಡಿಕೊಂಡೆನು, ನನಗೆ ತುರ್ತಾಗಿ ಸ್ವಲ್ಪ ಹಣ ಬೇಕಾಗಿತ್ತು. ಹಿಂದೆ ಇಂತಹ ಸಾಲದ ಆಪ್ ಗಳನ್ನು ಬಳಸಿದ್ದೆ.ಹೀಗಾಗಿ ಸಂಬಂಧಪಟ್ಟ ದಾಖಲೆಗಳನ್ನು ಅಪ್ ಲೋಡ್ ಮಾಡಿದೆ. ನನ್ನ ಬ್ಯಾಂಕ್ ಖಾತೆಗಳನ್ನು ನೀಡಿದೆ. 7 ಸಾವಿರ ರೂಪಾಯಿ ನೀಡುತ್ತೇನೆ ಎಂದು ಹೇಳಿದರು. ನಾನು ಕೇಳಿದ್ದಕ್ಕಿಂತ ಕಡಿಮೆ ಹಣ ಸಿಕ್ಕಿತು ಎನ್ನುತ್ತಾರೆ ಸಚಿನ್ ಗೌಡ.
ಇದಾದ ಕೆಲವೇ ದಿನಗಳಲ್ಲಿ ಸಚಿನ್ ಬ್ಯಾಂಕ್ ಖಾತೆಗೆ ಸುಮಾರು 4,000 ರೂಪಾಯಿ ಹಣಬಂತು. ಒಂದು ವಾರದ ನಂತರ, ಸಚಿನ್ ಗೆ ಅನೇಕ ಸಂಖ್ಯೆಗಳಿಂದ ಮೆಸೇಜ್ ಗಳು ಬರಲಾರಂಭಿಸಿದವು. ಅಪ್ಲಿಕೇಶನ್‌ನ ಪ್ರತಿನಿಧಿಗಳಂತೆ ನಟಿಸಿ ಮೆಸೇಜ್, ಕರೆಗಳು ಬರುತ್ತಿದ್ದವು. ಸಾಲವನ್ನು ಮರುಪಾವತಿಸುವಂತೆ ಕೇಳಿದರು.
"ಅವರು ನನಗೆ UPI ಐಡಿಗಳಿಗೆ ಲಿಂಕ್ ಗಳನ್ನು ಕಳುಹಿಸುತ್ತಿದ್ದರು, ಅದು ಕಾರ್ಯನಿರ್ವಹಿಸುತ್ತಿರಲಿಲ್ಲ. ಆರು ದಿನಗಳ ನಂತರ 7,000 ರೂಪಾಯಿಗಳನ್ನು ಹಿಂತಿರುಗಿಸಲು ನನ್ನನ್ನು ಕೇಳಿದರು, ಇದು ಜಮೆಯಾದ ಮೊತ್ತಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು ಎಂದು ಬೆಂಗಳೂರಿನ ಸಚಿನ್ ಗೌಡ ಹೇಳುತ್ತಾರೆ.
ಸಚಿನ್ ಹಣ ನೀಡಲು ನಿರಾಕರಿಸಿದಾಗ ಬೆದರಿಕೆ ಕರೆಗಳು ಬರಲಾರಂಭಿಸಿದವು. ಕೂಡಲೇ ಹಣವನ್ನು ಹಿಂತಿರುಗಿಸಿದೆ, ಏಕೆಂದರೆ ನನ್ನ ಫೋನ್ ನಲ್ಲಿ ಸಂಪರ್ಕದಲ್ಲಿದ್ದ ಮಹಿಳೆಯರಿಗೆ ಕರೆ ಮಾಡಿ ಬೆದರಿಕೆ ಹಾಕುವುದು ನನಗೆ ಸರಿ ಕಾಣಿಸಲಿಲ್ಲ, ಆದರೆ ಆಪ್ ನ ಪ್ರತಿನಿಧಿಗಳು ಕೂಡಲೇ ಮತ್ತಷ್ಟು ಹಣ ಕೊಡುವಂತೆ ಒತ್ತಾಯಿಸುತ್ತಿದ್ದರು.
ಬೆಂಗಳೂರಿನ ಮಾಜಿ ನಿವಾಸಿ ಚಂದನಾ ಇದೇ ತರಹ ಆಪ್ ಡೌನ್ ಲೋಡ್ ಮಾಡಿಕೊಂಡ ನಂತರ ಆದ ಪರಿಸ್ಥಿತಿಯನ್ನು ವಿವರಿಸುತ್ತಾರೆ. “ನನ್ನ ಸಾಲದ ಅರ್ಹತೆಯನ್ನು ಪರಿಶೀಲಿಸಲು ನಾನು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡೆ. ಆದರೆ ಅವರು ನನ್ನ ಖಾತೆಗೆ 4,640 ರೂ.ಗಳನ್ನು ಜಮಾ ಮಾಡಿದ್ದರು. ಬ್ಯಾಂಕ್‌ಗೆ ಭೇಟಿ ನೀಡಿದಾಗ, ನೆಟ್‌ಬ್ಯಾಂಕಿಂಗ್ ಮೂಲಕ ಮೊತ್ತವನ್ನು ಯಾರು ಜಮಾ ಮಾಡಿದ್ದಾರೆ ಎಂಬುದರ ಕುರಿತು ಅವರು ನನಗೆ ಯಾವುದೇ ವಿವರಗಳನ್ನು ನೀಡಲು ಸಾಧ್ಯವಾಗಲಿಲ್ಲ. ನಾಲ್ಕು ದಿನಗಳ ನಂತರ, 8,000 ರೂಪಾಯಿಗಳನ್ನು ಮರುಪಾವತಿಸಲು ನನಗೆ ಹಲವಾರು ಸಂಖ್ಯೆಗಳಿಂದ ಕರೆಗಳು ಬರಲಾರಂಭಿಸಿದವು, ಎಂದು ಚಂದನಾ ಹೇಳುತ್ತಾರೆ.
ಅಪ್ಲಿಕೇಶನ್ ಅನೇಕ ನಕಾರಾತ್ಮಕ ವಿಮರ್ಶೆಗಳನ್ನು ಹೊಂದಿದೆ, ಗ್ರಾಹಕರು ಸಮ್ಮತಿಯಿಲ್ಲದೆ ಹಣ ಪಾವತಿಸಿ ನಂತರ ದುಪ್ಪಟ್ಟು ಮೊತ್ತವನ್ನು ಪಾವತಿಸಲು ಒತ್ತಾಯಿಸಿರುವುದು ಕಂಡುಬಂದಿದೆ. ಚಂದನಾ ಮತ್ತು ಸಚಿನ್ ಇಬ್ಬರೂ ಪ್ರತ್ಯೇಕವಾಗಿ ದೂರು ದಾಖಲಿಸಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. "ಸೈಬರ್ ಕ್ರೈಂ ಬ್ರಾಂಚ್ ನನ್ನ ದೂರನ್ನು ಭದ್ರಾವತಿಯ ಸ್ಥಳೀಯ ಪೊಲೀಸ್ ಠಾಣೆಗೆ ವರ್ಗಾಯಿಸಿದೆ, ಆದರೆ ಅವರು ಸಂದೇಶಗಳನ್ನು ನಿರ್ಲಕ್ಷಿಸುವಂತೆ ನನಗೆ ಹೇಳಿದರು" ಎಂದು ಚಂದನಾ ಹೇಳಿದರು. ಅವರು ಫೆಬ್ರವರಿ 19 ರಂದು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದರು.
ಫೆಬ್ರವರಿ 14 ರಂದು ದೂರು ನೀಡಿದರೂ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆಯಿಲ್ಲದ ಕಾರಣ, ಸಚಿನ್ ತನ್ನ ನಂಬರ್ ಅನ್ನು ಬದಲಾಯಿಸಿದರು. ಚಂದನಾ ಅವರ ದೂರನ್ನು ವರ್ಗಾಯಿಸಿದ ಭದ್ರಾವತಿ ಓಲ್ಡ್ ಟೌನ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಭರತ್ ಕುಮಾರ್, ಪ್ರಕರಣದ ಹಿಂದಿನವರು ದೆಹಲಿಯಲ್ಲಿ ನೆಲೆಸಿರುವುದರಿಂದ ಅವರನ್ನು ಪತ್ತೆಹಚ್ಚುವುದು ಕಷ್ಟ ಎಂದು ಹೇಳುತ್ತಾರೆ.