ಜೀವ ಬೆದರಿಕೆ ಕರೆ: ರಕ್ಷಣೆ ಕೋರಿ ಗೃಹ ಸಚಿವರಿಗೆ ನಟ ಚೇತನ್ ಮನವಿ
ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬರುತ್ತಿರುವ ಕಾರಣ ಸೂಕ್ತ ರಕ್ಷಣೆ ನೀಡಬೇಕು ಎಂದು ಕೋರಿ ನಟ ಚೇತನ್ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮಂಗಳವಾರ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
Published: 16th March 2022 08:28 AM | Last Updated: 16th March 2022 01:59 PM | A+A A-

ಚೇತನ್
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬರುತ್ತಿರುವ ಕಾರಣ ಸೂಕ್ತ ರಕ್ಷಣೆ ನೀಡಬೇಕು ಎಂದು ಕೋರಿ ನಟ ಚೇತನ್ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮಂಗಳವಾರ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
‘ಗೌರಿ ಲಂಕೇಶ್ ಅವರ ಹತ್ಯೆಯಾದ ಬಳಿಕ, ಜೀವ ಬೆದರಿಕೆಯಂಥ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ. ರಾಜಕಾರಣಿಗಳು ಸಮಾಜದ ಪರಿವರ್ತನೆ ಮಾತುಗಳನ್ನು ಆಡದೇ ಇದ್ದರೂ, ಕೇವಲ ಕೋಮುವಾದ ಅಥವಾ ದ್ವೇಷದ ಮಾತುಗಳನ್ನು ಆಡಿದರೂ ಅವರಿಗೆ ರಕ್ಷಣೆ ಸಿಗುತ್ತದೆ. ನಾವು ಸತ್ಯದ ಪರ ಮಾತನಾಡುವಾಗ ಬೆದರಿಕೆ ಬರುತ್ತಿದೆ ಎಂದರೆ ರಕ್ಷಣೆ ನೀಡುವುದು ಸರ್ಕಾರ ಕರ್ತವ್ಯ. ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಬರುತ್ತಿವೆ. ಒಬ್ಬ ವ್ಯಕ್ತಿಯಿಂದ ಅಥವಾ ಸಂಘಟನೆಯಿಂದ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲ ದಾಖಲೆಗಳನ್ನೂ ಗೃಹ ಸಚಿವರಿಗೆ ನೀಡಿದ್ದೇನೆ’ ಎಂದರು.
ನನ್ನನ್ನು ಗಡಿಪಾರು ಮಾಡುತ್ತಾರೆ ಎನ್ನುವುದು ಆಧಾರವಿಲ್ಲದ ಅತಿರೇಕದ ಮಾತು. ಇದಕ್ಕೆ ಯಾವ ಸಾಕ್ಷ್ಯವೂ ಇಲ್ಲ. ಇದರಲ್ಲಿ ಯಾವ ಸತ್ಯವೂ ಇಲ್ಲ. ಹೀಗಾಗಿ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ. ‘ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಬರಹ ಪ್ರಕಟಿಸಿದ್ದಾರೆ’ ಎಂಬ ಆರೋಪದಡಿ ಬಂಧನಕ್ಕೊಳಗಾಗಿದ್ದ ಚೇತನ್ ಅವರು ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ನಟನೆಯ ಜೊತೆಗೆ ನಟ ಚೇತನ್ಹಲವು ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದರು. ಹಿಜಾಬ್ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ನ್ಯಾಯಮೂರ್ತಿಗಳ ಹಳೆಯ ಹೇಳಿಕೆಯೊಂದನ್ನು ಉಲ್ಲೇಖಿಸಿ ಮಾಡಿದ್ದ ಟ್ವೀಟ್ವಿವಾದಕ್ಕೊಳಗಾಗಿದೆ.