ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಉಚಿತ ವೀಕ್ಷಣೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಚೇರಿ ವ್ಯವಸ್ಥೆ
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತ ನೈಜ ಘಟನೆಗಳನ್ನು ಆಧರಿಸಿರುವ ವಿವೇಕ್ ಅಗ್ನಹೋತ್ರಿ ನಿರ್ದೇಶನದ `ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಪ್ರಕಟಣೆ ತಿಳಿಸಿದೆ.
Published: 16th March 2022 12:10 PM | Last Updated: 16th March 2022 02:01 PM | A+A A-

ದ ಕಾಶ್ಮೀರ ಫೈಲ್ಸ್
ಹುಬ್ಬಳ್ಳಿ: ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತ ನೈಜ ಘಟನೆಗಳನ್ನು ಆಧರಿಸಿರುವ ವಿವೇಕ್ ಅಗ್ನಹೋತ್ರಿ ನಿರ್ದೇಶನದ `ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಬಜೆಟ್ ಚರ್ಚೆ ಬಿಟ್ಟು, ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆಗೆ ಆಹ್ವಾನ: ಸರ್ಕಾರದ ಪ್ರಕಟಣೆಗೆ ಕಾಂಗ್ರೆಸ್ ಪ್ರತಿಭಟನೆ
ಇಂದಿನಿಂದ( ಮಾರ್ಚ್ ೧೬ ರಿಂದ ಮಾರ್ಚ್ ೨೦) ಹುಬ್ಬಳ್ಳಿಯ ರೂಪಂ ಹಾಗೂ ಧಾರವಾಡದ ಶ್ರೀನಿವಾಸ ಚಿತ್ರಮಂದಿರದಲ್ಲಿ ದಿನಕ್ಕೆ ಎರಡು ಉಚಿತ ಪ್ರದರ್ಶನ ಆಯೋಜಿಸಲಾಗಿದೆ. ಬುಧವಾರದಿಂದ ಮಧ್ಯಾಹ್ನ ೩.೦೦ ಕ್ಕೆ ಹಾಗೂ ಸಂಜೆ ೬ಕ್ಕೆ ಎರಡು ಪ್ರದರ್ಶನಗಳಲ್ಲಿ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಇಂದಿನ ಪೀಳಿಗೆಯ ಜನತೆ ಹಿಂದೆ ಜರುಗಿದ ಕಾಶ್ಮೀರಿ ಪಂಡಿತರ ಇತಿಹಾಸ ಮರೆಯಬಾರದು ಹಾಗೂ ಇಂತಹ ಇಂಥಾ ದಾರುಣ ಇತಿಹಾಸ ಭವಿಷ್ಯದಲ್ಲಿ ಮತ್ತೊಮ್ಮೆ ಬರಲೂಬಾರದು ಎಂಬ ದೃಷ್ಟಿಯಿಂದ ನಿರ್ಮಿಸಿದ ಅಸಾಧಾರಣ ಚಿತ್ರ. ಇದರ ಉದ್ದೇಶ ಮನರಂಜನೆಯಾಗಿರದೇ ಸತ್ಯವನ್ನು ಜನರಿಗೆ ನೇರವಾಗಿ ತಲುಪಿಸುವುದಾಗಿದೆ, ನಾನು ಈಗಾಗಲೇ ಚಿತ್ರ ವೀಕ್ಷಿಸಿದ್ದೇನೆ ಎಂದಿರುವ ಜೋಶಿ, ಈ ಚಲನ ಚಿತ್ರದ ಶೋಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ತೋರಿಸುವ ವ್ಯವಸ್ಥೆ ಮಾಡಿದ್ದೇನೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ಮೆಚ್ಚಿದ ಪ್ರಧಾನಿ ಮೋದಿ: ಸಿನಿಮಾ ನೋಡುವಂತೆ ಬಿಜೆಪಿ ನಾಯಕರಿಗೆ ಶಿಫಾರಸು
ಮೂರುಸಾವಿರ ಮಠದ ಜಗದ್ಗುರು ಶ್ರೀಗುರುಸಿದ್ಧ ರಾಜೇಂದ್ರ ಸ್ವಾಮೀಜಿ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಈ ಸಮಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರುಗಳು ನಾಯಕರುಗಳು, ಪಕ್ಷದ ಮುಖಂಡರುಗಳು ಪದಾಧಿಕಾರಿಗಳು ‘ದಿ ಕಾಶ್ಮೀರಿ ಫೈಲ್ಸ್’ ಪೋಸ್ಟರ್ಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಕಾಶ್ಮೀರದಲ್ಲಿ ಪಂಡಿತರ ಮಾರಣಹೋಮದ ಕುರಿತ ‘ದಿ ಕಾಶ್ಮೀರಿ ಫೈಲ್ಸ್’ ಕಾಶ್ಮೀರದಲ್ಲಿರುವ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ. ಕಾಶ್ಮೀರದಲ್ಲಿ ಉಗ್ರರು ನಡೆಸಿದ ಅಟ್ಟಹಾಸದ ಬಗ್ಗೆ ಸಿನಿಮಾದ ಮೂಲಕ ತೆರೆದಿಡಲಾಗಿದೆ. ಇದಕ್ಕೆ ರಾಜ್ಯಸರ್ಕಾರ ತೆರಿಗೆ ವಿನಾಯಿತಿ ನೀಡಿರುವುದಕ್ಕೆ ಸಚಿವ ಜೋಶಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬಿಗ್ ಸ್ಟಾರ್ ಗಳಿಲ್ಲದಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿರುವ ''ದಿ ಕಾಶ್ಮೀರ್ ಫೈಲ್ಸ್''
ಐದು ದಿನಗಳ ಕಾಲ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದರಿಂದ ಈ ಚಲನಚಿತ್ರವನ್ನು ಸುಮಾರು ಐದರಿಂದ ಆರು ಸಾವಿರ ಜನರು ವೀಕ್ಷಣೆ ಮಾಡುತ್ತಾರೆ ಎಂಬ ಅಂದಾಜಿದೆ. ೧೯೯೦ ರಲ್ಲಿ ನಡೆದ ಈ ಕ್ರೂರ ಘಟನೆಯ ಬಗ್ಗೆ ನಿರ್ದೇಶಕ ಅಗ್ನಿಹೋತ್ರಿ ಸಂಶೋಧನೆ ನಡೆಸಿ ಧೈರ್ಯದಿಂದ ಆ ಕಥೆಯನ್ನು ಇಂದು ಜಗತ್ತಿಗೆ ತೋರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ವಿವರಿಸಿದ್ದಾರೆ.
`ದಿ ಕಾಶ್ಮೀರ್ ಫೈಲ್’ ಸಿನಿಮಾವನ್ನು ನೋಡಿ ಎಂದು ಎಲ್ಲ ಭಾರತೀಯರಲ್ಲಿ ಮನವಿ ಮಾಡುತ್ತೇನೆ. ಭಾರತೀಯರಾಗಿ ನಮ್ಮದೇ ನೆಲದಲ್ಲಿ ನಡೆದ ಈ ಘಟನೆ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು, ನ್ಯಾಯದ ಹಕ್ಕು ಕಾಶ್ಮೀರಿ ಪಂಡಿತರಿಗೆ ದೊರಕಬೇಕು ಎಂದು ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ಸಿನೆಮಾ ವೀಕ್ಷಿಸಲು ಶಾಸಕರಿಗೆ ಸಭಾಧ್ಯಕ್ಷರ ಆಹ್ವಾನ: ಮಂತ್ರಿ ಮಾಲ್ ನಲ್ಲಿ ವಿಶೇಷ ಶೋ!
ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು, ಮರುಕಳಿಸಲೂ ಬಾರದು, ಪಂಡಿತರು ಕಾಶ್ಮೀರ ತೊರೆದದ್ದು ಏಕೆ ಎನ್ನುವ ಸುದ್ದಿ ಹಿಂದಿನಿಂದಲೂ ಇತ್ತು. ಆ ಸುದ್ದಿಗಳಿಗೆ ಸಾಕ್ಷಿಯಂತೆ ಚಿತ್ರದ ಫ್ರೇಮ್ ಅನ್ನು ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಹಣೆದಿದ್ದಾರೆ ಎಂದು ಹೇಳಿದ್ದಾರೆ.