ಉತ್ತರ ಕನ್ನಡದಲ್ಲಿ ಜಲ್ ಜೀವ ಮಿಷನ್ ಗೆ ನೂರಾರು ಅಡ್ಡಿ; ಯೋಜನೆಯೇ ಹೊರೆ!
ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರ ಯೋಜನೆ ಜಲ್ ಜೀವನ್ ಮಿಷನ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಅಡ್ಡಿಗಳನ್ನು ಎದುರಿಸುತ್ತಿದ್ದು, ಸರ್ಕಾರಕ್ಕೆ ಹಾಗೂ ಸ್ಥಳೀಯ ಜನರಿಗೆ ಯೋಜನೆ ಹೊರೆ ಎನಿಸತೊಡಗಿದೆ.
Published: 17th March 2022 03:36 PM | Last Updated: 17th March 2022 03:49 PM | A+A A-

ಸಾಂಕೇತಿಕ ಚಿತ್ರ
ಕಾರವಾರ: ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರ ಯೋಜನೆ ಜಲ್ ಜೀವನ್ ಮಿಷನ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಅಡ್ಡಿಗಳನ್ನು ಎದುರಿಸುತ್ತಿದ್ದು, ಸರ್ಕಾರಕ್ಕೆ ಹಾಗೂ ಸ್ಥಳೀಯ ಜನರಿಗೆ ಯೋಜನೆ ಹೊರೆ ಎನಿಸತೊಡಗಿದೆ.
ಜಿಲ್ಲೆಯ ಸುಮಾರು 60 ಗ್ರಾಮಗಳಲ್ಲಿ ಈ ಯೋಜನೆಯನ್ನು ತಡೆಹಿಡಿಯಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಹಾಗೂ ಕಾಡುಗಳ ನಡುವೆ ಇರುವ ಊರುಗಳಲ್ಲಿ ಒಂದು ಮನೆಯಿಂದ ಮತ್ತೊಂದು ಮನೆಗೆ ಬಹಳ ಅಂತರವಿದ್ದು ನೀರಿನ ಸಂಪರ್ಕ ಕಲ್ಪಿಸುವುದರಿಂದ ಹೆಚ್ಚಿನ ಖರ್ಚು ಉಂಟಾಗುತ್ತದೆ.
ಜಿಲ್ಲೆಯ ಕಡಲ ತೀರದಲ್ಲಿ ಜನಸಂದಣಿ ಹೆಚ್ಚಿದೆ. ಆದರೆ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಮನೆಗಳ ನಡುವೆ ಕನಿಷ್ಟ 1 ಕಿ.ಮೀ ಅಂತರವಿದೆ.
ಪ್ರದೇಶದ ಭೂಗೋಳವನ್ನು ಪರಿಗಣಿಸಿದಾಗ, ಉದ್ದದ ಪೈಪ್ ಲೈನ್ ಗಳಿಗಾಗಿ ಅತಿ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ ಎಂಬುದು ತಿಳಿಯಿತು. ಪೆಟ್ರೋಲ್ ದರದಲ್ಲಿ ಏರಿಕೆಯಾಗಿದ್ದು, ಪಿವಿಸಿ ಪೈಪ್ ಗಳ ಬೆಲೆಯೂ ಏರಿಕೆಯಾಗಿದೆ ಎಂದು ಯೋಜನೆಯೊಂದಿಗೆ ಗುರುತಿಸಿಕೊಂಡಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಿಲ್ಲಾಡಳಿತ ಇಷ್ಟು ದೊಡ್ಡಮಟ್ಟದ ಹೂಡಿಕೆಗಳನ್ನು ಮಾಡಲು ಸಾಧ್ಯವಿಲ್ಲ. ಜನರೂ ಭಾಗಶಃ ಹೂಡಿಕೆ ಮಾಡಿ ಆ ಮೂಲಕ ಯೋಜನೆ ಪೂರ್ಣಗೊಳಿಸಲು ಯತ್ನಿಸಿದೆವು ಆದರೆ ಸಾವಿರಾರು ರೂಪಾಯಿಗಳು ಖರ್ಚಿರುವುದರಿಂದ ಅದಕ್ಕೂ ಜನತೆ ಮುಂದಾಗಲಿಲ್ಲ ಎನ್ನುತ್ತಾರೆ ಮತ್ತೋರ್ವ ಅಧಿಕಾರಿ.