ಭೂ ಸರ್ವೆ ಮಾಡುವ ಅಧಿಕಾರ ತಹಶಿಲ್ದಾರ್ ಗೆ ಇದೆ: ಹೈಕೋರ್ಟ್

ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 140(2)ರಡಿಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯೊಳಗೆ ಬರುವ ಭೂಮಿಯ ಸರ್ವೆ ಮಾಡಿ ಗಡಿಯನ್ನು ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್ ಗಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

Published: 17th March 2022 02:09 PM  |   Last Updated: 17th March 2022 02:09 PM   |  A+A-


High court

ಹೈಕೋರ್ಟ್

The New Indian Express

ಬೆಂಗಳೂರು: ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 140(2)ರಡಿಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯೊಳಗೆ ಬರುವ ಭೂಮಿಯ ಸರ್ವೆ ಮಾಡಿ ಗಡಿಯನ್ನು ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್ ಗಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಅಲೋಕ್ ಅರದೆ ಮತ್ತು ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಆದೇಶ ಹೊರಡಿಸಿದ್ದು ಬೆಂಗಳೂರಿನ ಬಸವನಗುಡಿಯ ನಿವಾಸಿ ಸುನಿಲ್ ಚಜೆಡ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಆದೇಶ ನೀಡಿದ್ದು, 2020ರ ಅಕ್ಟೋಬರ್ ನಲ್ಲಿ ಒಬ್ಬರು ನ್ಯಾಯಾಧೀಶರನ್ನೊಳಗೊಂಡ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶದ ಮೌಲ್ಯವನ್ನು ಪ್ರಶ್ನಿಸಿದೆ.

ಸಮೀಕ್ಷೆಯ ಸಮಯದಲ್ಲಿ, ಯಾವುದೇ ಸರ್ವೆ ನಂಬರ್‌ನ ಗಡಿ ಅಥವಾ ಸರ್ವೆ ನಂಬರ್‌ನ ಉಪವಿಭಾಗ ಅಥವಾ ಹಿಡುವಳಿ ವಿವಾದಕ್ಕೊಳಗಾಗಿದ್ದರೆ, ಭೂಮಾಪಕ ಅಧಿಕಾರಿಯು ಭೂಮಿಗೆ ಸಂಬಂಧಿಸಿದ ಭೂ ದಾಖಲೆಗಳ ಅನುಸಾರವಾಗಿ ಮತ್ತು ಅವರು ಅಗತ್ಯವೆಂದು ಪರಿಗಣಿಸುವ ವಿಚಾರಣೆಯನ್ನು ಮಾಡಿದ ನಂತರ ನಿಗದಿಪಡಿಸಬೇಕು. ಕಾಯಿದೆಯ ಸೆಕ್ಷನ್ 140(2) ರ ಪ್ರಕಾರ ಸರ್ವೆ ನಂಬರಿನ ಗಡಿಗೆ ಸಂಬಂಧಿಸಿದಂತೆ ಯಾವುದೇ ವಿವಾದ ಉಂಟಾದರೆ, ತಹಶೀಲ್ದಾರ್ ಅವರು ಭೂ ದಾಖಲೆಗಳನ್ನು ಪರಿಗಣಿಸಿ ವಿವಾದವನ್ನು ನಿರ್ಧರಿಸುತ್ತಾರೆ ಎಂದು ಹೈಕೋರ್ಟ್ ಆದೇಶ ಹೇಳಿದೆ.

ಕಾಯಿದೆಯ ಸೆಕ್ಷನ್ 140(2)ರ ಅಡಿಯಲ್ಲಿ ತಹಶೀಲ್ದಾರ್‌ಗೆ ಸರ್ವೆ ನಂಬರ್‌ನ ಗಡಿಯನ್ನು ನಿರ್ಧರಿಸುವ ಅಧಿಕಾರವಿದೆ. ಈ ಅಧಿಕಾರವನ್ನು ಪುರಸಭೆಯ ವ್ಯಾಪ್ತಿಯಲ್ಲಿ ಅಥವಾ ಪುರಸಭೆಯ ಮಿತಿಯ ಹೊರಗೆ ಇದೆಯೇ ಎಂಬ ಅಂಶವನ್ನು ಲೆಕ್ಕಿಸದೆಯೇ ಸರ್ವೆ ಸಂಖ್ಯೆ ಅಥವಾ ಹಿಡುವಳಿಗಳಿಗೆ ಸಂಬಂಧಿಸಿದಂತೆ ನಡೆಸಬಹುದು ಎಂದು ನ್ಯಾಯಾಲಯ ಹೇಳಿದೆ.

ಕಳೆದ 2020ರ ಅಕ್ಟೋಬರ್ ನಲ್ಲಿ ಏಕಸದಸ್ಯ ಪೀಠ ಆದೇಶ ನೀಡಿ, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆಯ ಸೆಕ್ಷನ್ 112-ಡಿ ಅನ್ನು ಗಣನೆಗೆ ತೆಗೆದುಕೊಂಡಿದೆ, ಇದು ಭೂಮಿ ಮತ್ತು ಕಟ್ಟಡಗಳನ್ನು ಸರ್ವೆ ಮಾಡಲು ಆಯುಕ್ತರಿಗೆ ಅಧಿಕಾರ ನೀಡಿತ್ತು.


Stay up to date on all the latest ರಾಜ್ಯ news
Poll
Kharge-tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp