ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಸರಳತೆ ಮೆರೆದ ಬಳ್ಳಾರಿ ಜಿಲ್ಲಾ ಪಂಚಾಯತ್ ಸಿಇಒ ನಂದಿನಿ ಕೆ ಆರ್!
ಸರ್ಕಾರಿ ಆಸ್ಪತ್ರೆಯೆಂದರೆ ಈಗಲೂ ಮೂಗುಮುರಿಯುವವರೇ ಅಧಿಕ ಮಂದಿ. ಸರ್ಕಾರಿ ಆಸ್ಪತ್ರೆ ಬಡವರಿಗೆ ಮಾತ್ರ ಎಂಬ ಮನೋಭಾವನೆ ಹಲವರಿಗೆ. ಧೈರ್ಯದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲು ಜನ ಹಿಂದೇಟು ಹಾಕುತ್ತಾರೆ.
Published: 18th March 2022 09:56 AM | Last Updated: 18th March 2022 01:36 PM | A+A A-

ಹೆರಿಗೆ ನಂತರ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಜೊತೆ ಐಎಎಸ್ ಅಧಿಕಾರಿ ನಂದಿನಿ ಕೆ ಆರ್
ಬಳ್ಳಾರಿ: ಸರ್ಕಾರಿ ಆಸ್ಪತ್ರೆಯೆಂದರೆ ಈಗಲೂ ಮೂಗುಮುರಿಯುವವರೇ ಅಧಿಕ ಮಂದಿ. ಸರ್ಕಾರಿ ಆಸ್ಪತ್ರೆ ಬಡವರಿಗೆ ಮಾತ್ರ ಎಂಬ ಮನೋಭಾವನೆ ಹಲವರಿಗೆ. ಧೈರ್ಯದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲು ಜನ ಹಿಂದೇಟು ಹಾಕುತ್ತಾರೆ.
ಅಂತಹುದರಲ್ಲಿ ಬಳ್ಳಾರಿ ಜಿಲ್ಲಾ ಪಂಚಾಯತ್ ಸಿಇಓ ಆಗಿರುವ IAS ಅಧಿಕಾರಿ ಕೆ ಆರ್ ನಂದಿನಿ ಅವರು (Bellary ZP CEO IAS KR Nandini) ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಮೊನ್ನೆ ಬುಧವಾರ ಹೆರಿಗೆ (Bellary District Hospital) ಮಾಡಿಸಿಕೊಂಡಿದ್ದು, ಸಹಜ ಹೆರಿಗೆ (normal delivery) ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಈ IAS ಅಧಿಕಾರಿ ಮಾದರಿಯಾಗಿದ್ದಾರೆ. ಬಳ್ಳಾರಿಯ ಗೌಸ್ ಜಿಲ್ಲಾ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಮ್ಮ ಹಾಗೂ ಮಗು ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: 5ನೇ ತರಗತಿಯಲ್ಲಿದ್ದಾಗಲೆ ಐಎಎಸ್ ಅಧಿಕಾರಿ ಆಗುವ ನಿರ್ಧಾರ ಮಾಡಿದ್ದ ನಂದಿನಿ
ಐಎಎಸ್ ಅಧಿಕಾರಿ ನಂದಿನಿಯವರ ಸರಳತೆಯನ್ನು ಇದು ತೋರಿಸುತ್ತದೆ. ಜಿಲ್ಲೆಯ ಒಬ್ಬ ಅಧಿಕಾರಿಣಿಯಾಗಿ ನಂದಿನಿಯರ ನಡೆ ಬೇರೆಯವರಿಗೆ ಮಾದರಿಯಾಗಿದೆ ಎಂದು ಬಳ್ಳಾರಿಯ ವಾರ್ತಾ ಇಲಾಖೆ ಅಧಿಕಾರಿಯಾಗಿರುವ ರಾಮಲಿಂಗಪ್ಪ ಹೇಳುತ್ತಾರೆ.
ಯಾರು ಈ ನಂದಿನಿ:
ನಂದಿನಿ ಕೋಲಾರದ ಕೆಂಬೋಡಿ ಗ್ರಾಮದವರು, 2016ನೇ ಬ್ಯಾಚಿನ ಐಎಎಸ್ ಅಧಿಕಾರಿ ಕೆ ಆರ್ ನಂದಿನಿ ಅವರು IAS ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಬೆಂಗಳೂರಿನ ಎಂ ಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿ ಐಎಎಸ್ ಪರೀಕ್ಷೆ ಬರೆದು ಕರ್ನಾಟಕ ಕೇಡರ್ ಅಧಿಕಾರಿಯಾದರು. ಎರಡು ವರ್ಷಗಳ ಹಿಂದೆ ಬಳ್ಳಾರಿಗೆ ಬಂದವರು. ಅದಕ್ಕೂ ಮುನ್ನ ತಿಪಟೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದರು.
ಕನ್ನಡ ಮೀಡಿಯಂನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದು ಸಿವಿಲ್ ಎಂಜಿನಿಯರಿಂಗ್ ನಲ್ಲಿ ಚಿನ್ನದ ಪದಕ ಗಳಿಸಿದ್ದರು. ಇವರ ಪತಿ ಡಾ ರಜಿತ್ ಬೆಂಗಳೂರಿನಲ್ಲಿ ವೈದ್ಯರಾಗಿದ್ದಾರೆ.