ಉಕ್ರೇನ್ನಲ್ಲಿ ರಷ್ಯಾ ದಾಳಿಗೆ ಬಲಿಯಾದ ನವೀನ್ ಮೃತದೇಹ ಭಾನುವಾರ ರಾಜ್ಯಕ್ಕೆ ಬರಲಿದೆ: ಸಿಎಂ ಬೊಮ್ಮಾಯಿ
ಉಕ್ರೇನ್ ಖಾರ್ಕಿವ್ನಲ್ಲಿ ಮಾರ್ಚ್ 1 ರಂದು ರಷ್ಯಾ ನಡೆಸಿದ ಶೆಲ್ ದಾಳಿಗೆ ಬಲಿಯಾದ ನವೀನ್ ಎಸ್ ಜಿ ಅವರ ಮೃತದೇಹ ಭಾನುವಾರ ಬೆಂಗಳೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ.
Published: 18th March 2022 08:46 PM | Last Updated: 18th March 2022 08:46 PM | A+A A-

ನವೀನ್ ಜ್ಞಾನ ಗೌಡರ್ (ಸಂಗ್ರಹ ಚಿತ್ರ)
ಬೆಂಗಳೂರು: ಉಕ್ರೇನ್ ಖಾರ್ಕಿವ್ನಲ್ಲಿ ಮಾರ್ಚ್ 1 ರಂದು ರಷ್ಯಾ ನಡೆಸಿದ ಶೆಲ್ ದಾಳಿಗೆ ಬಲಿಯಾದ ನವೀನ್ ಎಸ್ ಜಿ ಅವರ ಮೃತದೇಹ ಭಾನುವಾರ ಬೆಂಗಳೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ.
ನವೀನ್ ಅವರ ಪಾರ್ಥಿವ ಶರೀರ ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಸಿಎಂ ಬೊಮ್ಮಾಯಿ ಅವರು ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನು ಓದಿ: ಮೋದಿ ಉನ್ನತಮಟ್ಟದ ಸಭೆ: ಉಕ್ರೇನ್ ನಿಂದ ಕನ್ನಡಿಗ ನವೀನ್ ಮೃತದೇಹ ತರಲು ಪ್ರಧಾನಿ ಸೂಚನೆ
ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ನವೀನ್ ಅವರು ಖಾರ್ಕಿವ್ ನಗರದಲ್ಲಿ ಸ್ವಲ್ಪ ಆಹಾರ, ನೀರು ಮತ್ತು ಹಣವನ್ನು ವಿನಿಮಯ ಮಾಡಿಕೊಳ್ಳಲು ತನ್ನ ಬಂಕರ್ನಿಂದ ಹೊರಬಂದಾಗ ರಷ್ಯಾ ನಡೆಸಿದ ಶೆಲ್ ದಾಳಿಗೆ ಬಲಿಯಾಗಿದ್ದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ 22 ವರ್ಷದ ವಿದ್ಯಾರ್ಥಿ ಶೇಖರಪ್ಪ ಗ್ಯಾನಗೌಡ ಅವರ ಎರಡನೇ ಪುತ್ರನಾಗಿದ್ದು, ಅಂತಿಮ ವಿಧಿವಿಧಾನಕ್ಕಾಗಿ ತನ್ನ ಮಗನ ಶವವನ್ನು ಭಾರತಕ್ಕೆ ತರುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಹಾವೇರಿ ಜಿಲ್ಲೆಯ ಚಳಗೇರಿಯಿಂದ ವೈದ್ಯಕೀಯ ವ್ಯಾಸಂಗಕ್ಕಾಗಿ ನವೀನ್ ಉಕ್ರೇನ್ಗೆ ತೆರಳಿದ್ದರು. ಈ ಯುವಕ ಮೃತಪಟ್ಟು 21 ದಿನಗಳಾದ ಬಳಿಕ ಮೃತದೇಹ ತಾಯ್ನಾಡಿಗೆ ಬರುತ್ತಿದೆ. ಸೋಮವಾರ ಸಂಜೆ ಹಾವೇರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.