
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದಲ್ಲಿ ಉತ್ಪತ್ತಿಯಾಗುವ ಎಲ್ಲಾ ತ್ಯಾಜ್ಯವನ್ನು ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡುವ ಮತ್ತು ಅವನ್ನು ಮರುಬಳಕೆ ಮಾಡುವ ಸಾಮರ್ಥ್ಯವನ್ನು ಬೆಂಗಳೂರು ಪಡೆದುಕೊಂಡಿದೆ. ರಾಜರಾಜೇಶ್ವರಿ ನಗರದಲ್ಲಿನ ಒಳಚರಂಡಿ ಸಂಸ್ಕರಣಾ ಘಟಕ ಇತ್ತೀಚಿಗೆ ಕಾರ್ಯಾರಂಭ ಮಾಡಿದೆ. ಅದರಿಂದಾಗಿ ಬೆಂಗಳೂರು ನಗರದ ತ್ಯಾಜ್ಯ ಸಮಸ್ಯೆ ಪರಿಹಾರವಾಗುವ ಸೂಚನೆ ಲಭ್ಯವಾಗಿದೆ.
ಇದನ್ನೂ ಓದಿ: ಕರ್ನಾಟಕ: ಜೈಲಲ್ಲಿ ಮೊಬೈಲ್ ಬಳಕೆ ಮಾಡಿದ್ರೆ.. ಶಿಕ್ಷಾವಧಿ ಏರಿಕೆ..!!; ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ವಿಧೇಯಕ 2022 ಮಂಡನೆ
ನೂತನ ವೃಷಭಾವತಿ ಒಳಚರಂಡಿ ಸಂಸ್ಕರಣಾ ಘಟಕ ದಿನಕ್ಕೆ 15 ಕೋಟಿ ಲೀಟರುಗಳಷ್ಟು ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ನಗರದ ತ್ಯಾಜ್ಯ ಸ್ಯಾಂಕಿ ಟ್ಯಾಕ್ ನಿಂದ ಮಲ್ಲೇಶ್ವರಂ, ಓಕಳಿಪುರಂ, ದೀಪಾಂಜಲಿ ನಗರ, ನಾಯಂಡಹಳ್ಳಿ, ಹೊಸಕೆರೆಹಳ್ಳಿ ಮತ್ತು ಬನಶಂಕರಿ ಮಾರ್ಗದಲ್ಲಿ ಹರಿಯುತ್ತದೆ.
ಇದನ್ನೂ ಓದಿ: ಮಲ್ಪೆಯಲ್ಲಿ ಹಿಜಾಬ್ ಪರ ಗೋಡೆಬರಹ ಪತ್ತೆ: ಅಹಿತಕರ ಘಟನೆ ನಡೆಯದಂತೆ ಭದ್ರತೆ ಹೆಚ್ಚಿಸಿದ ಅಧಿಕಾರಿಗಳು
ವೃಷಭಾವತಿ ಒಳಚರಂಡಿ ಸಂಸ್ಕರಣಾ ಘಟಕ ರಾಷ್ಟ್ರೀಯ ಹಸಿರು ಪ್ರಾಧಿಕಾರದ ನಿಯಮಾವಳಿಗೆ ಅನುಗುಣವಾಗಿ ಕಾರ್ಯಾಚರಿಸುತ್ತಿದೆ. ಅದನ್ನು ಹೊರತು ಪಡಿಸಿ ಹೆಬ್ಬಾಳ ಮತ್ತು ಕೆ ಅಂಡ್ ಸಿ ಕಣಿವೆಯಲ್ಲಿಯೂ ಎರಡು ಒಳಚರಂಡಿ ಸಂಸ್ಕರಣಾ ಘಟಕಗಳು ಇದೇ ವರ್ಷ ಕಾರ್ಯಾಚರಣೆ ಶುರುಮಾಡಿವೆ. ಇವು ಮೂರು ಘಟಕಗಳಿಂದ ದಿನಕ್ಕೆ 6- 7 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.
ಇದನ್ನೂ ಓದಿ: ರಾಜರಾಜೇಶ್ವರಿನಗರ ಮೆಟ್ರೋ ನಿಲ್ದಾಣದಲ್ಲಿ ಮಗುವಿನ ಎದೆಗೆ ಬಡಿದ ಟಿಕೆಟ್ ಗೇಟ್