ರಾಜ್ಯ ಬಜೆಟ್ ಆರ್ಥಿಕತೆಯನ್ನು ಬೆಳವಣಿಗೆಯ ಹಾದಿಗೆ ತರುತ್ತದೆ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಒತ್ತು ನೀಡಲಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ.
Published: 19th March 2022 11:23 AM | Last Updated: 19th March 2022 01:12 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಒತ್ತು ನೀಡಲಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ.
ವಿಧಾನಪರಿಷತ್ತಿನಲ್ಲಿನ ಬಜೆಟ್ ಚರ್ಚೆ ವೇಳೆ ಉತ್ತರಿಸಿದ ಬೊಮ್ಮಾಯಿ ಅವರು, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಬಜೆಟ್ ಸಿದ್ಧಪಡಿಸವ ವೇಳೆ ಸಾಕಷ್ಟು ಆತಂಕಗಳಿದ್ದವು ಎಂದು ಹೇಳಿದ್ದಾರೆ.
''ಎರಡು ವರ್ಷಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಆದಾಯಗಳು ಕಡಿಮೆಯಾಗಿವೆ. ನಾನು ಬಜೆಟ್ ಗಾತ್ರವನ್ನು ಇಳಿಕೆಯಾಗುವ ಆತಂಕವಿತ್ತು. ಆದರೆ, ರಾಜ್ಯದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ರೀತಿಯಲ್ಲಿ ಬಜೆಟ್ ಸಿದ್ಧಪಡಿಸಲು ಪ್ರಾಮುಖ್ಯತೆ ನೀಡಿಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ರಾಜ್ಯದ ಆರ್ಥಿಕತೆಯು ಚೇತರಿಸಿಕೊಂಡಿತು ಮತ್ತು ಸಾಂಕ್ರಾಮಿಕ ರೋಗದ 3ನೇ ಅಲೆಯು ಹೆಚ್ಚಿನ ಪರಿಣಾಮವನ್ನು ಬೀರಲಿಲ್ಲ. "ಜಿಎಸ್ಟಿ, ಅಬಕಾರಿ ಸುಂಕ, ಮುದ್ರಾಂಕ ಶುಲ್ಕ ಮತ್ತು ತೆರಿಗೆಯೇತರ ಆದಾಯಗಳಲ್ಲಿ ಸಂಗ್ರಹಣೆಗಳು ಹೆಚ್ಚಾಗಿವೆ, ಆದರೆ ವಾಹನಗಳ ಹೆಚ್ಚಿನ ಮಾರಾಟವಿಲ್ಲದ ಕಾರಣ ಮೋಟಾರು ವಾಹನ ತೆರಿಗೆ ಸಂಗ್ರಹದಲ್ಲಿ ಮಾತ್ರ ಸುಧಾರಣೆ ಕಂಡುಬಂದಿಲ್ಲ ಎಂದರು.
ಇದನ್ನೂ ಓದಿ: ರಾಜಕೀಯ ಟೀಕೆಗಳು ಮರ್ಯಾದೆಯ ಗೆರೆ ದಾಟಬಾರದು: ಸಿದ್ದರಾಮಯ್ಯ ಅಡ್ಡಕಸುಬಿ ಬಜೆಟ್ ಹೇಳಿಕೆಗೆ ಬಿಜೆಪಿ ಟಾಂಗ್
ಇದೇ ವೇಳೆ ರೈತ ಸಮುದಾಯವನ್ನು ಬಲಪಡಿಸುವ ಮಹತ್ವವನ್ನು ಒತ್ತಿ ಹೇಳಿದ ಮುಖ್ಯಮಂತ್ರಿಗಳು, ರೈತರು ಕೇವಲ ಉತ್ಪಾದಕರಲ್ಲ, ಗ್ರಾಹಕರು ಕೂಡ. “ಶ್ರೀಮಂತರು ಮಾತ್ರ ಆರ್ಥಿಕತೆಗೆ ಕೊಡುಗೆ ನೀಡುತ್ತಾರೆ ಎಂಬ ಗ್ರಹಿಕೆ ಇದೆ. ಆದರೆ ದೇಶದ ಆರ್ಥಿಕತೆಗೆ ಬಲ ನೀಡುವವರು ಕೆಳಭಾಗದಲ್ಲಿರುವವರೇ. ಇದಕ್ಕೆ ಬಜೆಟ್ ಬೆಳವಣಿಗೆ ಆಧಾರಿತವಾಗಿದ್ದು, ರಾಜ್ಯವನ್ನು ಮತ್ತೆ ಆದಾಯ-ಹೆಚ್ಚುವರಿ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪ್ರತಿಭಟನೆ
ಚರ್ಚೆ ವೇಳೆ ಮಾತನಾಡಿದ ಕಾಂಗ್ರೆಸ್ ಸದಸ್ಯರು ಎನ್ಜಿಇಎಫ್ ಮತ್ತು ಮೈಸೂರು ಲ್ಯಾಂಪ್ಗಳಂತಹ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡದಂತೆ ಮನವಿ ಮಾಡಿಕೊಂಡರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು ಆಸ್ತಿ ನಗದೀಕರಣ ಯೋಜನೆಯಡಿ ಯಾವುದೇ ಸಾರ್ವಜನಿಕ ವಲಯದ ಘಟಕದ ಆಸ್ತಿಗಳನ್ನು ಮಾರಾಟ ಮಾಡುವ ಪ್ರಸ್ತಾಪವಿಲ್ಲ ಎಂದು ಹೇಳಿದರು.
ಬಳಿಕ ಹಿಂದಿನ ಬಜೆಟ್ನಲ್ಲಿ ಘೋಷಿಸಿದ್ದ ಹಲವು ಯೋಜನೆಗಳನ್ನು ಕೈಬಿಡಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನೂ ಬೊಮ್ಮಾಯಿ ತಳ್ಳಿಹಾಕಿದರು. 352 ಕಾರ್ಯಕ್ರಮಗಳಲ್ಲಿ 261 ಈಗಾಗಲೇ ಅನುಷ್ಠಾನಗೊಂಡಿದೆ. 87 ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿದ್ದು ನಾಲ್ಕನ್ನು ಮಾತ್ರ ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ದೂರದೃಷ್ಟಿ ಇಲ್ಲದ 'ಅಡ್ಡ ಕಸುಬಿ' ಬಜೆಟ್- ಸಿದ್ದರಾಮಯ್ಯ
ಹೊಸ ಪಿಂಚಣಿ ಯೋಜನೆಯನ್ನು ಕೈಬಿಟ್ಟು ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರು ಪರಿಚಯಿಸುವ ಬೇಡಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಒಪಿಎಸ್ ಅನ್ನು ಮರಳಿ ಜಾರಿಗೆ ತಂದ ರಾಜ್ಯಗಳಲ್ಲಿನ ಮಾದರಿಗಳನ್ನು ಅಧ್ಯಯನ ಮಾಡಿದ ನಂತರ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಮುಖ್ಯಮಂತ್ರಿಗಳ ಉತ್ತರ ಕೇವಲ ಕಣ್ಣಿಗೆ ಮಣ್ಣೆರಚುವಂತಿದೆ ಎಂದು ಹೇಳಿದರು. ನಂತರ ಕಾಂಗ್ರೆಸ್ ಎಂಎಲ್ ಸಿಗಳು ಸಭಾತ್ಯಾಗ ಮಾಡಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, “ಅವರ ಕೆಲವು ಪ್ರಶ್ನೆಗಳಿಗೆ ನಾನಿನ್ನೂ ಉತ್ತರ ನೀಡಿಲ್ಲ. ಆಗಲೇ ಹೊರ ನಡೆಯುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ಪ್ರತಿಪಕ್ಷಗಳಿಗೆ ಯಾವುದೇ ಜವಾಬ್ದಾರಿ ಅಥವಾ ಗಂಭೀರತೆ ಇದೆಯೇ? ಎಂದು ಗರಂ ಆದರು.