ತುಮಕೂರು ಜಿಲ್ಲೆಯ ಪಾವಗಡ ಬಳಿ ಖಾಸಗಿ ಬಸ್ ದುರಂತ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ: ಸಾರಿಗೆ ಸಚಿವ ಶ್ರೀರಾಮುಲು
ಪಾವಗಡ ತಾಲ್ಲೂಕಿನ ಪಳವಳ್ಳಿ ಕಟ್ಟೆ ಬಳಿ ಸಂಭವಿಸಿದ ಖಾಸಗಿ ಬಸ್ ಭೀಕರ ದುರಂತ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
Published: 19th March 2022 11:42 AM | Last Updated: 19th March 2022 01:13 PM | A+A A-

ದುರಂತಕ್ಕೀಡಾದ ಬಸ್ಸು
ತುಮಕೂರು: ಪಾವಗಡ ತಾಲ್ಲೂಕಿನ ಪಳವಳ್ಳಿ ಕಟ್ಟೆ ಬಳಿ ಸಂಭವಿಸಿದ ಖಾಸಗಿ ಬಸ್ ಭೀಕರ ದುರಂತ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಸ್ವಲ್ಪ ಹೊತ್ತಿಗೆ ಮುಂಚೆ ಘಟನೆ ಬಗ್ಗೆ ಮಾಹಿತಿ ಸಿಕ್ಕಿದ್ದು ಸಂಪೂರ್ಣ ವಿವರ ಪಡೆಯುತ್ತಿದ್ದೇನೆ. ಈ ಭಾಗದಲ್ಲಿ ಸರ್ಕಾರಿ ಬಸ್ಸುಗಳ ವ್ಯವಸ್ಥೆ ಸಾರಿಗೆಗೆ ಇಲ್ಲ ಎಂಬ ಮಾಹಿತಿ ಬರುತ್ತಿದ್ದು ಇನ್ನು ಮುಂದೆ ಸರ್ಕಾರಿ ಬಸ್ಸಿನ ವ್ಯವಸ್ಥೆ ಮಾಡುತ್ತೇವೆ. ಖಾಸಗಿ ಬಸ್ಸಿಗೆ ಪರ್ಮಿಟ್ ಕೊಟ್ಟಿರುವ ಆರ್ ಟಿಒ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ರಸ್ತೆಯಲ್ಲಿ ಓಡಾಡುವ ಖಾಸಗಿ ಬಸ್ಸುಗಳು, ಅವುಗಳ ಪರ್ಮಿಟ್, ಅವುಗಳ ಕಾರ್ಯದಕ್ಷತೆ ಬಗ್ಗೆ ಸಂಪೂರ್ಣ ವಿವರ ಪಡೆಯಲು ಅಧಿಕಾರಿಗಳಿಗೆ ಹೇಳಿದ್ದೇನೆ, ಆರ್ ಟಿಒ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೂ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ತುಮಕೂರಿನಲ್ಲಿ ಭೀಕರ ಅಪಘಾತ: ಖಾಸಗಿ ಬಸ್ ಪಲ್ಟಿ ಹೊಡೆದು 8 ಮಂದಿ ದುರ್ಮರಣ, 25ಕ್ಕೂ ಹೆಚ್ಚು ಮಂದಿಗೆ ಗಾಯ
ಈಗ ಪರಿಶೀಲನೆ ನಂತರ ದುರ್ಘಟನೆ ನಡೆದ ಖಾಸಗಿ ಬಸ್ಸಿನ ನೋಂದಣಿ ಸಂಖ್ಯೆ ಕೆ ಎ 06 ಸಿ8933 ಎಂದು ಗೊತ್ತಾಗಿದ್ದು, ವೈ ಎನ್ ಹೊಸಕೋಟೆಯ ಸೀನಪ್ಪ ಎಂಬುವವರಿಗೆ ಸೇರಿದ ಬಸ್ಸಾಗಿದೆ, ವೈ ಎನ್ ಹೊಸಕೋಟೆಯಿಂದ ತುಮಕೂರಿಗೆ ಹೋಗುತ್ತಿದ್ದ ಎಸ್ ವಿಟಿ ಖಾಸಗಿ ಬಸ್ಸು ಎಂದು ತಿಳಿದುಬಂದಿದೆ.
#TumakuruMishap
— Devaraj Hirehalli Bhyraiah (@swaraj76) March 19, 2022
Atleast 6 people mostly college students died 25 injured when a private bus bound2 Pavagada town from Y N Hosakote turned upside down @Palavalli tank.
Over 100 including 30 on top travelling.@XpressBengaluru @AshwiniMS_TNIE @ramupatil_TNIE @vinodkumart5 pic.twitter.com/06LtBXCtTi