ಮಹಾವಿಷ್ಣುವಿನ ಪುರಾತನ ವಿಗ್ರಹ ಕಳ್ಳಸಾಗಣೆ ಯತ್ನ; ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ವಿಫಲಗೊಳಿಸಿದ ಅಧಿಕಾರಿಗಳು
ಮಹಾವಿಷ್ಣುವಿನ ಪುರಾತನ ವಿಗ್ರಹವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಳ್ಳಸಾಗಣೆಗೆ ಯತ್ನಿಸುತ್ತಿದ್ದ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
Published: 21st March 2022 12:16 AM | Last Updated: 21st March 2022 01:59 PM | A+A A-

ಮಹಾವಿಷ್ಣುವಿನ ಪುರಾತನ ವಿಗ್ರಹ
ಬೆಂಗಳೂರು: ಮಹಾವಿಷ್ಣುವಿನ ಪುರಾತನ ವಿಗ್ರಹವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಲೇಷ್ಯಾಗೆ ಕಳ್ಳಸಾಗಣೆಗೆ ಯತ್ನಿಸುತ್ತಿದ್ದ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಕುಂಭಕೋಣಂ ಮೂಲದ 28 ವರ್ಷದ ರಫ್ತುದಾರ ಈ ಪುರಾತನ ವಿಗ್ರಹದ ಕಳ್ಳಸಾಗಣೆಗೆ ಯತ್ನಿಸುತ್ತಿದ್ದ. ಹಿರಿಯ ಕಸ್ಟಮ್ಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, 22.5 ಕೆ.ಜಿ ತೂಲದ ಅತ್ಯಮೂಲ್ಯ ವಿಗ್ರಹ ಕೆಲವು ನೂರು ವರ್ಷಗಳಷ್ಟು ಹಳೆಯದೆಂದು ಅಂದಾಜಿಸಲಾಗಿದ್ದು, ಇದನ್ನು ಅಂತಾರಾಷ್ಟ್ರೀಯ ಕಾರ್ಗೋ ಟರ್ಮಿನಲ್ ನಲ್ಲಿ ವಶಕ್ಕೆ ಪಡೆಯಲಾಗಿದೆ.
ಕಸ್ಟಮ್ಸ್ ಗುಪ್ತಚರ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಕಾರ್ಗೋ ಕೇಂದ್ರಕ್ಕೆ ಟ್ರಕ್ ಮೂಲಕ ಈ ವಿಗ್ರಹವನ್ನು ತಲುಪಿಸಲಾಗಿದೆ ಎಂದು ತಿಳಿದುಬಂದಿದೆ.
ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿ ಇದನ್ನು ಹೂಡ್ ವಿಂಕ್ ಗೆ ನ್ಯೂ ಬ್ರಾನ್ಜ್ ಆಂಟಿಕ್ ಫಿನಿಷ್ ಐಡಲ್ ಎಂದು ನಮೂದಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುರಾತನ ವಸ್ತುಗಳನ್ನು ರಫ್ತು ಮಾಡುವುದಕ್ಕೆ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಆದ್ದರಿಂದ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳುವುದಕ್ಕೆ ಸುಲಭವಾಗುವ ನಿಟ್ಟಿನಲ್ಲಿ ಈ ವಿಗ್ರಹವನ್ನು ಹೊಸದಾಗಿ ತಯಾರಿಸಲಾದ ವಿಗ್ರಹ ಎಂದು ನಮೂದಿಸಲಾಗಿತ್ತು.