ಮಾರಿಕಾಂಬ ಜಾತ್ರೆ: ಅನ್ಯಕೋಮಿನವರಿಗೆ ಮಳಿಗೆ ನೀಡದ್ದಕ್ಕೆ ವಿವಾದ, ಆರೋಪ ನಿರಾಕರಿಸಿದ ಅಧಿಕಾರಿಗಳು
ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ ಮಂಗಳವಾರದಿಂದ ಆರಂಭವಾಗಲಿದ್ದು, ಈ ನಡುವೆ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ಮಳಿಗೆ ನೀಡಲಾಗುತ್ತಿಲ್ಲ ಮಾತುಗಳು ಕೇಳಿ ಬಂದಿದ್ಗು, ಈ ಆರೋಪವನ್ನು ದೇವಾಲಯದ ಸಮಿತಿ ಸದಸ್ಯರು ನಿರಾಕರಿಸಿದ್ದಾರೆ.
Published: 21st March 2022 10:24 AM | Last Updated: 21st March 2022 10:24 AM | A+A A-

ಸಂಗ್ರಹ ಚಿತ್ರ
ಶಿವಮೊಗ್ಗ: ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ ಮಂಗಳವಾರದಿಂದ ಆರಂಭವಾಗಲಿದ್ದು, ಈ ನಡುವೆ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ಮಳಿಗೆ ನೀಡಲಾಗುತ್ತಿಲ್ಲ ಮಾತುಗಳು ಕೇಳಿ ಬಂದಿದ್ಗು, ಈ ಆರೋಪವನ್ನು ದೇವಾಲಯದ ಸಮಿತಿ ಸದಸ್ಯರು ನಿರಾಕರಿಸಿದ್ದಾರೆ.
ವಿವಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಅವರು, ನಿರ್ದಿಷ್ಟ ಸಮುದಾಯವನ್ನು ಆಚರಣೆಗಳಿಂದ ಹೊರಗಿಡಲಾಗಿದೆ ಎಂಬ ವದಂತಿಗಳಿಗೆ ಜನರು ಕಿವಿಗೊಡಬಾರದು. ಜಾತ್ರೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ಮುಸ್ಲಿಂ ಸಮುದಾಯದ ಹಲವಾರು ಬಾಂಧವರು ಪಾಲ್ಗೊಳ್ಳುತ್ತಿದ್ದಾರೆ, ಮುಸ್ಲಿಮರು ಜಾತ್ರೆಗೆ ಅಕ್ಕಿ ಮತ್ತು ಇತರ ಅಗತ್ಯ ಉತ್ಪನ್ನಗಳನ್ನು ತಂದು ಕೊಡುತ್ತಿದ್ದಾರೆ. ಹೀಗಾಗಿ ಅನಗತ್ಯ ಗೊಂದಲ ಬೇಡ ಸೃಷ್ಟಿಯಾಗಬಾರದು ಎಂದು ಹೇಳಿದ್ದಾರೆ.
ಇದೇ ವೇಳೆ ಹಿಂದೂ ಪರ ಸದಸ್ಯರು ಮಳಿಗೆ ಹಂಚಿಕೆಗೆ ಟೆಂಡರ್ ಪಡೆದಿರುವುದರಿಂದ ಅಲ್ಪಸಂಖ್ಯಾತ ಸಮುದಾಯದವರಿಗೆ ಮಳಿಗೆಗಳನ್ನು ಹಾಕಲು ಅವಕಾಶ ನೀಡಲಾಗುತ್ತಿಲ್ಲ ಎಂದ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಡರ್ ಅನ್ನು ನಾಗರಾಜ್ ಎಂಬುವವರು ಪಡೆದಿದ್ದು, ಯಾರಿಗೆ ಮಳಿಗೆಗಳನ್ನು ನೀಡಬೇಕೆಂದು ಅವರು ನಿರ್ಧರಿಸುತ್ತಾರೆ. ಟೆಂಡರ್ದಾರರ ನಿರ್ಧಾರದಲ್ಲಿ ಜಾತ್ರಾ ಸಮಿತಿ ಮಧ್ಯಪ್ರವೇಶಿಸುವುದಿಲ್ಲ. ಆದರೆ, ದೇವಸ್ಥಾನದ ಸುತ್ತ ಯಾವುದೇ ಗೊಂದಲಗಳು ನಿರ್ಮಾಣವಾಗಬಾರದು ಎಂಬ ಷರತ್ತು ವಿಧಿಸಲಾಗಿದೆ ಎಂದು ತಿಳಿಸಿದರು.
ಹಲವು ವರ್ಷಗಳಿಂದ ಎಲ್ಲಾ ಧರ್ಮದ ಜನರು ಜಾತ್ರೆಯಲ್ಲಿ ಮಳಿಗೆಗಳನ್ನು ಹಾಕುತ್ತಾ ಬಂದಿದ್ದಾರೆ. ಮಾರಿಕಾಂಬಾ ಜಾತ್ರೆಯು ಎಲ್ಲಾ ಧರ್ಮದ ಜನರನ್ನು ಸ್ವಾಗತಿಸುತ್ತದೆ ಮತ್ತು ಆದ್ದರಿಂದ ಇಂತಹ ವದಂತಿಗಳಿಗೆ ಜನರು ಕಿವಿಗೊಡಬಾರದು. ಜಾತ್ರೆ ಶಾಂತಿಯುತವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು' ಎಂದು ಮನವಿ ಮಾಡಿದರು.
ಈ ಹಿಂದೆ ಒಬ್ಬರು ಟೆಂಡರ್ ಪಡೆದಿದ್ದರು, ಆದರೆ, ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಟೆಂಡರ್ ರದ್ದುಪಡಿಸಿಕೊಂಡಿದ್ದರು. ಬಳಿಕ ನಾಗರಾಜ್ ಎಂಬುವವರು ಟೆಂಡರ್ ಪಡೆದಿದ್ದರು. ಟೆಂಡರ್ ವಿಚಾರದಲ್ಲಿ ಸುತ್ತಮುತ್ತ ಎದುರಾಗುವ ಸಮಸ್ಯೆಗಳೇನು ಎಂಬುದು ಇದೀಗ ತಿಳಿದುಬಂದಿದೆ. ಭವಿಷ್ಯದಲ್ಲಿ ಗೊಂದಲಗಳು ಸೃಷ್ಟಿಯಾಗದಂತೆ ಟೆಂಡರ್ ಪ್ರಕ್ರಿಯೆ ಮುಂದುವರೆಸಲಾಗುತ್ತದೆ ಎಂದು ಹೇಳಿದರು.