ಬೆಂಗಳೂರು: ಕೊಳೆತು ಗಬ್ಬೆದ್ದು ನಾರುತ್ತಿರುವ ವಿಭೂತಿಪುರ ಕೆರೆ; ನಿವಾಸಿಗಳ ಆಕ್ರೋಶ
ಒಂದು ಕಾಲದಲ್ಲಿ ನೀರು ತುಂಬಿ ವಲಸೆ ಹಕ್ಕಿಗಳು ಹಾಗೂ ಸುಂದರವಾದ ಹೂವುಗಳಿಗೆ ನೆಲೆಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ (ಹಳೆ ವಿಮಾನ ನಿಲ್ದಾಣದ ಆಚೆ) ವಿಭೂತಿ ಪುರ ಕೆರೆ ಈಗ ಸರಿಯಾದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಒಂದು ಕಡೆ ಮಾತ್ರ ನೀರು ನಿಂತಿದ್ದು, ಉಳಿದೆಲ್ಲಾ ಕಡೆಗಳಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ.
Published: 21st March 2022 02:04 PM | Last Updated: 21st March 2022 02:06 PM | A+A A-

ಗಿಡಗಂಟೆಗಳಿಂದ ಗಬ್ಬೆದು ನಾರುತ್ತಿರುವ ವಿಭೂತಿ ಪುರ ಕೆರೆ
ಬೆಂಗಳೂರು: ಒಂದು ಕಾಲದಲ್ಲಿ ನೀರು ತುಂಬಿ ವಲಸೆ ಹಕ್ಕಿಗಳು ಹಾಗೂ ಸುಂದರವಾದ ಹೂವುಗಳಿಗೆ ನೆಲೆಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ (ಹಳೆ ವಿಮಾನ ನಿಲ್ದಾಣದ ಆಚೆ) ವಿಭೂತಿ ಪುರ ಕೆರೆ ಈಗ ಸರಿಯಾದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಒಂದು ಕಡೆ ಮಾತ್ರ ನೀರು ನಿಂತಿದ್ದು, ಉಳಿದೆಲ್ಲಾ ಕಡೆಗಳಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ.
ಗತ ವೈಭವದ ದಿನಗಳಲ್ಲಿ ಕೆರೆಯನ್ನು ನೋಡಿದ ವಾಯುವಿಹಾರಿಗಳು, ಅದರ ಈಗ ಸ್ಥಿತಿ ಕಂಡು ಆಕ್ರೋಶಗೊಂಡಿದ್ದಾರೆ.
ಕೆರೆಯ ತುಂಬೆಲ್ಲಾ ಗಿಡಗಂಟಿಗಳು ನಾಯಿಕೊಡೆಗಳಂತೆ ಬೆಳೆದಿವೆ. ಕೆರೆಯ ಒಂದು ತುದಿಯಲ್ಲಿರುವ ಉದ್ಯಾನವನ ಶಿಥಿಲಾವಸ್ಥೆಯಲ್ಲಿದೆ. ಇಲ್ಲಿ ಮಕ್ಕಳಿಗಾಗಿ ಇದ್ದ ಉಪಕರಣಗಳು ಮುರಿದು ಬಿದ್ದಿವೆ.
ಒಂದು ಕಾಲದಲ್ಲಿ 43 ಎಕರೆಗೆ ಚಾಚಿಕೊಂಡಿದ್ದ ಕೆರೆ ಗಾತ್ರ ಇದೀಗ ಒತ್ತುವರಿಯಿಂದಾಗಿ ಕುಗ್ಗಿದೆ. ಕೆರೆಯ ಸುತ್ತಲಿನ ಮನೆಗಳಿಂದ ಸಂಸ್ಕರಿಸದ ಚರಂಡಿ ನೀರನ್ನು ಹರಿಸುತ್ತಿರುವುದರಿಂದ ಅದು ಹಾಳಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ನಿವಾಸಿಯೊಬ್ಬರು ದು:ಖ ವ್ಯಕ್ತಪಡಿಸಿದ್ದಾರೆ.
ಅನೇಕ ನ್ಯೂನತೆಗಳ ನಡುವೆಯೂ ಸುಮಾರು 500 ಜನರು ವಿಶೇಷವಾಗಿ ಇಲ್ಲಿನ ಅಪಾರ್ಟ್ ಮೆಂಟ್ ನಿವಾಸಿಗಳು ಕೆರೆಯ ಸುತ್ತ ಇರುವ ಟ್ರ್ಯಾಕ್ ಗಳಲ್ಲಿ ವಾಕ್ ಅಥವಾ ಜಾಗಿಂಗ್ ಮಾಡಲು ಬರುತ್ತಾರೆ. ವಾರಾಂತ್ಯಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಈ ಕೆರೆಯ ಪುನಶ್ಚೇತನಕ್ಕಾಗಿ 3 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಆದರೆ, ಅದು ಈಗ ಭಯಾನಕ ಸ್ವರೂಪದಲ್ಲಿದೆ. ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಶಂಕುಸ್ಥಾಪನೆ ಹಾಗೂ ಅದರ ಸುತ್ತ ಕಾಣೆಯಾಗಿರುವ ಜಾಗದಲ್ಲಿ ಟ್ರ್ಯಾಕ್ ನಿರ್ಮಿಸಲು ಕೆಲ ತಿಂಗಳ ಹಿಂದೆ ಕಾರ್ಪೊರೇಟರ್ಗಳು ಚಾಲನೆ ನೀಡಿದ್ದರು.
ನಗರದಲ್ಲಿ ಮೂಲಸೌಕರ್ಯ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದ್ದರೆ, ಇಲ್ಲಿ ಏಕೆ ಅದನ್ನು ಮಾಡುತ್ತಿಲ್ಲ. ಇದು ಇಲ್ಲಿನ ಅನೇಕ ನಿವಾಸಿಗಳಿಗೆ ದೊಡ್ಡ ತಾರತಮ್ಯ ಮಾಡಲಿದೆ ಎಂದು ಖಾಸಗಿ ಸಂಸ್ಥೆಯೊಂದರ ನಿವೃತ್ತ ಸಿಇಒ ಒಬ್ಬರು ಹೇಳುತ್ತಾರೆ.
ಗಂಗಾ ಕೆರೆ ಶುದ್ದೀಕರಣಗೊಳಿಸುತ್ತಿರುವಾಗ ವಿಭೂತಿಕೆರೆಯನ್ನು ಏಕೆ ಸ್ವಚ್ಛಗೊಳಿಸುತ್ತಿಲ್ಲ? ಇಚ್ಚಾಶಕ್ತಿಯ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ ಎಂದು ಹುಬ್ಬಳ್ಳಿಯ ನಿವಾಸಿ ಶ್ರಿನಿವಾಸ್ ಕುಲಕರ್ಣಿ ವ್ಯವಸ್ಥೆ ಬಗ್ಗೆ ಪ್ರಶ್ನಿಸುತ್ತಾರೆ.