ಡಾ. ಶಿವರಾಮ ಕಾರಂತ ಬಡಾವಣೆಗೆ ಟೆಂಡರ್ ಕರೆದ ಬಿಡಿಎ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೋಮವಾರ ಅಂತಿಮವಾಗಿ ಡಾ.ಕೆ.ಶಿವರಾಮ ಕಾರಂತ ಲೇಔಟ್‌ಗೆ 1,865.34 ಕೋಟಿ ರೂ.ಗೆ ಟೆಂಡರ್ ಕರೆದಿದೆ. ಲೇಔಟ್‌ನ ಒಂಬತ್ತು ವಲಯಗಳಿಗೆ ಒಂಬತ್ತು ಪ್ರತ್ಯೇಕ ಗುತ್ತಿಗೆಗಳ ರೂಪದಲ್ಲಿ ಟೆಂಡರ್‌ಗಳನ್ನು ನೀಡಲಾಗಿದೆ.
Published: 22nd March 2022 09:45 AM | Last Updated: 22nd March 2022 09:45 AM | A+A A-

ಕಾರಂತ ಲೇಔಟ್
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೋಮವಾರ ಅಂತಿಮವಾಗಿ ಡಾ.ಕೆ.ಶಿವರಾಮ ಕಾರಂತ ಲೇಔಟ್‌ಗೆ 1,865.34 ಕೋಟಿ ರೂ.ಗೆ ಟೆಂಡರ್ ಕರೆದಿದೆ. ಲೇಔಟ್‌ನ ಒಂಬತ್ತು ವಲಯಗಳಿಗೆ ಒಂಬತ್ತು ಪ್ರತ್ಯೇಕ ಗುತ್ತಿಗೆಗಳ ರೂಪದಲ್ಲಿ ಟೆಂಡರ್‌ಗಳನ್ನು ನೀಡಲಾಗಿದೆ.
ಈ ಲೇಔಟ್ ಬಿಡಿಎನ ಎರಡನೇ ದೊಡ್ಡದಾದ ಬಡಾವಣೆಯಾಗಿದೆ. 3,546 ಎಕರೆ ಮತ್ತು 12 ಗುಂಟೆಗಳಲ್ಲಿ 28,000 ಸೈಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದು ದೊಡ್ಡಬಳ್ಳಾಪುರ ಮತ್ತು ಹೆಸರಘಟ್ಟ ನಡುವಿನ 17 ಹಳ್ಳಿಗಳಿಗೆ ವ್ಯಾಪಿಸಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬಿಡಿಎ ಆಯುಕ್ತ ರಾಜೇಶ್ ಗೌಡ, ನಿವೇಶನ ರಚನೆ, ರಸ್ತೆಗಳ ನಿರ್ಮಾಣ, ರಸ್ತೆ ಬದಿಯ ಚರಂಡಿಗಳು, ನೀರು ಸರಬರಾಜು, ಭೂಗತ ಒಳಚರಂಡಿ, ಅಡ್ಡ ಚರಂಡಿ ಕಾಮಗಾರಿಗಳು, ಮಳೆನೀರು ಚರಂಡಿಗಳು, ಮಳೆ ನೀರು ಕೊಯ್ಲು ಮತ್ತು ಪ್ರತಿ ವಲಯದಲ್ಲಿ ವಿದ್ಯುತ್ ಕಾಮಗಾರಿಗಳನ್ನು ಈ ಟೆಂಡರ್ ಒಳಗೊಂಡಿದೆ. ಕಾರ್ಯ ಆದೇಶ ನೀಡಿದ ನಂತರ 11 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಒಪ್ಪಂದಗಳ ವೆಚ್ಚ 147.98 ಕೋಟಿ ಮತ್ತು 274.87 ಕೋಟಿ ರೂ. ನಡುವೆ ಇರಲಿದೆ. ಟೆಂಡರ್ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನವಾಗಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಟೆಂಡರ್ ದಾಖಲೆ ತಿಳಿಸಿದೆ. ಬಡಾವಣೆಯಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳನ್ನು ಬಿಡಿಎ ಕಾಲಕಾಲಕ್ಕೆ ನೆಲಸಮಗೊಳಿಸಿದೆ.