ಬೆಂಗಳೂರಿನ ರಸ್ತೆಗಳು ವಾಹನಗಳಿಗೆ ಸೂಕ್ತ, ಪಾದಚಾರಿಗಳಿಗೆ ಅಲ್ಲ: ತಜ್ಞರು
ಹೆಬ್ಬಾಳದ ಬಳ್ಳಾರಿ ರಸ್ತೆಯಲ್ಲಿ ನಡೆದ 14 ವರ್ಷದ ಬಾಲಕಿಯ ಸಾವು ಪ್ರಕರಣ ಬೆಂಗಳೂರಿನ ರಸ್ತೆಗಳಿಗೆ ವಾಹನಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಪಾದಚಾರಿಗಳಿಗೆ ಅಲ್ಲ ಎಂಬ ಪ್ರಶ್ನೆಯನ್ನು ನಾಗರಿಕರು ಹಾಗೂ ತಜ್ಞರಲ್ಲಿ ಹುಟ್ಟು ಹಾಕಿದೆ.
Published: 22nd March 2022 10:54 AM | Last Updated: 22nd March 2022 01:16 PM | A+A A-

14 ವರ್ಷದ ಬಾಲಕಿ ಅಪಘಾತಕ್ಕೀಡಾದ ಹೆಬ್ಬಾಳದ ಬಳ್ಳಾರಿ ರಸ್ತೆ
ಬೆಂಗಳೂರು: ಹೆಬ್ಬಾಳದ ಬಳ್ಳಾರಿ ರಸ್ತೆಯಲ್ಲಿ ನಡೆದ 14 ವರ್ಷದ ಬಾಲಕಿಯ ಸಾವು ಪ್ರಕರಣ ಬೆಂಗಳೂರಿನ ರಸ್ತೆಗಳಿಗೆ ವಾಹನಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಪಾದಚಾರಿಗಳಿಗೆ ಅಲ್ಲ ಎಂಬ ಪ್ರಶ್ನೆಯನ್ನು ನಾಗರಿಕರು ಹಾಗೂ ತಜ್ಞರಲ್ಲಿ ಹುಟ್ಟು ಹಾಕಿದೆ.
ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಮತ್ತು ಸಾಮಾನ್ಯ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಲ್ಲಿ ಅಧಿಕಾರಿಗಳಲ್ಲಿ ಜವಾಬ್ದಾರಿ ಗಂಭೀರತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಸ್ಕೈ ವಾಕ್ ಗಳು ಮತ್ತು ಸಬ್ ವೇ ಗಳು ಸುರಕ್ಷಿತವಾಗಿಲ್ಲ ಅಥವಾ ಅವುಗಳ ಉದ್ದೇಶ ವಿಫಲತೆಯಿಂದ ಗ್ರೇಡ್ ನಲ್ಲಿ ರಸ್ತೆ ದಾಟಲು ಬರುತ್ತಿರುವುದಾಗಿ ಅನೇಕ ಪಾದಚಾರಿಗಳು ಹೇಳುತ್ತಾರೆ. ಮಳೆಯ ನೀರು ಅಂಡರ್ಪಾಸ್ಗೆ ನುಗ್ಗಿದೆ ಮತ್ತು ನೀರು ತುಂಬಿದ್ದರಿಂದ ಸೋರಿಕೆಯೂ ಇದೆ ಎಂದು ಬಿಬಿಎಂಪಿ ಎಂಜಿನಿಯರ್ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭೀಕರ ಅಪಘಾತ: ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಶಾಲಾ ವಿದ್ಯಾರ್ಥಿನಿ ಸ್ಥಳದಲ್ಲೇ ದುರ್ಮರಣ
ಭೂಗತ ಚರಂಡಿ ಕಾಮಗಾರಿ ನಡೆಸಿ ಹೂಳು ತೆರವು ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೈಕೋರ್ಟ್ ಹಾಗೂ ಸರಕಾರದ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ ಅದು ನಡೆದಂತೆ ಕಾಣುತ್ತಿಲ್ಲ. ಅಲ್ಲದೆ, ಬಿಬಿಎಂಪಿಯು ಯಾವುದೇ ಪಾಠ ಕಲಿತಿಲ್ಲ ಮತ್ತು ಅಂಡರ್ಪಾಸ್ಗಳ ಕೆಳಗಿನ ಮಳೆನೀರು ಕೊಯ್ಲು ಹೊಂಡಗಳನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ತನ್ನ ಕೆಲಸವನ್ನು ಮಾಡಿಲ್ಲ, ಇದರಿಂದ ನೀರು ನಿಲ್ಲುವುದಿಲ್ಲ ಎಂದು ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞರೊಬ್ಬರು ಹೇಳಿದರು.
ವ್ಯವಸ್ಥೆಯಲ್ಲಿ ಜನರಿಗೆ ಮಾನವೀಯತೆಯ ಅಗತ್ಯವಿದೆ. ಈ ಘಟನೆಯು ವಿನ್ಯಾಸದ ಅಸಮರ್ಪಕ ಅನುಷ್ಠಾನ, ಚರಂಡಿಗಳ ಅಸಮರ್ಪಕ ಡಿ-ಸಿಲ್ಟಿಂಗ್ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಯನ್ನು ಮತ್ತೊಮ್ಮೆ ತೋರಿಸಿದೆ ಎಂದು ನಗರ ತಜ್ಞ ವಿ. ರವಿಚಂದ್ರನ್ ತಿಳಿಸಿದರು.
ಜನಾಗ್ರಹ ನಾಗರಿಕ ಸಂಘಟನೆ ಮುಖ್ಯಸ್ಥ ಶ್ರೀನಿವಾಸ ಅಲವಿಲ್ಲಿ ಮಾತನಾಡಿ, ವಾಹನಗಳಿಗೆ ತಕ್ಕಂತೆ ರಸ್ತೆಗಳ ವಿನ್ಯಾಸ ಪ್ರಮುಖ ತೊಂದರೆಯಾಗಿದೆ. ಸ್ಕೈಕ್ವಾಕ್ಗಳು ಮತ್ತು ಅಂಡರ್ಪಾಸ್ಗಳು ಜನರನ್ನು ಬೀದಿಗಳಿಂದ ತಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.