ಬಾಗಲಕೋಟೆ: ಉರುಸ್ ವೇಳೆ ಆಹಾರ ಸೇವಿಸಿ 22 ಮಕ್ಕಳು ಸೇರಿದಂತೆ 48 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಬಾಗಲಕೋಟೆ ತಾಲ್ಲೂಕಿನ ದೊಮನಲ್ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ 22 ಮಕ್ಕಳು ಸೇರಿದಂತೆ ಕನಿಷ್ಠ 48 ಮಂದಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

Published: 23rd March 2022 09:24 AM  |   Last Updated: 23rd March 2022 11:34 AM   |  A+A-


At least 12 children fell ill after consuming food served at Yamunarappa Urus in Domanal village of Bagalkot on Wednesday

ಉರುಸ್ ನಲ್ಲಿ ಆಹಾರ ಸೇವಿಸಿ ಅಸ್ವಸ್ಥಕ್ಕೀಡಾದವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು

Online Desk

ಬಾಗಲಕೋಟೆ: ಬಾಗಲಕೋಟೆ ತಾಲ್ಲೂಕಿನ ದೊಮನಲ್ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ 22 ಮಕ್ಕಳು ಸೇರಿದಂತೆ ಕನಿಷ್ಠ 48 ಮಂದಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಆರಂಭದಲ್ಲಿ 80 ಜನರು ಅಸ್ವಸ್ಥಕ್ಕೀಡಾಗಿದ್ದು ವರದಿಯಾಯಿತು. ನಂತರ ಆರೋಗ್ಯ ಸಿಬ್ಬಂದಿ ಕಾರ್ಯಪ್ರವೃತ್ತರಾದ ನಂತರ ಸುಮಾರು 50 ಮಂದಿ ಅಸ್ವಸ್ಥಕ್ಕೊಳಗಾಗಿದ್ದು ಕಂಡುಬಂದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. 

ದೊಮನಲ್ ಗ್ರಾಮದ ಯಮುನರಪ್ಪ ಉರುಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿದ ಒಂದು ಗಂಟೆಯ ನಂತರ ಈ ಘಟನೆ ಸಂಭವಿಸಿದೆ. ಹಲವರು ವಾಂತಿ-ಭೇದಿ ಮಾಡಲು ಆರಂಭಿಸಿದರು. ಕೂಡಲೇ ಗ್ರಾಮಸ್ಥರು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿ ಕ್ಷಣಮಾತ್ರದಲ್ಲಿಯೇ ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು.

ಅಸ್ವಸ್ಥಕ್ಕೀಡಾಗಿರುವ 48 ಮಂದಿಯಲ್ಲಿ 22 ಮಕ್ಕಳಾಗಿದ್ದಾರೆ. 12 ಮಂದಿ ಮಹಿಳೆಯರಾಗಿದ್ದು 10 ಮಂದಿ ಹಿರಿಯ ವೃದ್ಧರಾಗಿದ್ದಾರೆ. ಎಲ್ಲರೂ ಅಪಾಯದಿಂದ ಪಾರಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಜಿಲ್ಲಾಸ್ಪತ್ರೆ ತಿಳಿಸಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ ಜಯಶ್ರೀ ಎಮ್ಮಿ, ಅಸ್ವಸ್ಥಕ್ಕೀಡಾದವರ ಚಿಕಿತ್ಸೆಗೆ ಸಾಕಷ್ಟು ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಎಲ್ಲರೂ ಆರೋಗ್ಯದಲ್ಲಿ ಸ್ಥಿರವಾಗಿದ್ದು ಸುಧಾರಿಸುತ್ತಿದ್ದಾರೆ ಎಂದರು.

ಉರುಸ್ ನಲ್ಲಿ ನೀಡಲಾದ ಆಹಾರ ಮತ್ತು ನೀರಿನ ಸ್ಯಾಂಪಲ್ ಗಳನ್ನು ಪಡೆದುಕೊಂಡಿದ್ದೇವೆ. ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಎರಡು ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗಿದ್ದು ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿಯ ತಂಡವನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು. 


Stay up to date on all the latest ರಾಜ್ಯ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp