ರಾಜ್ಯದಲ್ಲೇ ಮೊದಲು: ಚನ್ನಪಟ್ಟಣ ಆಟಿಕೆಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಿಕೊಟ್ಟ ಕೆಎಸ್ಆರ್ ರೈಲು ನಿಲ್ದಾಣ!
ಪ್ರಸಿದ್ಧ ಚನ್ನಪಟ್ಟಣದ ಮರದ ಆಟಿಕೆಗಳನ್ನು ಮಾರಾಟ ಮಾಡುವ ರಾಜ್ಯದ ಮೊದಲ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಎಸ್‌ಆರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಬೆಂಗಳೂರು ರೈಲು ನಿಲ್ದಾಣ ಪಾತ್ರವಾಗಲಿದೆ.
Published: 24th March 2022 06:35 PM | Last Updated: 24th March 2022 07:28 PM | A+A A-

ಚನ್ನಪಟ್ಟಣ ಆಟಿಕೆಗಳು
ಬೆಂಗಳೂರು: ಪ್ರಸಿದ್ಧ ಚನ್ನಪಟ್ಟಣದ ಮರದ ಆಟಿಕೆಗಳನ್ನು ಮಾರಾಟ ಮಾಡುವ ರಾಜ್ಯದ ಮೊದಲ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಎಸ್‌ಆರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಬೆಂಗಳೂರು ರೈಲು ನಿಲ್ದಾಣ ಪಾತ್ರವಾಗಲಿದೆ.
ಶುಕ್ರವಾರದಿಂದ ಅಂದರೆ ಇದೇ ಮಾರ್ಚ್ 25ರಿಂದ ಪ್ರಾಯೋಗಿಕವಾಗಿ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಚನ್ನಪಟ್ಟಣದ ಆಟಿಕೆಗಳನ್ನು ಮಾರಾಟ ಮಾಡಲು ಸ್ಟಾಲ್ (ಅಂಗಡಿಗಳು) ಅನ್ನು ನಿರ್ಮಿಸಲಾಗಿದ್ದು, ಇದು ಮುಂದಿನ ಹದಿನೈದು ದಿನಗಳ ಕಾಲ ಪ್ರಯೋಗಿಕ ಚಾಲನೆಯಲ್ಲಿರಲಿದೆ ಎಂದು ಹೇಳಲಾಗಿದೆ.
ಚನ್ನಪಟ್ಟಣ ಆಟಿಕೆಗಳು ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ ಪಟ್ಟಣದಲ್ಲಿ ತಯಾರಿಸಲಾದ ವಿಶೇಷ ಮರದ ಆಟಿಕೆಗಳು ಮತ್ತು ಗೊಂಬೆಗಳಾಗಿವೆ ಮತ್ತು ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಅನ್ನು ಹೊಂದಿವೆ.
ಈ ಬಗ್ಗೆ ಮಾಹಿತಿ ನೀಡಿರುವ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ಅವರು, "2022-23 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ 'ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯ' ಭಾಗವಾಗಿ ಇದನ್ನು ಪ್ರಾರಂಭಿಸಲಾಗುತ್ತಿದೆ. ಇದು ರೈಲು ನಿಲ್ದಾಣಗಳನ್ನು ಸಾಂಪ್ರದಾಯಿಕವಾಗಿ ಪ್ರದರ್ಶಿಸುವ ಸ್ಥಳಗಳಾಗಿ ಬಳಸಿಕೊಳ್ಳಲು ಪ್ರಸ್ತಾಪಿಸಿದೆ. ಕರಕುಶಲ ವಸ್ತುಗಳು, ಜವಳಿ ಮತ್ತು ಭೌಗೋಳಿಕ ಸೂಚಕ (GI) ಟ್ಯಾಗ್ ಮಾಡಿದ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹಕವಾಗಿದೆ ಎಂದು ಹೇಳಿದ್ದಾರೆ.
ಸ್ಥಳೀಯ ಕಾರ್ಮಿಕರು ಮತ್ತು ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಕೆಎಸ್‌ಆರ್ ಬೆಂಗಳೂರಿನಂತಹ ಬೃಹತ್ ಜನಸಂದಣಿಯನ್ನು ಹೊಂದಿರುವ ನಿಲ್ದಾಣಗಳು ಅಂತಹ ಉತ್ಪನ್ನಗಳ ಮಾರುಕಟ್ಟೆಗೆ ಸೂಕ್ತವಾದ ವೇದಿಕೆಯಾಗಿವೆ ಎಂದು ಅವರು ಹೇಳಿದರು.
ಅಂತೆಯೇ ಭವಿಷ್ಯದಲ್ಲಿ, ಕರ್ನಾಟಕ ಮತ್ತು ಗೋವಾದಲ್ಲಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಇತರೆ ನಿಲ್ದಾಣಗಳಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು SWR ಯೋಜಿಸಿದೆ. ಸ್ಟಾಲ್ ನಿರ್ವಹಣೆಯ ಟೆಂಡರ್ ಅನ್ನು ಚನ್ನಪಟ್ಟಣದ ಆಟಿಕೆ ತಯಾರಕ ವಿ ಪ್ರಕಾಶ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.