ಮೇಕೆದಾಟು ಯೋಜನೆ: ತಮಿಳುನಾಡು ನಿರ್ಣಯದ ವಿರುದ್ಧ ರಾಜ್ಯದಿಂದ ಸರ್ವಾನುಮತದ ಖಂಡನಾ ನಿರ್ಣಯ
ಕಾವೇರಿ ನದಿಗೆ ಅಡ್ಡಲಾಗಿರುವ ಮೇಕೆದಾಟು ಜಲಾಶಯ ಯೋಜನೆಗೆ ಮುಂದಾದ ಕರ್ನಾಟಕದ ನಿರ್ಧಾರದ ವಿರುದ್ಧ ತಮಿಳುನಾಡು ವಿಧಾನಸಭೆ ಸೋಮವಾರ ನಿರ್ಣಯವೊಂದನ್ನು ಮಂಡಿಸಿದ್ದು, ಈ ನಿರ್ಣಯದ ವಿರುದ್ಧ ರಾಜ್ಯ ವಿಧಾನಸಭೆಯು ಗುರುವಾರ ಖಂಡನಾ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
Published: 25th March 2022 09:48 AM | Last Updated: 25th March 2022 12:05 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕಾವೇರಿ ನದಿಗೆ ಅಡ್ಡಲಾಗಿರುವ ಮೇಕೆದಾಟು ಜಲಾಶಯ ಯೋಜನೆಗೆ ಮುಂದಾದ ಕರ್ನಾಟಕದ ನಿರ್ಧಾರದ ವಿರುದ್ಧ ತಮಿಳುನಾಡು ವಿಧಾನಸಭೆ ಸೋಮವಾರ ನಿರ್ಣಯವೊಂದನ್ನು ಮಂಡಿಸಿದ್ದು, ಈ ನಿರ್ಣಯದ ವಿರುದ್ಧ ರಾಜ್ಯ ವಿಧಾನಸಭೆಯು ಗುರುವಾರ ಖಂಡನಾ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
“ಯೋಜನೆಯು ತಮಿಳುನಾಡಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಿದ್ದರೂ, ತಮಿಳುನಾಡು ಯೋಜನೆಯನ್ನು ವಿರೋಧಿಸುವ ನಿರ್ಣಯವನ್ನು ಅಂಗೀಕರಿಸಿತು, ಇದನ್ನು ಕರ್ನಾಟಕ ವಿಧಾನಸಭೆ ಖಂಡಿಸುತ್ತದೆ. ಯೋಜನೆ ಅನುಷ್ಠಾನಕ್ಕೆ ತಕ್ಷಣ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಮತ್ತು ಪರಿಸರ ಮತ್ತು ಅರಣ್ಯ ಸಚಿವಾಲಯ (ಎಂಒಇಎಫ್) ಗೂ ಕರ್ನಾಟಕ ಒತ್ತಾಯಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ನಿರ್ಣಯವನ್ನು ಪ್ರಸ್ತಾಪಿಸಿದರು.
“ರಾಜ್ಯಗಳ ನಡುವೆ ನ್ಯಾಯಸಮ್ಮತವಾದ ನೀರಿನ ಹಂಚಿಕೆಯ ಬಗ್ಗೆ ನಿರ್ಧಾರವಾಗುವವರೆಗೆ, ಕರ್ನಾಟಕದ ಒಪ್ಪಿಗೆಯಿಲ್ಲದೆ ಗೋದಾವರಿ-ಕೃಷ್ಣ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆ ಅಂತಿಮಗೊಳಿಸಬಾರದು. ತಮಿಳುನಾಡಿನ ಕಾನೂನುಬಾಹಿರ ಜಲ ಯೋಜನೆಗಳಿಗೆ ಅನುಮೋದನೆ ನೀಡದಂತೆ ಮತ್ತು ಆ ಯೋಜನೆಗಳನ್ನು ಮುಂದುವರೆಸದಂತೆ ನಿರ್ದೇಶನ ನೀಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.
ಇದನ್ನೂ ಓದಿ: ತಮಿಳು ನಾಡಿಗೆ ಕಾವೇರಿ ನೀರು ವಿಷಯ ರಾಜಕೀಯಕ್ಕೆ ದಾಳ: ಸಿಎಂ ಬಸವರಾಜ ಬೊಮ್ಮಾಯಿ
ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲದೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ನಿರ್ಣಯವು, ತಮಿಳುನಾಡಿನ "ಅಕ್ರಮ ಯೋಜನೆಗಳನ್ನು" ಅನುಮೋದಿಸದಂತೆ ಕೇಂದ್ರೀಯ ಸಂಸ್ಥೆಗಳನ್ನು ಒತ್ತಾಯಿಸಿದೆ.
ನಿರ್ಣಯ ಮಂಡನೆ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ತಮಿಳುನಾಡು ನಿರ್ಣಯ ಖಂಡಿಸಲು ನಿರ್ಣಯ ರಚನೆ ಮಾಡುವ ವೇಳೆ ಮುಖ್ಯಮಂತ್ರಿ ಬೊಮ್ಮಾಯಿಯವರು ಪ್ರತಿಪಕ್ಷಗಳ ಸಲಹೆಗಳನ್ನು ಪಡೆಯಬೇಕಿಚ್ಚು ಎಂದು ಹೇಳಿದರು.
ನಿರ್ಣಯ ಅಂಗೀಕರಿಸಿದ ಜೆಡಿಎಸ್
ಜೆಡಿಎಸ್ ಮುಖಂಡರಾದ ಬಂಡೆಪ್ಪ ಕಾಶೆಂಪೂರ್ ಮತ್ತು ಎಚ್.ಡಿ.ರೇವಣ್ಣ ಅವರು ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು.
ಸುಪ್ರೀಂ ಕೋರ್ಟ್ ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರು ಮತ್ತು ಬೆಂಗಳೂರಿಗೆ 4.75 ಟಿಎಂಸಿ ಅಡಿ ನೀರು ಸೇರಿದಂತೆ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು 24 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಮೇಕೆದಾಟು ಕುಡಿಯುವ ನೀರು ಮತ್ತು ಜಲಾಶಯದಲ್ಲಿ ಸುಸ್ಥಿರತೆ ಸಾಧಿಸಲು ಮತ್ತು ವಿದ್ಯುತ್ ಉತ್ಪಾದಿಸಲು ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯು ತಮಿಳುನಾಡು ರಾಜ್ಯದ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಬೊಮ್ಮಾಯಿ ವಿವರಿಸಿದರು.
ಇದನ್ನೂ ಓದಿ: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ: ರಾಜ್ಯ ಸರ್ಕಾರದಿಂದ ತೀವ್ರ ವಿರೋಧ
ರಾಷ್ಟ್ರೀಯ ಜಲ ನೀತಿಯು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಯೋಜನೆಯು ಕಾವೇರಿ ನದಿ ನೀರು ನ್ಯಾಯಮಂಡಳಿ ಆದೇಶವನ್ನು ಉಲ್ಲಂಘಿಸುವುದಿಲ್ಲ. ತಮಿಳುನಾಡು ಕುಂದಾ ಪಿಎಸ್ಪಿ, ಸಿಲ್ಲಹಳ್ಳ ಪಿಎಸ್ಪಿ, ಹೊಗೇನಕಲ್ ಹಂತ-2, ಕಾವೇರಿ (ಕತ್ತಲೈ)- ವೈಗೈ-ಗುಂಡಾರ್ ನದಿಗಳನ್ನು ಅಕ್ರಮವಾಗಿ ಜೋಡಿಸುವ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಹೇಳಿದರು.
ಈ ವೇಳೆ ಮೇಕೆದಾಟು ಯೋಜನೆಗೆ ಸೀಮಿತ ಆಗುವಂತೆ ನಿರ್ಣಯ ಕೈಗೊಳ್ಳೋಣ ಎಂದು ಒತ್ತಡ ಹೇರುವ ಅಂಶಕ್ಕೆ ಕಾಂಗ್ರೆಸ್ ಶಾಸಕ ಹೆಚ್.ಕೆ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಹೆಚ್.ಕೆ.ಪಾಟೀಲ್ ಆಕ್ಷೇಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಈ ವೇಳೆ ಬೆಂಬಲ ವ್ಯಕ್ತಪಡಿಸಿದರು.