
ಘಟನೆಯ ದೃಶ್ಯ
ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು 20 ವರ್ಷದ ಆನೆಯೊಂದು ಸಾವನ್ನಪ್ಪಿರುವ ಘಟನೆ ಕನಕಪುರ ರಸ್ಥೆಯಲ್ಲಿ ನಡೆದಿದೆ. ದೇವಿಕಾ ರಾಣಿ ಎಸ್ಟೇಟ್ ಬಳಿ ಈ ಘಟನೆ ತಡರಾತ್ರಿ ಸಂಭವಿಸಿದೆ. ತಲಘಟ್ಟಪುರದಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯುಗಾದಿ ಹಬ್ಬದ ಎಫೆಕ್ಟ್: ಹೆಚ್ಚುವರಿ 600 ಬಸ್‌ಗಳ ಓಡಿಸಲು ಕೆಎಸ್ಆರ್ ಟಿಸಿ ನಿರ್ಧಾರ!!
ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ. ಬಸ್ ನಲ್ಲಿ 13 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಬಸ್ಸು ಮೆಜೆಸ್ಟಿಕ್ ನಿಲ್ದಾಣಕ್ಕೆ ತೆರಳುತ್ತಿತ್ತು. ಅಪಘಾತದಿಂದಾಗಿ ಚಾಲಕನಿಗೆ ಗಾಯಗಳಾಗಿದ್ದು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಇದನ್ನೂ ಓದಿ: ದೇವನಹಳ್ಳಿ: ಓವರ್ ಟೇಕ್ ಮಾಡುವ ಭರದಲ್ಲಿ ದುರಂತ; ಸಿಮೆಂಟ್ ಲಾರಿಗಳ ಡಿಕ್ಕಿ- ಚಾಲಕ ಸಜೀವ ದಹನ
ರಸ್ತೆ ಮೇಲೆ ಬಸ್ ತೆರಳುತ್ತಿದ್ದ ಮಾರ್ಗದಲ್ಲೆ ಆನೆ ಏಕಾಏಕಿ ಓಡಿ ಬಂದಿದ್ದಾಗಿಯೂ, ಆ ಸಂದರ್ಭದಲ್ಲಿ ಬ್ರೇಕ್ ಹಾಕಿದರೂ ಬಸ್ಸು ಆನೆಗೆ ಡಿಕ್ಕಿ ಹೊಡೆದಿದ್ದಾಗಿ ಚಾಲಕ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದೆ.
ಇದನ್ನೂ ಓದಿ: ಬೆಂಗಳೂರು: ಕೆಲಸದಿಂದ ತೆಗೆದುಹಾಕಿದ್ದಕ್ಕೆ ದ್ವೇಷ; ಹೆಚ್ ಆರ್ ಕೊಲೆಗೆ ಸ್ಕೆಚ್ ಹಾಕಿದ್ದವರ ಬಂಧನ!