'ಹಲಾಲ್ ಆರ್ಥಿಕ ಜಿಹಾದ್'; ಅದನ್ನು ಬಹಿಷ್ಕರಿಸುವ ಹಕ್ಕು ನಮಗಿದೆ: ಸಿ.ಟಿ ರವಿ
ಕೆಲವು ಬಲಪಂಥೀಯ ಗುಂಪುಗಳು ಈಗ 'ಹಲಾಲ್' ಮಾಂಸವನ್ನು ಬಹಿಷ್ಕರಿಸಲು ಕರೆ ನೀಡುತ್ತಿದ್ದು ಇದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಲಾಲ್ ಆಹಾರವನ್ನು 'ಆರ್ಥಿಕ ಜಿಹಾದ್'ಗೆ ಹೋಲಿಸಿದ್ದಾರೆ.
Published: 29th March 2022 09:12 PM | Last Updated: 30th March 2022 01:24 PM | A+A A-

ಸಿಟಿ ರವಿ
ಬೆಂಗಳೂರು: ಕೆಲವು ಬಲಪಂಥೀಯ ಗುಂಪುಗಳು ಈಗ 'ಹಲಾಲ್' ಮಾಂಸವನ್ನು ಬಹಿಷ್ಕರಿಸಲು ಕರೆ ನೀಡುತ್ತಿದ್ದು ಇದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಲಾಲ್ ಆಹಾರವನ್ನು 'ಆರ್ಥಿಕ ಜಿಹಾದ್'ಗೆ ಹೋಲಿಸಿದ್ದಾರೆ.
ವಿಶೇಷವಾಗಿ ಹಿಂದೂ ಹೊಸ ವರ್ಷದ ಹಬ್ಬವಾದ ಯುಗಾದಿಯಂದು ಹಲಾಲ್ ಮಾಂಸವನ್ನು ಬಹಿಷ್ಕರಿಸುವಂತೆ ಹಿಂದೂಗಳಿಗೆ ಮನವಿ ಮಾಡುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಯುಗಾದಿ ಹಬ್ಬದ ನಂತರ ಹೊಸತೊಡಕುವನ್ನು ಆಚರಿಸಲಾಗುತ್ತದೆ. ಮುಖ್ಯವಾಗಿ ದೇವರಿಗೆ ಪ್ರಾಣಿಯನ್ನು ಬಲಿ ನೀಡುವುದು. ಇಲ್ಲದಿದ್ದರೆ ಅಂಗಡಿಗಳಲ್ಲಿ ಮಾಂಸವನ್ನು ಖರೀದಿಸುವ ಭರಾಟೆ ಜೋರಾಗಿರುತ್ತದೆ. ಹೀಗಾಗಿ ಮುಸ್ಲಿಂರು ಹಲಾಲ್ ಕಟ್ ಮಾಡುತ್ತಾರೆ. ಕೆಲವು ಬಲಪಂಥೀಯ ಕಾರ್ಯಕರ್ತರು ಅದನ್ನು ಬಿಟ್ಟುಬಿಡಲು ಜನರನ್ನು ಮನವಿ ಮಾಡುತ್ತಿದ್ದಾರೆ.
ಕರ್ನಾಟಕದ ಕೆಲವು ಭಾಗಗಳಲ್ಲಿ ಹಿಂದೂ ಧಾರ್ಮಿಕ ಜಾತ್ರೆಗಳ ಸಮಯದಲ್ಲಿ ದೇವಸ್ಥಾನಗಳ ಸುತ್ತ ಮುಸ್ಲಿಂ ಮಾರಾಟಗಾರರ ಮೇಲೆ ನಿಷೇಧದ ನೆರಳಿನಲ್ಲೇ ಈ ಕರೆ ಬರುತ್ತದೆ. ಹಲಾಲ್ ಒಂದು ಆರ್ಥಿಕ ಜಿಹಾದ್ ಅಂದರೆ ಮುಸಲ್ಮಾನರು ಬೇರೆಯವರೊಂದಿಗೆ ವ್ಯಾಪಾರ ಮಾಡಬಾರದು ಎಂದು ಜಿಹಾದ್ ರೀತಿಯಲ್ಲಿ ಬಳಸುತ್ತಾರೆ. ಹಲಾಲ್ ಮಾಂಸವನ್ನೇ ಬಳಸಬೇಕು ಎಂದೆನಿಸಿದಾಗ ಅದು ಬೇಡ ಎಂದು ಹೇಳುವುದರಲ್ಲಿ ತಪ್ಪೇನಿದೆ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
ಮುಸ್ಲಿಂರು ಅವರ ದೇವರಿಗೆ ಅರ್ಪಿಸುವ ಹಲಾಲ್ ಮಾಂಸವು ಅವರಿಗೆ ಪ್ರಿಯವಾಗಿದೆ. ಆದರೆ ಹಿಂದೂಗಳಿಗೆ ಅದು ಯಾರದೋ ಎಂಜಲು ತಿನ್ನುವಂತಾಗುತ್ತದೆ. ಹಲಾಲ್ ಉತ್ಪನ್ನಗಳನ್ನು ಮುಸ್ಲಿಮರಿಂದ ಮಾತ್ರ ಖರೀದಿಸಬೇಕು ಮತ್ತು ಇತರರಿಂದ ಖರೀದಿಸಬಾರದು ಎಂದು ಯೋಜಿತ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಸಿಟಿ ರವಿ ಹೇಳಿದ್ದಾರೆ.
ಮುಸ್ಲಿಮರು ಹಿಂದೂಗಳಿಂದ ಮಾಂಸವನ್ನು ಖರೀದಿಸಲು ನಿರಾಕರಿಸಿದಾಗ, ಅವರಿಂದ ಖರೀದಿಸಲು ಹಿಂದೂಗಳನ್ನು ಏಕೆ ಒತ್ತಾಯಿಸಬೇಕು? ಇದನ್ನು ಕೇಳಲು ಅವರಿಗೆ ಏನು ಹಕ್ಕಿದೆ? ರವಿ ಹೇಳಿದರು.
ಹಲಾಲ್ ಮಾಂಸವನ್ನು ಬಹಿಷ್ಕರಿಸುವ ಕುರಿತು ಕೇಳಿದ ಪ್ರಶ್ನೆಗೆ, ಮುಸ್ಲಿಮರು ಹಲಾಲ್ ಅಲ್ಲದ ಮಾಂಸವನ್ನು ತಿನ್ನಲು ಒಪ್ಪಿದರೆ, ಹಿಂದೂಗಳು ಹಲಾಲ್ ಮಾಂಸವನ್ನು ಸಹ ಬಳಸುತ್ತಾರೆ ಎಂದು ಅವರು ಹೇಳಿದರು.