ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಲು ಬಿಡುವುದಿಲ್ಲ: ಬಿಜೆಪಿ ಎಂ.ಎಲ್.ಎ ಅನಿಲ್ ಬೆನಕೆ
'ಜಾತ್ರೆಗಳಲ್ಲಿ ಇತರ ಧರ್ಮೀಯ ವ್ಯಾಪಾರಸ್ಥರಿಗೆ ಆರ್ಥಿಕ ನಿರ್ಬಂಧ ಹೇರಲು ನಾವು ಅವಕಾಶ ಕೊಡುವುದಿಲ್ಲ' ಎಂದು ಬೆಳಗಾವಿ ನಗರದ ಉತ್ತರ ಮತ ಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಹೇಳಿದ್ದಾರೆ.
Published: 30th March 2022 11:12 AM | Last Updated: 30th March 2022 01:27 PM | A+A A-

ಅನಿಲ್ ಬೆನಕೆ
ಬೆಳಗಾವಿ: 'ಜಾತ್ರೆಗಳಲ್ಲಿ ಇತರ ಧರ್ಮೀಯ ವ್ಯಾಪಾರಸ್ಥರಿಗೆ ಆರ್ಥಿಕ ನಿರ್ಬಂಧ ಹೇರಲು ನಾವು ಅವಕಾಶ ಕೊಡುವುದಿಲ್ಲ' ಎಂದು ಬೆಳಗಾವಿ ನಗರದ ಉತ್ತರ ಮತ ಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹಾಕುವ ಪ್ರಶ್ನೆ ಬರುವುದಿಲ್ಲ. ಇತರ ಧರ್ಮೀಯರ ವ್ಯಾಪಾರಕ್ಕೆ ನಿರ್ಬಂಧ ಹೇರುವುದು ಸಂವಿಧಾನ ವಿರೋಧಿಯಾಗಿದ್ದು, ನಾವು ಕೂಡ ನಿರ್ಬಂಧ ಹಾಕುವುದಿಲ್ಲ. ಜನರು ನಿರ್ಬಂಧ ಹಾಕಿದರೆ ನಮಗೆ ಏನೂ ಹೇಳಲು ಆಗಲ್ಲ ಎಂದು ಕಿಡಿಕಾರಿದರು.
ಜನರು ಅಲ್ಲೇ ಖರೀದಿ ಮಾಡಬೇಕು, ಇಲ್ಲೇ ಮಾಡಬೇಕು ಅನ್ನೋದು ತಪ್ಪು. ಎಲ್ಲರಿಗೂ ಅವರಿಗೆ ಬೇಕಾದಲ್ಲಿ ವ್ಯವಹಾರ ಮಾಡಲು ಅವಕಾಶವಿದೆ. ಎಲ್ಲಿಂದ ಏನೂ ಖರೀದಿ ಮಾಡಬೇಕು ಎಂದು ಜನರು ತೀರ್ಮಾನ ಮಾಡಬೇಕು ಎಂದು ಹೇಳಿದರು. ಎಲ್ಲರಿಗೂ ಅವರವರ ಆಯ್ಕೆಗೆ ಅನುಗುಣವಾಗಿ ವ್ಯಾಪಾರ ನಡೆಸಲು ಸ್ವಾತಂತ್ರ್ಯವಿದೆ. ಜನರು ಎಲ್ಲಿಂದ ಖರೀದಿಸಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ಅವರು ಹೇಳಿದರು.
ಒಬ್ಬ ವಕೀಲನಾಗಿರುವುದರಿಂದ, ಪ್ರತಿಯೊಬ್ಬ ಪ್ರಜೆಗೂ ತನ್ನ ವ್ಯಾಪಾರವನ್ನು ಎಲ್ಲಿ ಬೇಕಾದರೂ ನಡೆಸುವ ಹಕ್ಕು ಇದೆ ಎಂದು ಮಾತ್ರ ಹೇಳಬಲ್ಲೆ. ಎಲ್ಲಿಂದ ವಸ್ತುಗಳನ್ನು ಖರೀದಿಸಬೇಕು ಎಂಬುದನ್ನು ಜನರೇ ನಿರ್ಧರಿಸಲಿ ಎಂದು ತಿಳಿಸಿದ್ದಾರೆ.