ಏಪ್ರಿಲ್ 1 ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ 12-14 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ
2010 ಮಾರ್ಚ್ 28 ರೊಳಗೆ ಜನಿಸಿರುವ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ರಾಜ್ಯ ಸರ್ಕಾರವು ಮಾರ್ಚ್ 16 ರಿಂದ ಲಸಿಕಾ ಅಭಿಯಾನ ಆರಂಭಿಸಿದ್ದು 20 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದೆ
Published: 30th March 2022 12:41 PM | Last Updated: 30th March 2022 01:31 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಏಪ್ರಿಲ್ 1 ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೊರ್ಬಾವ್ಯಾಕ್ಸ್ ಲಸಿಕೆ ನೀಡಲಾಗುತ್ತದೆ.
2010 ಮಾರ್ಚ್ 28 ರೊಳಗೆ ಜನಿಸಿರುವ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ರಾಜ್ಯ ಸರ್ಕಾರವು ಮಾರ್ಚ್ 16 ರಿಂದ ಲಸಿಕಾ ಅಭಿಯಾನ ಆರಂಭಿಸಿದ್ದು 20 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದೆ. ಆದರೆ ಇದುವರಗೆ ಕೇವಲ 6.3 ಲಕ್ಷ ಮಕ್ಕಳಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗಿದೆ.
12-14 ವರ್ಷ ವಯಸ್ಸಿನವರಿಗೆ ಕೋವಿಡ್ ಲಸಿಕೆ ಅಭಿಯಾನವು ನಿಧಾನ ಗತಿಯಲ್ಲಿ ನಡೆಯುತ್ತಿದೆ. ಇದನ್ನು ವೇಗಗೊಳಿಸಲು ರಾಜ್ಯ ಸರ್ಕಾರ ಎಲ್ಲಾ ಶಾಲೆಗಳಲ್ಲಿ ಲಸಿಕೆ ಹಾಕಲು ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದರು.
ಮಂಗಳವಾರ ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ಕೊರ್ಬಾವ್ಯಾಕ್ಸ್ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ವ್ಯಾಕ್ಸಿನೇಷನ್ಗೆ ಮೊದಲು ಪೋಷಕ-ಶಿಕ್ಷಕರ ಸಭೆಗಳನ್ನು ನಡೆಸಲಾಗುವುದು ಎಂದು ಹೇಳಿದೆ.
ಲಸಿಕೆ ಹಾಕುವ ಪೂರ್ವಭಾವಿಯಾಗಿ ಮೈಕ್ರೋ-ಪ್ಲಾನಿಂಗ್ ನಡೆಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ, ಅರ್ಹ ಮಕ್ಕಳಿಗೆ ಲಸಿಕೆ ಹಾಕುವ ದಿನಾಂಕವನ್ನು ಮುಂಚಿತವಾಗಿ ತಿಳಿಸಲು. ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಜಂಟಿಯಾಗಿ ಈ ಅಭಿಯಾನವನ್ನು ಕೈಗೊಳ್ಳಲಿವೆ.
ಇದನ್ನೂ ಓದಿ: ರಾಜ್ಯದಲ್ಲಿ ಇಂದು ಕೊರೋನಾದಿಂದ ಒಬ್ಬರು ಸಾವು, ಬೆಂಗಳೂರಿನಲ್ಲಿ 36 ಸೇರಿ 48 ಮಂದಿಗೆ ಪಾಸಿಟಿವ್
ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವಿವರಗಳನ್ನು ನೀಡುವಂತೆ ಶಿಕ್ಷಣ ಇಲಾಖೆಗೆ ಸರ್ಕಾರ ಸೂಚಿಸಿದೆ.
ಶಾಲೆಗಳಲ್ಲಿನ ಲಸಿಕಾ ಕೇಂದ್ರಗಳಲ್ಲಿ ವೀಕ್ಷಣಾ ಕೊಠಡಿ ಸೇರಿದಂತೆ ಮೂರು ಕೊಠಡಿಗಳನ್ನು ಅಳವಡಿಸಲಾಗುವುದು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಮತ್ತು ಕೋವಿಡ್ ನಿಯಮ ಅನುಸರಿಸುವುದು ಕಡ್ಡಾಯವಾಗಿದೆ. ನೋಂದಣಿಗಾಗಿ ಪೋಷಕರ ದೂರವಾಣಿ ಸಂಖ್ಯೆಯನ್ನು ಬಳಸಬೇಕು ಮತ್ತು ಪೋಷಕರು ಮೊಬೈಲ್ ಫೋನ್ ಹೊಂದಿಲ್ಲದಿದ್ದಲ್ಲಿ ಮುಖ್ಯೋಪಾಧ್ಯಾಯರ ಫೋನ್ ಸಂಖ್ಯೆಯನ್ನು ಬಳಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಶಾಲೆಯಿಂದ ನೀಡಿದ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಅನ್ನು ಚಾಲನೆಯ ಸಮಯದಲ್ಲಿ ಫೋಟೋ ಐಡಿ ಪುರಾವೆಯಾಗಿ ಬಳಸಬೇಕು. ನೋಂದಣಿ ಆನ್ಲೈನ್ನಲ್ಲಿ ನಡೆಯಲಿದ್ದು ಪೋಷಕರ ಅನುಮತಿ ಕಡ್ಡಾಯವಾಗಿದೆ.