ಇಸ್ಲಾಮ್ ಜಗತ್ತಿಗೆ ಅಂಟಿದ ಶಾಪ!: ಅನಂತ್ ಕುಮಾರ್ ಹೆಗ್ಡೆ ಫೇಸ್ ಬುಕ್ ಪೋಸ್ಟ್
ಪೇಜಾವರ ಮಠದ ಶ್ರೀಗಳನ್ನು ಮುಸ್ಲಿಂ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ್ದರ ಬಗ್ಗೆ ಸಂಸದ ಅನಂತ್ ಕುಮಾರ್ ಹೆಗ್ಡೆ ಬರೆದಿರುವ ಫೇಸ್ ಬುಕ್ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ.
Published: 31st March 2022 04:30 PM | Last Updated: 31st March 2022 06:58 PM | A+A A-

ಅನಂತ್ ಕುಮಾರ್ ಹೆಗ್ಡೆ
ಬೆಂಗಳೂರು: ಪೇಜಾವರ ಮಠದ ಶ್ರೀಗಳನ್ನು ಮುಸ್ಲಿಂ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ್ದರ ಬಗ್ಗೆ ಸಂಸದ ಅನಂತ್ ಕುಮಾರ್ ಹೆಗ್ಡೆ ಬರೆದಿರುವ ಫೇಸ್ ಬುಕ್ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ.
ಮುಸ್ಲಿಂ ಸಮುದಾಯ ಇತ್ತೀಚಿನ ದಿನಗಳಲ್ಲಿ ಎದುರಿಸುತ್ತಿರುವ ನಿರ್ಬಂಧಗಳಿಗೆ ಪರಿಹಾರಕ್ಕೆ ಸಹಾಯ ಮಾಡಬೇಕೆಂದು ಮನವಿ ಮಾಡಿತ್ತು. ಅದಕ್ಕೆ ಪೇಜಾವರ ಶ್ರೀಗಳು ನೀಡಿದ್ದ ಪ್ರತಿಕ್ರಿಯೆ ಬಗ್ಗೆ ಅನಂದ್ ಕುಮಾರ್ ಹೆಗ್ಡೆ ಫೇಸ್ ಬುಕ್ ನಲ್ಲಿ ಬರೆದಿರುವುದು ಈಗ ಚರ್ಚೆಯ ವಿಷಯವಾಗಿದೆ.
"ಇಸ್ಲಾಂ ಈ ಜಗತ್ತಿಗೆ ಅಂಟಿದ ಶಾಪ", ಮನುಷ್ಯನ ಊಹೆಗೂ ನಿಲುಕದ ಬರ್ಬರತೆ, ಹಿಂಸೆ, ಕ್ರೌರ್ಯ ಮತ್ತು ಭಯೋತ್ಪಾದನೆಯೇ ಇಸ್ಲಾಂನ ಘನ ಇತಿಹಾಸ" ಎಂದು ಅನಂತ್ ಕುಮಾರ್ ಹೆಗ್ಡೆ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಮುಸ್ಲಿಂ ನಿಯೋಗವನ್ನು ಪೇಜಾವರ ಶ್ರೀಗಳು ವಾಪಸ್ ಕಳಿಸಿದ್ದಾರೆ. ಪೇಜಾವರ ಶ್ರೀಗಳ ನಡೆಗೆ ಶಿರಸಾಷ್ಟಾಂಗ ಪ್ರಣಾಮಗಳು ಇಂದಿನ ವಿಶ್ವಶಾಂತಿಗೆ ಇಸ್ಲಾಂನ ಪೈಶಾಚಿಕತೆಯೇ ಅತಿದೊಡ್ಡ ಅಪಾಯವಾಗಿದೆ. ಸೌಹಾರ್ದ ಬಯಸುವುದನ್ನು ನಿರ್ವೀರ್ಯತೆ ಅಂತ ಕರೆಯಬೇಕೊ? ಹೇಡಿತನ ಅಂತ ಕರೆಯಬೇಕೊ? ಅಥವಾ ಅವರಿಗೆ ಬಡಿದ ಮಹಾ ಮೂರ್ಖತನದ ರೋಗ ಅಂತ ಹೇಳಬೇಕೊ? ಎಂದು ಅನಂತ್ ಕುಮಾರ್ ಹೆಗ್ಡೆ ಪ್ರಶ್ನಿಸಿದ್ದಾರೆ.
ಪೇಜಾವರ ಶ್ರೀಗಳ ನಡೆ ‘ಆತ್ಮಾಭಿಮಾನದ ಕೋಲ್ಮಿಂಚು’ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಸಂಸದರು ‘ಶ್ರೀಗಳು ಇಸ್ಲಾಂನ ಹುಚ್ಚಾಟಗಳನ್ನು ಬಹಿರಂಗವಾಗಿ ಖಂಡಿಸಿದ್ದಾರೆ. ಯಾವ ಮುಲಾಜೂ ಇಲ್ಲದೆ ಸತ್ಯವನ್ನು ಚಾಟಿಯಿಂದ ಹೊಡೆದ ಹಾಗೆ ಹೇಳಿದ್ದಾರೆ’ ಎಂದಿದ್ದಾರೆ.