ಶೇ.5ರ ರಿಯಾಯಿತಿಯಲ್ಲಿ ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿಸುವ ದಿನಾಂಕ ಮೇ.31ರವರೆಗೆ ವಿಸ್ತರಣೆ: ಬಿಬಿಎಂಪಿ
2022-23ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸುವವರಿಗೆ ಶೇಕಡಾ 5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ.
Published: 01st May 2022 11:53 AM | Last Updated: 01st May 2022 11:53 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: 2022-23ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸುವವರಿಗೆ ಶೇಕಡಾ 5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ.
ನಗರದ ನಾಗರಿಕರಿಗೆ ಆಸ್ತಿ ತೆರಿಗೆ ಪಾವತಿಸುವ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ. ಮೇ 31ರೊಳಗೆ ಪಾವತಿಸುವ ಎಲ್ಲಾ ಆಸ್ತಿ ತೆರಿಗೆದಾರರಿಗೆ ಶೇಕಡಾ 5ರಷ್ಟು ರಿಯಾಯಿತಿ ನೀಡಿ ಬಿಬಿಎಂಪಿ ಆದೇಶಿಸಿದೆ.
ಈ ಹಿಂದೆ ಏಪ್ರಿಲ್ 30ರವರೆಗೆ ಶೇಕಡಾ 5ರ ರಿಯಾಯಿತಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಸೂಚಿಸಲಾಗಿತ್ತು. ಅದನ್ನೀಗ ಬಿಬಿಎಂಪಿ ನಾಗರಿಕರ ಸೌಲಭ್ಯಕ್ಕೆ ವಿಸ್ತರಿಸಿದೆ.
Bbmp has extended the date of property tax filing with 5% rebate from April 30 to May 31@NewIndianXpress @XpressBengaluru @KannadaPrabha @Cloudnirad @NammaBengaluroo @NammaKarnataka_ @namma_BTM @Namma_ORRCA @BAFBLR @citizensforblr @SarjapuraRWA @_kanakapuraroad @icindngr pic.twitter.com/vRkPKVUNLt
— Bosky Khanna (@BoskyKhanna) April 30, 2022