ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀತಿಯನ್ನು ಸಾಕಾರಗೊಳಿಸಿರುವ ಬಜೆಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ನೀತಿಯಂತೆ ರಾಜ್ಯ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಇದೇ ನೀತಿಯ ಆಧಾರದ ಮೇಲೆ ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Published: 01st May 2022 07:24 PM  |   Last Updated: 01st May 2022 07:24 PM   |  A+A-


CM bommai

ಸಿಎಂ ಬೊಮ್ಮಾಯಿ

Online Desk

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ನೀತಿಯಂತೆ ರಾಜ್ಯ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಇದೇ ನೀತಿಯ ಆಧಾರದ ಮೇಲೆ ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ವತಿಯಿಂದ ಕೃತಜ್ಞತೆ ಅರ್ಪಿಸುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಕ್ತಿ ಇಲ್ಲದವನಿಗೆ ಶಕ್ತಿ,ಆರ್ಥಿಕವಾಗಿ ಹಿಂದುಳಿದವರಲ್ಲಿ ಸಾಮರ್ಥ್ಯ ತುಂಬುವುದೇ ಸಾಮರ್ಥ್ಯ. ಸೂರಿಲ್ಲದವರಿಗೆ  ಸೂರು, ಉದ್ಯೋಗವಿಲ್ಲದವರಿಗೆ ಉದ್ಯೋಗ, ವಿದ್ಯೆಯಿಲ್ಲದವರಿಗೆ ವಿದ್ಯೆ ಕೊಡುವಂತಹ  ಕೆಲಸ ಮಾಡುವುದೇ ನಿಜವಾದ ಆಡಳಿತಗಾರನ ಸಾಮರ್ಥ್ಯ. ಅದೇ ದಾರಿಯಲ್ಲಿ ನಾನು ನಡೆಯುತ್ತಿದ್ದೇನೆ . ಪ್ರಧಾನ ಮಂತ್ರಿಗಳ ವಿಕಾಸ್, ಸಬ್ ಕಾ ವಿಶ್ವಾಸ್, ಸಬಾ ಕಾ ಪ್ರಯಾಸ್  ತತ್ವದಡಿ ಕೆಲಸ ಮಾಡಲಾಗುತ್ತಿದೆ. ಅಸಮತೋಲನವಿರುವ ಸಮಾಜದಲ್ಲಿ ಕ್ಷೋಭೆ ಉಂಟಾಗಿ, ಪ್ರಗತಿ ಸಾಧ್ಯವಾಗುವುದಿಲ್ಲ. ಮಾತಿನಲ್ಲಿ ಅಲ್ಲ ಕೃತಿಯಲ್ಲಿ ನಮ್ಮನ್ನು ಅಳಿಯಿರಿ. ಸರ್ಕಾರ ಮಾಡಿರುವ ಕೆಲಸಗಳ ರಿಪೋರ್ಟ್ ಕಾರ್ಡನ್ನು ಮುಂದಿಟ್ಟು ಸಕಾರಾತ್ಮಕ ಚಿಂತನೆಯೊಂದಿಗೆ ಜನರ ಮುಂದೆ ಬರಲಾಗುವುದು.  ಇನ್ನೊಬ್ಬರನ್ನು ಹೀಗಳೆದು ನಕಾರಾತ್ಮಕತೆಯೊಂದಿಗೆ ವೋಟು ಕೇಳುವ ಕೆಲಸವನ್ನು ಮಾಡುವುದಿಲ್ಲ. ಸರ್ಕಾರ ಮಾಡಿರುವ ಕೆಲಸಗಳ ಸಾಮರ್ಥ್ಯಗಳ ಮೇಲೆ ಜನರಿಂದ ವೋಟು ಕೇಳುತ್ತೇವೆ ಎಂದು ತಿಳಿಸಿದರು.

ರಾಜ್ಯದ ಆರ್ಥಿಕತೆಯ ಹೆಚ್ಚಳ: ರಾಜ್ಯದ ಜನರು ಕೆಲವರಿಗೆ ತಮ್ಮ ಸ್ಥಾನವನ್ನು ತೋರಿಸಿದ್ದರೂ,ತಾವೇ ಸಮರ್ಥರು ಎನ್ನುವ ಭ್ರಮೆಯಲ್ಲಿ ಬಹಳಷ್ಟು ಜನ ಇನ್ನೂ ಇದ್ದಾರೆ. 

ರಾಜ್ಯವನ್ನು, ದೀನದಲಿತರನ್ನು, ಬಡಜನರನ್ನು ಸಮರ್ಥವಾಗಿ ಬದುಕು ಕಟ್ಟಿಕೊಳ್ಳುವಂತೆ ಮಾಡಲಾಗುತ್ತಿರುವುದು ನಮ್ಮ ಸಾಮರ್ಥ್ಯ. ನಾಡಿನ ಬೊಕ್ಕಸದಿಂದ ಹಣದ ಸೋರಿಕೆಯನ್ನು ತಡೆದು ಆರ್ಥಿಕತೆಯನ್ನು 15000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.ರೈತರ ಮಕ್ಕಳಿಗೆ ವಿದ್ಯಾನಿಧಿ ಯಾವುದೇ ಸರ್ಕಾರವೂ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ ಹೆಣ್ಣುಮಕ್ಕಳಿಗೆ,  ರೈತ ಮಕ್ಕಳಿಗೆ ರೈತ ವಿದ್ಯಾನಿಧಿ. ಅಂಗವಿಕಲರ, ವಿಧವೆಯವರ ಮಾಸಾಶನ ಹೆಚ್ಚಳ, ಎಸ್ ಸಿ ಎಸ್ ಟಿ ಜನಾಂಗಕ್ಕೆ 75 ಯೂನಿಟ್ ಉಚಿತ ವಿದ್ಯುತ್ , ಮನೆಗಳ ನಿರ್ಮಾಣಕ್ಕೆ 1.75 ಲಕ್ಷ ದಿಂದ 2 ಲಕ್ಷ ರೂ.ಗಳಿಗೆ ಹೆಚ್ಚಳ, ಜಮೀನು ಪಡೆಯಲು 20 ಲಕ್ಷ ರೂ. ಸಹಾಯಧನ, ಪ್ರತಿ ತಾಲ್ಲೂಕಿನಲ್ಲಿ 100 ಉದ್ಯೋಗ ಸೃಷ್ಟಿಗೆ, ಹಾಲು ಉತ್ಪಾದಕರಿಗೆ ಕ್ಷೀರ ಬ್ಯಾಂಕ್, 4 ಲಕ್ಷ ಸ್ತ್ರೀಶಕ್ತಿ ಸಂಘಗಳಿಗೆ 1.50 ಲಕ್ಷ ಸಾಲ ಸೌಲಭ್ಯವನ್ನು ನೀಡಲು ಆ್ಯಂಕರ್ ಬ್ಯಾಂಕ್ ಜೋಡಣೆ ಮೂಲಕ 8 -10 ಲಕ್ಷ ಮಹಿಳೆಯರ ಆರ್ಥಿಕ ಸಬಲೀಕರಣ, ಯುವಕರಿಗೆ ಉದ್ಯೋಗ,. ಇದು ಸಾಮರ್ಥ್ಯ  ಎಂದರು.

ಅರ್ಹತೆ ಇರುವವರಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ: ದುರ್ಬಲ ವರ್ಗದ ಜನರಿಗೆ ಶಕ್ತಿಯ ಜೊತೆ ಸಂಸ್ಕಾರದ ಅಗತ್ಯ ವಿದೆ. ಅದನ್ನು ಕೊಡಲು ಮಠಗಳು ಸಿದ್ಧವಾಗಿವೆ. ಹೀಗಾಗಿ ಮಠಗಳ ಮೂಲಕ ಸಂಸ್ಕಾರ, ವಿದ್ಯೆ ಸಿಗಲಿ ಎನ್ನುವ ಮಹದಾಸೆಯಿಂದ ಈ ಕೆಲಸವನ್ನು ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡುತ್ತಿರುವ ಮಠಗಳಿಗೆ ಸರ್ಕಾರದ ಸಹಕಾರವಿರುತ್ತದೆ. ಅರ್ಹತೆ ಇರುವವರಿಗೆ, ಮುಂದು ಬರಬೇಕೆನ್ನುವ ಹಂಬಲವಿರುವವರಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ.  ಎಲ್ಲಾ ವರ್ಗದ ಜನರನ್ನು ಸರಿ ಸಮಾನವಾಗಿ ನೋಡಿಕೊಳ್ಳುವ ಕೆಲಸವನ್ನು ಮಾಡಲಾಗುವುದು ಎಂದರು. 

ಗುರು ಮತ್ತು ಭಕ್ತನ ಸಂಬಂಧ: ಕಾಗಿನೆಲೆಯ ಶ್ರೀ ಗಳು ಸದಾ ಮಾರ್ಗದರ್ಶನ ಮಾಡಿದ್ದಾರೆ. ಶಕ್ತಿ ತುಂಬಿದ್ದಾರೆ. ಗುರು ಮತ್ತು ಭಕ್ತನ ಸಂಬಂಧವಿದು.  ಕರಾರುರಹಿತ ಪ್ರೀತಿಯ ಸಂಬಂಧವಿದೆ. ಅಧಿಕಾರ ವಿರಲಿ, ಇಲ್ಲದಿರಲಿ ಇದೆ ವಿಶ್ವಾಸ ನಮ್ಮ ಮೇಲೆ ಇದೆ. ಸಾಮಾಜಿಕ, ಶೈಕ್ಷಣಿಕ ,ಧಾರ್ಮಿಕ ವಾಗಿ ಅಗತ್ಯವಿರುವುದನ್ನು ಮಾಡುವುದಾಗಿ ಭರವಸೆ ನೀಡಿದರು.


Stay up to date on all the latest ರಾಜ್ಯ news
Poll
Parliament

2024 ರ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಪಕ್ಷ ಯಾವುದು ಎಂದು ನೀವು ಭಾವಿಸುತ್ತೀರಿ?


Result
ಕಾಂಗ್ರೆಸ್
ಎಎಪಿ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp