ಎಸ್.ಎಂ. ಕೃಷ್ಣರಿಗೆ 90ನೇ ಜನ್ಮದಿನ: ಶುಭ ಕೋರಿದ ಡಿಕೆ ಶಿವಕುಮಾರ್
ಇಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಅವರಿಗೆ 90ನೇ ಜನ್ಮ ದಿನ. ಇದರ ಅಂಗವಾಗಿ ಅವರ ಅಭಿಮಾನಿಗಳು, ಸ್ನೇಹಿತರು, ಕುಟುಂಬವರ್ಗದವರು ಹಾಗೂ ರಾಜಕೀಯ ಮುಖಂಡರು ಶುಭ ಹಾರೈಸಿದರು.
Published: 01st May 2022 05:59 PM | Last Updated: 01st May 2022 05:59 PM | A+A A-

ಎಸ್ ಎಂಕೃಷ್ಣ ಜೊತೆಯಲ್ಲಿ ಡಿಕೆ ಶಿವಕುಮಾರ್
ಬೆಂಗಳೂರು: ಇಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಅವರಿಗೆ 90ನೇ ಜನ್ಮ ದಿನ. ಇದರ ಅಂಗವಾಗಿ ಅವರ ಅಭಿಮಾನಿಗಳು, ಸ್ನೇಹಿತರು, ಕುಟುಂಬವರ್ಗದವರು ಹಾಗೂ ರಾಜಕೀಯ ಮುಖಂಡರು ಶುಭ ಹಾರೈಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸದಾಶಿವನಗರದಲ್ಲಿರುವ ಎಸ್.ಎಂ. ಕೃಷ್ಣ ಅವರ ಮನೆಗೆ ಭೇಟಿ ನೀಡಿ, ಜನ್ಮದಿನದ ಶುಭಾಶಯ ಕೋರಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕರಾದ ಶ್ರೀ ಎಸ್. ಎಂ ಕೃಷ್ಣ ರವರ ಜನ್ಮ ದಿನದ ಪ್ರಯುಕ್ತ ಅವರ ಸ್ವ ಗೃಹಕ್ಕೆ ಇಂದು ಭೇಟಿ ನೀಡಿ ಶುಭಾಶಯ ಕೋರಿದೆ. pic.twitter.com/WPmsLRih0o
— DK Shivakumar (@DKShivakumar) May 1, 2022
ಮಂಡ್ಯ ಜಿಲ್ಲೆ ಸೋಮನಹಳ್ಳಿಯಲ್ಲಿ 1932ರಲ್ಲಿ ಮೇ 1 ರಂದು ಜನಿಸಿದ ಎಸ್.ಎಂ. ಕೃಷ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ, ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ, ಅಮೆರಿಕದ ಸದರ್ನ್ ಮೆಥಡಿಸ್ಟ್ ವಿವಿಯಲ್ಲಿ ಕಾನೂನು ಅಭ್ಯಾಸ ಮಾಡುವ ಮೂಲಕ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನಂತರ 1962ರಲ್ಲಿ ವಿಧಾನಸಭೆಗೆ, 1971ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವುದರೊಂದಿಗೆ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
1999ರಲ್ಲಿ ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಎಸ್.ಎಂ. ಕೃಷ್ಣ, 2004-2008ರವರೆಗೆ ಮಹಾರಾಷ್ಟ್ರ ರಾಜ್ಯಪಾಲರಾಗಿ, 2009-2012ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ನಾಲ್ಕು ದಶಕಗಳ ಜೊತೆಗಿನ ಕಾಂಗ್ರೆಸ್ ಸಂಬಂಧ ತೊರೆದು ಬಿಜೆಪಿ ಸೇರಿದ್ದಾರೆ.