ತೀವ್ರ ದುಃಖದ ಮಧ್ಯೆ ದೊಡ್ಡ ಮಗಳ ಮದುವೆ ತಯಾರಿಯಲ್ಲಿ ಆಸಿಡ್ ದಾಳಿಗೆ ತುತ್ತಾದ ಸಂತ್ರಸ್ತೆಯ ಕುಟುಂಬಸ್ಥರು!
ಆಕೆಯ ಸೋದರಿ ಮದುವೆಗೆ ಕೇವಲ ಒಂದು ವಾರ ಬಾಕಿ ಇದೆ. ಮೇ 7 ಮತ್ತು 8ರಂದು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಆಶಾ (ಹೆಸರು ಬದಲಿಸಲಾಗಿದೆ) ಇಲ್ಲದೆ ತೀವ್ರ ದುಃಖದಲ್ಲಿ ನಾವು ತಯಾರಿ ನಡೆಸುತ್ತಿದ್ದೇವೆ ಎಂದು ಆಸಿಡ್ ದಾಳಿಗೆ ಒಳಗಾದ ಆಶಾ ಅವರ ಚಿಕ್ಕಪ್ಪ ಸುಂದ್ರೇಶ್ ಅಳಲು ತೋಡಿಕೊಂಡಿದ್ದಾರೆ.
Published: 02nd May 2022 02:31 PM | Last Updated: 02nd May 2022 03:36 PM | A+A A-

ಸಾಂಕೇತಿಕ ಚಿತ್ರ
ಬೆಂಗಳೂರು: ಆಕೆಯ ಸೋದರಿ ಮದುವೆಗೆ ಕೇವಲ ಒಂದು ವಾರ ಬಾಕಿ ಇದೆ. ಮೇ 7 ಮತ್ತು 8ರಂದು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಆಶಾ (ಹೆಸರು ಬದಲಿಸಲಾಗಿದೆ) ಇಲ್ಲದೆ ತೀವ್ರ ದುಃಖದಲ್ಲಿ ನಾವು ತಯಾರಿ ನಡೆಸುತ್ತಿದ್ದೇವೆ ಎಂದು ಆಸಿಡ್ ದಾಳಿಗೆ ಒಳಗಾದ ಆಶಾ ಅವರ ಚಿಕ್ಕಪ್ಪ ಸುಂದ್ರೇಶ್ ಅಳಲು ತೋಡಿಕೊಂಡಿದ್ದಾರೆ.
ತರಕಾರಿ ಮಾರಾಟಗಾರರಾಗಿರುವ ಆಶಾಳ ತಂದೆ ತನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿಗೆ ಉತ್ತಮ ಶಿಕ್ಷಣವನ್ನು ನೀಡಲು ಸಾಕಷ್ಟು ಕಷ್ಟಪಟ್ಟಿದ್ದರು. ಆಶಾ ಅವರ ಅಕ್ಕ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಆಶಾ ಕೂಡ ಬಿಇ ಮತ್ತು ಎಂಬಿಎ ಮುಗಿಸಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಎಸ್ಬಿಐ ಬ್ಯಾಂಕಿಂಗ್ ಪರೀಕ್ಷೆಯನ್ನು ಬರೆದಿದ್ದಳು ಎಂದು ಚಿಕ್ಕಪ್ಪ ಸುಂದ್ರೇಶ್ ಹೇಳುತ್ತಾರೆ.
ಆರೋಪಿ ನಾಗೇಶ್, ಆಶಾ ಅವರ ಮನೆಯ ಎದುರಿನ ಆಶಾ ಅವರ ಅಜ್ಜಿಯ ಮನೆಯನ್ನು ಬಾಡಿಗೆಗೆ ಪಡೆದು ಹಿರಿಯ ಸಹೋದರ ಮತ್ತು ಪೋಷಕರೊಂದಿಗೆ ವಾಸಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ, ಆಶಾ ಇನ್ನೂ ಓದುತ್ತಿದ್ದಾಗ, ಅವರ ತಾಯಿ ಬಳಿ ಆಶಾಳನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದ.
ಆದರೆ ಆಕೆಯ ತಾಯಿ ಆಶಾ ಇನ್ನೂ ಓದುತ್ತಿದ್ದಾಳೆ, ಆಕೆಯನ್ನು ಇಷ್ಟು ಬೇಗ ಮದುವೆಯಾಗುವುದಿಲ್ಲ ಎಂದು ಹೇಳಿ ಪ್ರಸ್ತಾಪವನ್ನು ನಿರಾಕರಿಸಿದ್ದರು. ಆಕೆಯ ಮನೆಯವರು ಆಸಕ್ತಿ ತೋರದಿದ್ದಾಗ ಆಶಾಳನ್ನು ಒತ್ತಾಯಿಸಬೇಡ ಎಂದು ನಾಗೇಶ್ ನ ಅಣ್ಣ ಕೂಡ ಹೇಳಿದ್ದನಂತೆ.
ಇದನ್ನೂ ಓದಿ: ಆ್ಯಸಿಡ್ ದಾಳಿ ಸಂತ್ರಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಿಂದ ಚರ್ಮದಾನ!!
ನಂತರ ಆ ಮನೆಯನ್ನು ಖಾಲಿ ಮಾಡಿ ಸಮೀಪದಲ್ಲೇ ಇನ್ನೊಂದು ಮನೆಯನ್ನು ಬಾಡಿಗೆಗೆ ಪಡೆದಿದ್ದರು. ನಾಗೇಶ್ 25 ದಿನಗಳ ಹಿಂದೆ ಆಶಾಳ ಕಚೇರಿಗೆ ತೆರಳಿ ಪ್ರಪೋಸ್ ಮಾಡಿದ್ದನು. ಆಶಾ ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳ ಜೊತೆ ತನಗೆ ಆತನ ಪರಿಚಯವಿಲ್ಲ, ಆತನನ್ನು ಮದುವೆಯಾಗಲು ಆಸಕ್ತಿ ಇಲ್ಲ ಎಂದು ಹೇಳಿದ್ದಳು ಎನ್ನುತ್ತಾರೆ ಸುಂದ್ರೇಶ್.
ಮೊನ್ನೆ ಬುಧವಾರ ಆಶಾ ಅವರ ತಂದೆ ಗ್ಯಾಸ್ ಸಿಲಿಂಡರ್ ಪಡೆಯಲು ಸುಂಕದಕಟ್ಟೆ ಸರ್ಕಲ್ ಬಳಿ ಆಶಾಳ ಕಚೇರಿ ಬಳಿ ಹೋಗುವವರಿದ್ದರು. ಆಗ ಆಶಾ ತಾನು ಅಪ್ಪನ ಜೊತೆ ಕಚೇರಿಗೆ ಹೋಗುತ್ತೇನೆ ಎಂದು ಬೇಗನೆ ಹೊರಟಿದ್ದಳು ಎಂದು ವಿವರಿಸಿದರು.
ಸೋದರಿಯ ಮದುವೆಗೆ ಬಟ್ಟೆ ಆಯ್ಕೆ ಮಾಡಿದ್ದ ಆಶಾ: ಬೆಳಿಗ್ಗೆ 8.30ಕ್ಕೆ ಮಗಳನ್ನು ಕಚೇರಿ ಬಳಿ ಬಿಟ್ಟು ತಂದೆ ಹೋಗಿದ್ದಾರೆ. ಆ ಹೊತ್ತಿಗೆ ಆಶಾಳ ಮೇಲೆ ನಾಗೇಶ್ ಆಸಿಡ್ ದಾಳಿ ಮಾಡಿದ್ದಾನೆ. ಮಗಳನ್ನು ಬಿಟ್ಟು ಹೋಗುವ ಹೊತ್ತಿಗೆ ತಂದೆಯ ಮೊಬೈಲ್ ಗೆ ಕರೆ ಬಂತು. ನಿಮ್ಮ ಮಗಳಿಗೆ ಯಾರೋ ಆಸಿಡ್ ಎರಚಿದ್ದಾರೆ ಎಂದು. ಅವರು ನನಗೆ ಕರೆ ಮಾಡಿದರು, ನಾವು ತಕ್ಷಣ ಸ್ಥಳಕ್ಕೆ ಹೋದೆವು ಎನ್ನುತ್ತಾರೆ.
ಇದನ್ನೂ ಓದಿ: 5 ದಿನಗಳಾದರೂ ಪತ್ತೆಯಾಗಿಲ್ಲ ಆ್ಯಸಿಡ್ ದಾಳಿ ಆರೋಪಿ: 7 ತಂಡ ರಚನೆ ಮಾಡಿದ ಕರ್ನಾಟಕ ಪೊಲೀಸ್!!
ಸ್ಥಳಕ್ಕೆ ಹೋಗಿ ನೋಡಿದಾಗ ಆಶಾಳ ದೇಹ ಮತ್ತು ಬಟ್ಟೆ ಸುಟ್ಟುಹೋಗಿತ್ತು, ಹೊಗೆ ಹೊರಗೆ ಬರುತ್ತಿತ್ತು. ಕೂಡಲೇ ಹತ್ತಿರದ ಲಕ್ಷ್ಮಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿಂದ ಸೈಂಟ್ ಜಾನ್ಸ್ ಆಸ್ಪತ್ರೆಗೆ ವರ್ಗಾಯಿಸಲಾಯಿತು ಎನ್ನುತ್ತಾರೆ. ಸೋದರಿಯ ಮದುವೆಗೆ ಬಟ್ಟೆಗಳನ್ನು ಆಯ್ಕೆ ಮಾಡಿದ್ದೆಲ್ಲವು ಆಶಾಳಂತೆ.
ಆಶಾಳಿಗೂ ಮದುವೆ ಪ್ರಸ್ತಾಪ ಬಂದಿತ್ತು. ಆದರೆ ಅಕ್ಕನ ಮದುವೆ ಮೊದಲು ಆಗಲಿ, ನಂತರ ನನ್ನ ಮದುವೆ ಬಗ್ಗೆ ಯೋಚಿಸೋಣ ಎಂದಿದ್ದಳಂತೆ. ಆದರೆ ಇಂದು ಅಕ್ಕನ ಮದುವೆಯೆಂದು ಖುಷಿಯಿಂದ ಓಡಾಡಿಕೊಂಡು ಇರಬೇಕಾದವಳು ಆಸ್ಪತ್ರೆಯಲ್ಲಿ ಐಸಿಯು ಬೆಡ್ ಮೇಲೆ ಮಲಗಿರಬೇಕಾಜ ದುಸ್ಥಿತಿ ಬಂದಿದೆ ಎಂದು ಅಳುತ್ತಾ ಸುಂದ್ರೇಶ್ ಹೇಳುತ್ತಾರೆ.