
ಮಿಥುನ್ ಚಕ್ರವರ್ತಿ
ಬೆಂಗಳೂರು: ತೀವ್ರ ಹೊಟ್ಟೆ ನೋವು, ಜ್ವರದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್ ಚಕ್ರವರ್ತಿ ಎಂದು ಕರೆಯಲ್ಪಡುವ ಅವರ ಮಗ ಮಹಾಕ್ಷಯ್ ಚಕ್ರವರ್ತಿ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಅವರು ಫಿಟ್ ಆಂಡ್ ಫೈನ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಪುತ್ರ ಮಿಮೋಹ್ ಚಕ್ರವರ್ತಿ, 'ಕಿಡ್ನಿ ಸ್ಟೋನ್ಸ್' ಕಾರಣದಿಂದಾಗಿ ಮಿಥುನ್ ಚಕ್ರವರ್ತಿ ಅವರನ್ನು ದಾಖಲಿಸಲಾಗಿತ್ತು. ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಮತ್ತು ಈಗ ಅವರು ಫಿಟ್ ಮತ್ತು ಫೈನ್ ಆಗಿದ್ದಾರೆ ಎಂದು ಮಿಮೋಹ್ ಹೇಳಿದರು.
Get well soon Mithun Da
— Dr. Anupam Hazra (@tweetanupam) April 30, 2022
তোমার দ্রুত আরোগ্য কামনা করি মিঠুন দা pic.twitter.com/yM5N24mxFf
ಮಿಥುನ್ ದಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಡಾ.ಅನುಪಮ್ ಹಜ್ರಾ ಅವರು ಆಸ್ಪತ್ರೆಯಲ್ಲಿದ್ದ ನಟನ ಫೋಟೋವನ್ನು ಹಂಚಿಕೊಂಡು ಬೇಗನೆ ಗುಣಮುಖರಾಗಿರಿ ಮಿಥುನ್ ದಾ(ನಾನು ಮಿಥುನ್ ದಾ) ಎಂದು ಬರೆದಿದ್ದರು.