ಬೆಂಗಳೂರು: ಅಪರಿಚಿತ ವ್ಯಕ್ತಿ ಆತ್ಮಹತ್ಯೆಯಿಂದ ಮನನೊಂದ ಯುವಕ ನೇಣಿಗೆ ಶರಣು!
ಕೆಂಗೇರಿ ಬಳಿ ರಸ್ತೆ ಬದಿಯ ಮರಕ್ಕೆ ನೇಣು ಬಿಗಿದುಕೊಂಡ ಅಪರಿಚಿತ ವ್ಯಕ್ತಿಯ ಆತ್ಮಹತ್ಯೆಯಿಂದ ಬೇಸತ್ತ 24 ವರ್ಷದ ಯುವಕ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
Published: 03rd May 2022 09:41 AM | Last Updated: 03rd May 2022 01:32 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೆಂಗೇರಿ ಬಳಿ ರಸ್ತೆ ಬದಿಯ ಮರಕ್ಕೆ ನೇಣು ಬಿಗಿದುಕೊಂಡ ಅಪರಿಚಿತ ವ್ಯಕ್ತಿಯ ಆತ್ಮಹತ್ಯೆಯಿಂದ ಬೇಸತ್ತ 24 ವರ್ಷದ ಯುವಕ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೊಬೈಲ್ ರಿಪೇರಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಎಸ್ ಮಂಜುನಾಥ್ ಅಪರಿಚಿತ ವ್ಯಕ್ತಿಯ ಸಾವಿನಿಂದ ಕಂಗೆಟ್ಟಿದ್ದ. 20 ದಿನಗಳ ನಂತರವೂ ಆತ ತೀವ್ರ ಭಯದಲ್ಲಿದ್ದು ಆತ್ಮಹತ್ಯೆಯ ಕನಸು ಕಾಣುವುದಾಗಿ ತಾಯಿಗೆ ಹೇಳುತ್ತಿದ್ದ.
ಮನೆಯಲ್ಲಿದ್ದ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಾನೆ. ಶುಕ್ರವಾರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯೊಳಗೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸಂಜೆ 6 ಗಂಟೆಗೆ ಅವರ ತಾಯಿ ಜಿ ಮಂಗಳಾ (44) ಕೆಲಸದಿಂದ ಮನೆಗೆ ಹಿಂದಿರುಗಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಬಂದಿದೆ. ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಕಲಿ ಕೀಲಿಯೊಂದಿಗೆ ಬಾಗಿಲನ್ನು ತೆಗೆದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿದೆ.
ಈ ಸಂಬಂಧ ಮಂಗಳಾ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಮಂಜುನಾಥ್ ಡೆತ್ ನೋಟ್ ಬರೆದಿದ್ದಾರೆ. ಡೆತ್ ನೋಟ್ ನ್ಲಿರುವ ಕೈ ಬರಹ ತಮ್ಮ ಮಗನದ್ದೇ ಎಂದು ಹೇಳಿದ್ದಾರೆ.
ಮಂಜುನಾಥನ ತಾಯಿ ಮಗನಿಗೆ ಧೈರ್ಯ ತುಂಬಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅವನು ನಿದ್ದೆಯಲ್ಲಿ ಕನವರಿಸುತ್ತಿದ್ದ, ಕಿರುಚಾಡುತ್ತಿದ್ದ, ಆತ್ಮಹತ್ಯೆಯ ಚಿತ್ರಗಳು ಕಣ್ಣು ಮುಂದೆ ಬರುತ್ತಿವೆ ಎಂದು ತಾಯಿ ಬಳಿ ಹೇಳುತ್ತಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.