ಬೆಂಗಳೂರು: ಉದ್ಯಮಿ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿ ಏಳು ಮಂದಿ ಬಂಧನ
33 ವರ್ಷದ ಮೆಟಲ್ ಫ್ಯಾಬ್ರಿಕೇಟರ್ ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾ ಲೇಔಟ್ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ.
Published: 04th May 2022 10:22 AM | Last Updated: 04th May 2022 10:22 AM | A+A A-

ಸಾ
ಬೆಂಗಳೂರು: 33 ವರ್ಷದ ಮೆಟಲ್ ಫ್ಯಾಬ್ರಿಕೇಟರ್ ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾ ಲೇಔಟ್ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ.
ಚಂದ್ರಾ ಲೇಔಟ್ ಪ್ರದೇಶದ 9ನೇ ಮುಖ್ಯ ಬಿಸಿಸಿ ಲೇಔಟ್ ನಿವಾಸಿ ಜೋಹೆಬ್ ಅಬ್ರಾರ್ ಭಾನುವಾರ ನಸುಕಿನಲ್ಲಿ ಕೊಲೆಯಾಗಿದ್ದರು.
ಮಿನಾಜ್ ನಗರದ ನಿವಾಸಿ ಅಬ್ರಾರ್ ಅವರ ತಾಯಿ ಫರೀದಾ ಸುಲ್ತಾನಾ (58) ಈ ಸಂಬಂಧ ದೂರು ದಾಖಲಿಸಿದ್ದಾರೆ. ಅಬ್ರಾರ್ ಮತ್ತು ಶಬ್ರೀನ್ ಖನ್ನೂಮ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಪ್ರಮುಖ ಆರೋಪಿ ಗಂಗೊಂಡನಹಳ್ಳಿ ನಿವಾಸಿ ನದೀಮ್ ಅಹಮದ್ ಅಬ್ರಾರ್ ಪತ್ನಿ ಶಬ್ರೀನ್ ಜತೆ ಆಪ್ತನಾಗಿದ್ದ. ಇದನ್ನು ಗಮನಿಸಿದ ಸುಲ್ತಾನಾ ಪತ್ನಿಯೊಂದಿಗೆ ಜಗಳ ಆರಂಭಿಸಿ, ಅಬ್ರಾರ್ ಜತೆ ಈ ವಿಷಯ ಹಂಚಿಕೊಂಡಿದ್ದಳು.
ಮೊಹಮ್ಮದ್ ಶಾಫಿ, ಶಬ್ಬೀರ್ ಹುಸೇನ್, ಹನ್ನಾನ್ ಪಾಷಾ, ಮೊಹಮ್ಮದ್ ಮುಬಾರಕ್, ಥಬ್ರೇಜ್ ಪಾಷಾ, ನದೀಮ್ ಪಾಷಾ ಮತ್ತು ತನ್ವೀರ್ ಪಾಷಾ ಬಂಧಿತರು. ಪೊಲೀಸರು ಆರೋಪಿಗಳಿಂದ ಕಾರು, ಬ್ಯಾಗ್ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮೃತನ ಸಹೋದ್ಯೋಗಿಯೊಬ್ಬರು ಆರೋಪಿಗಳು ಲಗೇಜ್ ಕ್ಯಾರಿಯರ್ನಲ್ಲಿ ಅಬ್ರಾರ್ ಅವರನ್ನು ಅಪಹರಿಸುವುದನ್ನು ನೋಡಿದ್ದಾರೆ.
ಆತನ ಸಾವಿನ ಬಗ್ಗೆ ತಿಳಿದ ಸಹೋದ್ಯೋಗಿ ಸುಲ್ತಾನಾಗೆ ಆರೋಪಿಗಳ ಹೆಸರಿನ ವಿವರಗಳನ್ನು ನೀಡಿದ್ದಾನೆ. ''ಪ್ರಮುಖ ಆರೋಪಿ ತನ್ನ ಸಹಚರರೊಂದಿಗೆ ಶನಿವಾರ ರಾತ್ರಿ ಗಂಗೊಂಡನಹಳ್ಳಿಯಿಂದ ಅಪಹರಿಸಿದ್ದರು. 10ನೇ ಮೇನ್ನಲ್ಲಿರುವ ಜಿಮ್ ಬಳಿ ಭಾನುವಾರ ಮುಂಜಾನೆ ಶವ ಪತ್ತೆಯಾಗಿದೆ. ಕೊಲೆಯಲ್ಲಿ ಶಬ್ರೀನ್ ಪಾತ್ರ ಇದೆಯೇ ಎಂಬುದನ್ನು ಪತ್ತೆ ಹಚ್ಚುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.