ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತಕ್ಕೆ ಒಂದು ವರ್ಷ: 12 ಮೃತ ರೋಗಿಗಳ ಕುಟುಂಬಕ್ಕೆ ಸರ್ಕಾರದಿಂದ ಇನ್ನೂ ಸಿಗದ ಪರಿಹಾರ!
ಕಳೆದ ವರ್ಷ 2021ರಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ರಾಷ್ಟ್ರದ ಗಮನ ಸೆಳೆದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 36 ರೋಗಿಗಳ ಸಾವಿಗೆ ಕಾರಣವಾದ ಆಮ್ಲಜನಕ ಕೊರತೆ ದುರಂತ ಸಂಭವಿಸಿ ಒಂದು ವರ್ಷ ಕಳೆದಿದೆ.
Published: 04th May 2022 08:39 AM | Last Updated: 04th May 2022 01:57 PM | A+A A-

ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ
ಮೈಸೂರು: ಕಳೆದ ವರ್ಷ 2021ರಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ರಾಷ್ಟ್ರದ ಗಮನ ಸೆಳೆದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 36 ರೋಗಿಗಳ ಸಾವಿಗೆ ಕಾರಣವಾದ ಆಮ್ಲಜನಕ ಕೊರತೆ ದುರಂತ ಸಂಭವಿಸಿ ಒಂದು ವರ್ಷ ಕಳೆದಿದೆ.
ಆದರೆ ಸಂತ್ರಸ್ತರು ನ್ಯಾಯಕ್ಕಾಗಿ ಕಂಡ ಕಂಡ ಅಧಿಕಾರಿಗಳು, ಸಚಿವರುಗಳ ಮನೆ, ಕಚೇರಿಗಳನ್ನು ಎಡತಾಕುತ್ತಿದ್ದಾರೆಯೇ ಹೊರತು ಇದುವರೆಗೆ ಪರಿಹಾರ ಸಿಕ್ಕಿಲ್ಲ. ಸಂತ್ರಸ್ತ ಕುಟುಂಬಗಳನ್ನು ಆಳವಾದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸಿದ್ದು, ದಿನದ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಬಂದಿದೆ.
ಕುಟುಂಬ ಸದಸ್ಯರನ್ನು ಕಳೆದುಕೊಂಡ 36 ಕುಟುಂಬಗಳ ಪೈಕಿ 12 ಕುಟುಂಬಗಳು ಪರಿಹಾರಕ್ಕಾಗಿ ಮತ್ತು ಕುಟುಂಬವನ್ನು ಪೋಷಿಸಲು ತಾತ್ಕಾಲಿಕ ಉದ್ಯೋಗಕ್ಕಾಗಿ ರಾಜಕೀಯ ನಾಯಕರ ಬಾಗಿಲು ತಟ್ಟಿದ್ದರೂ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ.
ದುರಂತದ ಕುರಿತು ಸರ್ಕಾರವು ಟೀಕೆಗೆ ಒಳಗಾಗಿದ್ದರಿಂದ, ರೋಗಿಗಳ ಸಾವಿನ ತನಿಖೆಗಾಗಿ ಹೈಕೋರ್ಟ್ ನ್ಯಾಯಾಧೀಶ ಎನ್ ವೇಣು ಗೋಪಾಲ್ ನೇತೃತ್ವದ ಕಾನೂನು ಸೇವಾ ಪ್ರಾಧಿಕಾರ ಸಮಿತಿಯನ್ನು ನೇಮಿಸಿತು. ಸಮಿತಿಯು ಹೈಕೋರ್ಟ್ ಗೆ ವರದಿಯನ್ನು ಸಲ್ಲಿಸಿತು. ಸರ್ಕಾರವು 24 ಕುಟುಂಬಗಳಿಗೆ ಪರಿಹಾರವನ್ನು ನೀಡಿತು. ಉಳಿದವರಿಗೆ ಅದನ್ನು ನಿರಾಕರಿಸಿತು,
ಈ ಕುಟುಂಬಗಳು ಸರ್ಕಾರದ ಪ್ರತಿನಿಧಿಗಳು ಹೇಳುವ ರೀತಿ ಅಲ್ಲ, ಪರಿಸ್ಥಿತಿ ವಿಭಿನ್ನ ಎನ್ನುತ್ತಾರೆ, ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ, ತಾತ್ಕಾಲಿಕ ಉದ್ಯೋಗ ಮತ್ತು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಕೋರಿದ್ದಾರೆ. ಮೈಸೂರಿನ ಚಾಮರಾಜನಗರ ದುರಂತದ ಕುರಿತು ಸಾರ್ವಜನಿಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಎ ಪಾಟೀಲ್ ಆಯೋಗದ ಮುಂದೆ ಕೆಲವರು ಹಾಜರಾಗಿ ಜನರ ಕುಂದುಕೊರತೆಗಳನ್ನು ಆಲಿಸಿದರು. ದುರಂತದ ಬಗ್ಗೆ ಅವರು ಅಂದಿನ ಜಿಲ್ಲಾಧಿಕಾರಿ ಎಂ.ಆರ್.ರವಿ, ಮೈಸೂರು ಡಿಸಿ ರೋಹಿಣಿ ಸಿಂಧೂರಿ, ವೈದ್ಯಕೀಯ ಕಾಲೇಜು ಡೀನ್, ಡಿಎಚ್ಒ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರತ್ತ ಬೆರಳು ತೋರಿಸಿದ್ದರು.
ಇದನ್ನೂ ಓದಿ: 'ಚಾಮರಾಜನಗರ ಆಸ್ಪತ್ರೆ ದುರಂತ ನನ್ನ ತಪ್ಪಿನಿಂದ ಆಗಿದ್ದಲ್ಲ, ಊಹಾಪೋಹ ಹಬ್ಬಿಸಬೇಡಿ': ಮೈಸೂರು ಡಿಸಿ ರೋಹಿಣಿ ಸಿಂಧೂರಿ
ಪಾಟೀಲ್ ಆಯೋಗಕ್ಕೆ ಭೇಟಿ ನೀಡಿದ ಬಿಜೆಪಿ ರೈತ ಮೋರ್ಚಾ ಸದಸ್ಯ ಮಲ್ಲೇಶ್, ಪೌರಕಾರ್ಮಿಕರ ಹಠಮಾರಿ ಧೋರಣೆಯೇ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸುತ್ತಾರೆ. ಪತಿಯನ್ನು ಕಳೆದುಕೊಂಡಿರುವ ಎರಡು ಮಕ್ಕಳ ತಾಯಿ ಸಿದ್ದರಾಜಮ್ಮ ತಾತ್ಕಾಲಿಕ ಉದ್ಯೋಗ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಅವರಿಗೆ ಕೋವಿಡ್ ಇಲ್ಲ ಎಂದು ಸರ್ಕಾರ ಹೇಳಿದ್ದರಿಂದ ಅವರಿಗೆ ಪರಿಹಾರವನ್ನು ನೀಡಲಾಗಿಲ್ಲ ಎಂದು ನೊಂದು ನುಡಿಯುತ್ತಾರೆ.
ನನ್ನ ಪತಿ ಮಧ್ಯರಾತ್ರಿ ಆಮ್ಲಜನಕ ಕೊರತೆಯಿಂದ ತೀರಿಕೊಂಡರೂ ಸರ್ಕಾರ ಪರಿಹಾರ ನೀಡುತ್ತಿಲ್ಲ. ಪರಿಹಾರ ಮತ್ತು ನ್ಯಾಯದ ಭರವಸೆ ನೀಡಿದ ಸರ್ಕಾರ ತನ್ನ ಕುಟುಂಬಕ್ಕೆ ದ್ರೋಹ ಮಾಡಿದೆ ಎಂದು ಆರೋಪಿಸುತ್ತಾರೆ.
ಅಧಿಕಾರಿಗಳು ತಮ್ಮ ಪತಿ ಕೋವಿಡ್ ನೆಗೆಟಿವ್ ಎಂದು ಹೇಳಿದ್ದರಿಂದ ತಮ್ಮ ಕುಟುಂಬಕ್ಕೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ ಎಂದು ಬಿಸಲವಾಡಿಯ ಜ್ಯೋತಿ ಹೇಳುತ್ತಾರೆ. ನಮ್ಮ ಇಬ್ಬರು ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ ಜೆಎಸ್ಎಸ್ ಪೀಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎನ್ನುತ್ತಾರೆ.
ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ ಎಂದು ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ಆರೋಪಿಸುತ್ತಾರೆ. ಹತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಪರಿಹಾರ ನಿರಾಕರಿಸಲಾಗಿದೆ. ಆಯೋಗದ ವರದಿಯನ್ನು ಬಹಿರಂಗಪಡಿಸಬೇಕು. ಆರೋಗ್ಯ ಸಚಿವರು, ಡಿಸಿಗಳು ಮತ್ತು ಇತರರು ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.