ಬೆಂಗಳೂರು: ಡ್ರಗ್ ವ್ಯಸನಿ ಗಂಡನಿಂದ ನಿತ್ಯವೂ ಕಿರುಕುಳ; ಎಂಎಸ್ ಸಿ ಪದವೀಧರೆ ಆತ್ಮಹತ್ಯೆ!
ಪತಿಯ ಕಿರುಕುಳದಿಂದ ಬೇಸತ್ತ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ತ್ಯಾಗರಾಜನಗರದಲ್ಲಿ ಮಂಗಳವಾರ ನಡೆದಿದೆ.
Published: 05th May 2022 08:40 AM | Last Updated: 05th May 2022 01:21 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಪತಿಯ ಕಿರುಕುಳದಿಂದ ಬೇಸತ್ತ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ತ್ಯಾಗರಾಜನಗರದಲ್ಲಿ ಮಂಗಳವಾರ ನಡೆದಿದೆ.
ವಂದನಾ(25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ನಗರದ ಕೋರ್ಟ್ ರಸ್ತೆಯ ನಿವಾಸಿ ಗೌತಮ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮೃತ ವಂದನಾ ಎಂಎಸ್ ಸಿ ಪದವೀಧರೆಯಾಗಿದ್ದು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ಚೈನ್ ಸ್ಮೋಕರ್ ಆಗಿದ್ದ ವಂದನಾ ಪತಿ, ಗೌತಮ್ ಮದುವೆ ನಂತರ ಧೂಮಪಾನ ತ್ಯಜಿಸುವುದಾಗಿ ಆಕೆಗೆ ಭರವಸೆ ನೀಡಿದ್ದನು, ಆದರೆ ನಂತರ ಅವನು ಮಾದಕ ವ್ಯಸನಿಯಾದ. ಜೊತೆಗೆ ಡ್ರಗ್ಸ್ ಖರೀದಿಸಲು ಅವಳ ಸಂಬಳವನ್ನು ನೀಡುವಂತೆ ಪೀಡಿಸಲು ಪ್ರಾರಂಭಿಸಿದನು.
ಗೌತಮ್ ತಿಂಗಳಿಗೆ 12,000 ರೂಪಾಯಿ ಸಂಪಾದಿಸುತ್ತಿದ್ದ ಆ ಹಣವನ್ನು ಡ್ರಗ್ಸ್ ಗಾಗಿ ಖರ್ಚು ಮಾಡುತ್ತಿದ್ದರು. ಹೆಚ್ಚಿನ ಹಣಕ್ಕಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಸಿಗರೇಟ್ ನಿಂದ ಆಕೆಯ ಮುಖವನ್ನು ಸುಟ್ಟಿದ್ದ.
ಮದುವೆ ವೇಳೆ ಆಕೆಯಿಂದ 2 ಲಕ್ಷ ರೂ ಪಡೆದಿದ್ದ. ಕಳೆದ ಎರಡು ತಿಂಗಳಿಂದ ಆಕೆ ಹಣ ನೀಡಲು ನಿರಾಕರಿಸಿದಾಗ ಆತ ಆಕೆಯ ಲ್ಯಾಪ್ಟಾಪ್ ಅನ್ನು ತುಂಡು ತುಂಡಾಗಿ ಒಡೆದಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.