ಸತ್ತ ವ್ಯಕ್ತಿಯ ಆಸ್ತಿ ಲಪಟಾಯಿಸಿದ ಆರೋಪ: ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ ಎಫ್ ಐ ಆರ್

ಮೃತ ವ್ಯಕ್ತಿಗೆ‌ ಸೇರಿದ ಆಸ್ತಿ ಲಪಟಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಹೊಳಲ್ಕೆರೆ ಬಿಜೆಪಿ  ಶಾಸಕ ಎಂ.ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.  

Published: 05th May 2022 10:46 AM  |   Last Updated: 05th May 2022 01:36 PM   |  A+A-


M.Chandrappa

ಎಂ.ಚಂದ್ರಪ್ಪ

Online Desk

ಚಿತ್ರದುರ್ಗ: ಮೃತ ವ್ಯಕ್ತಿಗೆ‌ ಸೇರಿದ ಆಸ್ತಿ ಲಪಟಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.  

ಶಾಸಕ ಎಂ.ಚಂದ್ರಪ್ಪ ಪತ್ನಿ ಚಂದ್ರಕಲಾ, ಪುತ್ರರಾದ ರಘುಚಂದನ್, ದೀಪ್ ಚಂದನ್ ವಿರುದ್ಧ ಕೇಸ್ ದಾಖಲಿಸಲಾಗಿದೆ. ಶ್ರೀಧರ್ ಎಂಬುವರಿಗೆ ಸೇರಿ‌‌‌ದ ನಿವೇಶನಗಳನ್ನ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಸಕ ಎಂ.ಚಂದ್ರಪ್ಪ ಅವರ ಪತ್ನಿ ಚಂದ್ರಕಲಾ, ಪುತ್ರರಾದ ಎಂ.ಸಿ.ರಘುಚಂದನ್, ಎಂ.ಸಿ. ದೀಪ್ ಚಂದನ್, ಉದ್ಯಮಿ ಕೆ.ನಾಗರಾಜ್‌, ಉಪನೋಂದಣಾಧಿಕಾರಿ ನಾಗರತ್ನಮ್ಮ ಸೇರಿ ಇತರರ ವಿರುದ್ಧ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ದೂರಿನ ವಿಚಾರಣೆ ನಡೆಸಿದ ಹೊಳಲ್ಕೆರೆಯ ಹಿರಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಸೂಚನೆಯ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಹೊಳಲ್ಕೆರೆಯ ಎಂ.ಜಿ.ಶ್ರೀಧರ್‌ ಎಂಬುವರು ಉದ್ಯಮಿ ಕೆ.ನಾಗರಾಜ್‌ ಅವರಿಗೆ ವ್ಯವಹಾರದ ಉದ್ದೇಶದಿಂದ ಜನರಲ್‌ ಪವರ್‌ ಆಫ್‌ ಅಟಾರ್ನಿ (ಜಿಪಿಎ) ಅಧಿಕಾರವನ್ನು 2016ರಲ್ಲಿ ನೀಡಿದ್ದರು. ಈ ನಡುವೆ ಶ್ರೀಧರ್‌ ಸಹೋದರಿ ಲತಾ ಸುಂದರ್‌ ಎಂಬುವರು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಮೊದಲೇ ಶ್ರೀಧರ್‌ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಈ ಸಂದರ್ಭವನ್ನು ದುರುಪಯೋಗ ಮಾಡಿಕೊಂಡ ನಾಗರಾಜ್‌, ಶಾಸಕರ ಕುಟುಂಬದ ಸದಸ್ಯರ ಹೆಸರಿಗೆ ಆಸ್ತಿ ಕ್ರಯಪತ್ರ ಮಾಡಿಕೊಟ್ಟಿದ್ದಾರೆ. ಹೊಳಲ್ಕೆರೆ ಉಪನೋಂದಣಾಧಿಕಾರಿ ನಾಗರತ್ನ ಅವರೂ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದು ಶ್ರೀಧರ್‌ ಅವರ ಮತ್ತೊಬ್ಬ ಸಹೋದರಿ ಎ.ಜಿ.ಪದ್ಮಜಾ ಅವರಿಗೆ ಗೊತ್ತಾಗಿದೆ. ವಂಚಿಸಿ ಆಸ್ತಿ ಕಬಳಿಕೆಗೆ ಪ್ರಯತ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಪದ್ಮಜಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಆರೋಪಿಗಳಾದ ನಾಗರಾಜ್, ಶಾಸಕ ಚಂದ್ರಪ್ಪ ಪತ್ನಿ ಚಂದ್ರಕಲಾ, ಪುತ್ರ‌ ರಘು ಚಂದನ್, ದೀಪ್ ಚಂದನ್ ಹಾಗೂ ಸಬ್ ರಿಜಿಸ್ಟಾರ್ ನಾಗರತ್ನ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು ದಾಖಲಾಗಿದೆ.  ಕೋರ್ಟ್ ಮೂಲಕ ಠಾಣೆಗೆ ಸೂಚನೆ ಬಂದ ಹಿನ್ನೆಲೆಯಲ್ಲಿ ಏ. 30 ರಂದು ಕಲಂ 404, 405, 415, 420, 423, 463, 464, 466, 468, 470, ರೆ/ವಿ 149 ಅಡಿಯಲ್ಲಿ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.


Stay up to date on all the latest ರಾಜ್ಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp