ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವರ್ಗಾವಣೆ, ನೂತನ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ನೇಮಕ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಾಗಿದ್ದ ಗೌರವ್ ಗುಪ್ತಾ ಅವರನ್ನು ರಾಜ್ಯ ಸರ್ಕಾರ ಗುರುವಾರ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ತುಷಾರ್ ಗಿರಿನಾಥ್ ಅವರನ್ನು ನೇಮಕ ಮಾಡಿದೆ.
Published: 05th May 2022 05:23 PM | Last Updated: 05th May 2022 05:32 PM | A+A A-

ಗೌರವ್ ಗುಪ್ತಾ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಾಗಿದ್ದ ಗೌರವ್ ಗುಪ್ತಾ ಅವರನ್ನು ರಾಜ್ಯ ಸರ್ಕಾರ ಗುರುವಾರ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ತುಷಾರ್ ಗಿರಿನಾಥ್ ಅವರನ್ನು ನೇಮಕ ಮಾಡಿದೆ.
ಗೌರವ್ ಗುಪ್ತಾ ಅವರನ್ನು ಮೂಲಕ ಸೌಕರ್ಯ ಅಭಿವೃದ್ಧಿ ಇಲಾಖೆ ಎಸಿಎಸ್ ಆಗಿ ನೇಮಕ ಮಾಡಲಾಗಿದೆ.
ಗೌರವ್ ಗುಪ್ತಾ ಸೇರಿದಂತೆ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ಮನೋಜ್ ಜೈನ್ ನೇಮಕಗೊಂಡಿದ್ದಾರೆ.
ದೆಹಲಿ ಕರ್ನಾಟಕ ಭವನದ ಉಪಸ್ಥಾನೀಯ ಆಯುಕ್ತರಾಗಿ ಖುಷ್ಬೂ ಚೌಧರಿ, ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಕ್ಯಾ. ಡಾ.ರಾಜೇಂದ್ರ, ಕೆಆರ್ಐಡಿಎಲ್ ಎಂಡಿ ಆಗಿ ಎಂ.ಜಿ.ಹಿರೇಮಠ, ಬೆಳಗಾವಿ ಜಿಲ್ಲಾಧಿಕಾರಿಯಾಗಿ ಆಗಿ ನಿತೇಶ್ ಪಾಟೀಲ್, ಧಾರವಾಡ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗ್ಡೆ ವರ್ಗಾವಣೆಯಾಗಿದ್ದಾರೆ.
ಇದನ್ನು ಓದಿ: ನಗರ ಪ್ರದೇಶಗಳು ಜಲಾವೃತಗೊಳ್ಳದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗೌರವ್ ಗುಪ್ತಾ ಸೂಚನೆ
ಇನ್ನೂ ಕೆಎಸ್ಆರ್ಟಿಸಿ ನಿರ್ದೇಶಕರಾಗಿ ಡಾ. ನವೀನ್ ಭಟ್, ಬಾಗಲಕೋಟೆ ಜಿಲ್ಲಾಧಿಕಾರಿ ಭೂ ಬಾಲನ್ ಟಿ., ಇಡಿಸಿಎಸ್ ನಿರ್ದೇಶಕರಾಗಿ ಡಾ.ದಿನೇಶ್ ಸಸಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಎಂಡಿ ಭರತ್ ಎಸ್, ಕೆಯುಐಡಿಎಫ್ಸಿ ಎಂಡಿಯಾಗಿ ಶಿಲ್ಪಾ ಎಂ, ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಪ್ರಸನ್ನ ಹೆಚ್, ಕಲಬುರಗಿ ಜಿ.ಪಂ. ಸಿಇಒ ಆಗಿ ಡಾ.ಗಿರೀಶ್ ದಿಲೀಪ್ ಬಾಡೋಲೆ ಅವರನ್ನು ವರ್ಗಾವಣೆ ಮಾಡಲಾಗಿದೆ.