
ಆಸಿಡ್ ದಾಳಿ ಪ್ರಕರಣದ ಆರೋಪಿ ಬಂಧಿಸುವಂತೆ ಒತ್ತಾಯಿಸಿ ಎಐಎಂಎಸ್ಎಸ್ ಕಾರ್ಯಕರ್ತರು ಶುಕ್ರವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು
ಬೆಂಗಳೂರು: ಸುಂಕದಕಟ್ಟೆಯಲ್ಲಿ 24 ವರ್ಷದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದು ವಾರಗಳು ಕಳೆದರೂ ಆರೋಪಿ ಇನ್ನೂ ಪತ್ತೆಯಾಗಿಲ್ಲ.
ಆರೋಪಿ ನಾಗೇಶ್ ಗಾಗಿ ಪೊಲೀಸರ 7 ತಂಡಗಳ ಹುಡುಕಾಟ ಆರಂಭಿಸಿದ್ದರೂ ಆರೋಪಿ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ.
ಯುವತಿಗೆ ಆರೋಪಿ ನಾಗೇಶ್ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದಾಗ, ಏಪ್ರಿಲ್ 28 ರಂದು ಬೆಳಿಗ್ಗೆ 8.30 ರ ಸುಮಾರಿಗೆ ಆಕೋಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ.
ಇದನ್ನೂ ಓದಿ: ಮುಂದೂಡದೆ ಸಹೋದರಿಯ ಮದುವೆ ಮುನ್ನಡೆಸಿ: ಕುಟುಂಬಸ್ಥರಿಗೆ ಆ್ಯಸಿಡ್ ದಾಳಿ ಸಂತ್ರಸ್ತೆ ಮನವಿ
ಪ್ರಕರಣ ಸಂಬಂಧ ಆರೋಪಿ ಕುಟುಂಬಸ್ಥರನ್ನು, ಆರೋಪಿ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಆತನೊಂದಿಗೆ ಕೆಲಸ ಮಾಡುತ್ತಿದ್ದ ಇತರ ನೌಕರರನ್ನೂ ಪೊಲೀಸರು ವಿಚಾರಣೆಗೊಳಿಸಿದ್ದಾರೆ. ಆದರೆ, ಯಾವುದೇ ಸುಳಿವುಗಳು ಸಿಕ್ಕಿಲ್ಲ.
ದಾಳಿ ನಡೆಸಿದ ದಿನದಿಂದಲೂ ಆರೋಪಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಯಾವುದೇ ಬ್ಯಾಂಕ್ ವ್ಯವಹಾರಕ್ಕೂ ಆತ ಪ್ರಯತ್ನ ಮಾಡಿಲ್ಲ. ಪ್ರಕರಣದಲ್ಲಿ ಯಾವುದೇ ಪ್ರಗತಿ ಸಾಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಇದೆಲ್ಲವನ್ನೂ ಗಮನಿಸುತ್ತಿರುವ ಪೊಲೀಸರು ಇದು ಪೂರ್ವನಿಯೋಜಿತ ಕೃತ್ಯ ಎಂದು ಹೇಳುತ್ತಿದ್ದಾರೆ.
ಈ ನಡವೆ ಆರೋಪಿ ನಾಗೇಶ್ ಚಿಕ್ಕಪ್ಪ ಅವರು ಪೊಲೀಸರ ವಿಚಾರಣೆಯಿಂದ ತಮಗೆ ಪ್ರತಿನಿತ್ಯ ಸಮಸ್ಯೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆ್ಯಸಿಡ್ ದಾಳಿ ಸಂತ್ರಸ್ಥೆಗೆ 2ನೇ ಸರ್ಜರಿ; ಆ್ಯಸಿಡ್ ಮಾರಾಟಗಾರನನ್ನೂ ಹೊಣೆಯಾಗಿಸಿ ಎಂದ ಮಹಿಳಾ ಆಯೋಗ!
ನಾಗೇಶ್ ನನ್ನ ಸಂಬಂಧಿಯಾಗಿದ್ದರೂ ಕೂಡ, ನಾವು ಯಾವುದೇ ಬಾಂಧವ್ಯವನ್ನು ಹೊಂದಿರಲಿಲ್ಲ. ಆತ ನಮ್ಮ ಮನೆಗೆ ಬರುತ್ತಿರಲಿಲ್ಲ. ನಾಗೇಶ್ ಸುಮಾರು 10 ವರ್ಷಗಳ ಹಿಂದೆಯೇ ನಗರಕ್ಕೆ ಸ್ಥಳಾಂತರಗೊಂಡಿದ್ದರು. ಸ್ವಂತ ಗಾರ್ಮೆಂಟ್ಸ್ ಪ್ರಾರಂಭಿಸುವುದಕ್ಕೂ ಮೊದಲು ಕೆಲಸ ಮಾಡಿಕೊಂಡಿದ್ದ. ನಾಗೇಶ್ ಗಾಗಿ ಪೊಲೀಸರು ಪ್ರತಿನಿತ್ಯ ನಮ್ಮನ್ನು ವಿಚಾರಣೆಗೊಳಪಡಿಸುತ್ತಿದ್ದು, ತೀವ್ರ ಬೇಸರವಾಗುತ್ತಿದೆ ಎಂದು ಕೃಷ್ಣಪ್ಪ ಎಂಬುವವರು ಹೇಳಿದ್ದಾರೆ.