ಕೋವಿಡ್ 19 ಸಾವಿನಲ್ಲಿ ಸುಳ್ಳು ಲೆಕ್ಕ ಹೇಳಿ ಜಗತ್ತಿನ ಕಣ್ಣಿಗೆ ಮಣ್ಣೆರಚಿದ್ದ ಕೇಂದ್ರ ಸರ್ಕಾರ: ದಿನೇಶ್ ಗುಂಡೂರಾವ್
2020-21ರಲ್ಲಿ ಭಾರತವೊಂದರಲ್ಲೇ ಕೋವಿಡ್-19 ಗೆ 47 ಲಕ್ಷ ಜನರು ಮೃತಪಟ್ಟಿದ್ದಾರೆ. ಆದರೆ, ವಿಶ್ವದ ಮುಂದೆ ಮಾನ ಮುಚ್ಚಿಕೊಳ್ಳಲು ಮೋದಿ ಸರ್ಕಾರ ಸತ್ತವರ ಸಂಖ್ಯೆ ಕೇವಲ 4.8 ಲಕ್ಷ ಎಂದು ಜನರ ಹಾದಿ ತಪ್ಪಿಸಿತ್ತು ಎಂದು ರಾಜ್ಯ ಕಾಂಗ್ರೆಸ್ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 06th May 2022 11:50 AM | Last Updated: 06th May 2022 01:48 PM | A+A A-

ದಿನೇಶ್ ಗುಂಡೂರಾವ್
ಬೆಂಗಳೂರು: ಕೋವಿಡ್ 19 ಸಾವಿನಲ್ಲಿ ಸುಳ್ಳು ಲೆಕ್ಕ ಹೇಳಿ ಜಗತ್ತಿನ ಕಣ್ಣಿಗೆ ಮಣ್ಣೆರಚಿದ್ದ ಕೇಂದ್ರ ಸರ್ಕಾರದ ಸುಳ್ಳಿನ ಬಂಡವಾಳ ವಿಶ್ವ ಆರೋಗ್ಯ ಸಂಸ್ಥೆಯಿಂದ ಬಯಲಾಗಿದೆ. 2020-21ರಲ್ಲಿ ಭಾರತವೊಂದರಲ್ಲೇ ಕೋವಿಡ್-19 ಗೆ 47 ಲಕ್ಷ ಜನರು ಮೃತಪಟ್ಟಿದ್ದಾರೆ. ಆದರೆ, ವಿಶ್ವದ ಮುಂದೆ ಮಾನ ಮುಚ್ಚಿಕೊಳ್ಳಲು ಮೋದಿ ಸರ್ಕಾರ ಸತ್ತವರ ಸಂಖ್ಯೆ ಕೇವಲ 4.8 ಲಕ್ಷ ಎಂದು ಜನರ ಹಾದಿ ತಪ್ಪಿಸಿತ್ತು ಎಂದು ರಾಜ್ಯ ಕಾಂಗ್ರೆಸ್ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಸಾವು ಕುರಿತು ವಿಶ್ವ ಆರೋಗ್ಯ ಸಂಸ್ಥೆ ವರದಿ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
ಈ ಸಂಬಂಧ ಅವರಿಂದು ಟ್ವೀಟ್ ಮಾಡಿದ್ದು, ಕೋವಿಡ್ 2ನೇ ಅಲೆಯಲ್ಲಿ ಭಾರತ ಸಾವಿನ ಮನೆಯಾಗಿತ್ತು. ಗಂಗೆಯಲ್ಲಿ ಶವಗಳು ತೇಲಿದ್ದವು. ಆಕ್ಸಿಜನ್ ಇಲ್ಲದೆ ಸಾಲು ಸಾಲು ಹೆಣಗಳು ಬಿದ್ದವು. ಜನ ದೀಪದ ಹುಳುಗಳಂತೆ ಸಾಯುತ್ತಿದ್ದರೂ ಮೋದಿಯವರು ದೇಶ ಕೊರೋನಾ ವಿರುದ್ಧ ಗೆದಿದ್ದೆ ಎಂದು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡರು. ಈ ಮೂಲಕ ಸಾವಿನ ಲೆಕ್ಕದ ಸತ್ಯ ಮರೆಮಾಚಿದ್ದರು. ಈಗ ಡಬ್ಲ್ಯೂ ಎಚ್ ಒ ವರದಿಯಿಂದ ಸತ್ಯ ದರ್ಶನವಾಗಿದೆ ಎಂದಿದ್ದಾರೆ.
ಕೋವಿಡ್ ಸಾವಿನ ಸುಳ್ಳು ಲೆಕ್ಕ ಹೇಳಿದ ಮೋದಿ ಸರ್ಕಾರಕ್ಕೆ ಸತ್ತವರ ಮನೆಯ ಶಾಪ ತಟ್ಟದೇ ಇರದು. ಸುಳ್ಳು ಹೇಳಿ ಸತ್ಯವನ್ನು ಬಹಳ ದಿನ ಅದುಮಿಡಲು ಸಾಧ್ಯವಿಲ್ಲ ಎಂಬುದು ವಿಶ್ವಸಂಸ್ಥೆ ವರದಿಯಿಂದ ಸಾಬೀತಾಗಿದೆ. ಕೋವಿಡ್ ಕಾಲದಲ್ಲಿ ಕೇಂದ್ರದ ನಿರ್ಲಕ್ಷ್ಯ, ಮೋದಿ ಅವರ ಬಿಟ್ಟಿ ಪ್ರಚಾರದ ಹುಚ್ಚು 47 ಲಕ್ಷ ಜನರ ಸಾವಿಗೆ ಕಾರಣ. ಈ ಸಾವುಗಳಿಗೆ ಕೇಂದ್ರವೇ ಹೊಣೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
3
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 6, 2022
ಕೋವಿಡ್ ಸಾವಿನ ಸುಳ್ಳು ಲೆಕ್ಕ ಹೇಳಿದ ಮೋದಿ ಸರ್ಕಾರಕ್ಕೆ ಸತ್ತವರ ಮನೆಯ ಶಾಪ ತಟ್ಟದೇ ಇರದು.
ಸುಳ್ಳು ಹೇಳಿ ಸತ್ಯವನ್ನು ಬಹಳ ದಿನ ಅದುಮಿಡಲು ಸಾಧ್ಯವಿಲ್ಲ ಎಂಬುದು #WHO ವರದಿಯಿಂದ ಸಾಬೀತಾಗಿದೆ. ಕೋವಿಡ್ ಕಾಲದಲ್ಲಿ ಕೇಂದ್ರದ ನಿರ್ಲಕ್ಷ್ಯ,ಮೋದಿಯವರ ಬಿಟ್ಟಿ ಪ್ರಚಾರದ ಹುಚ್ಚು 47 ಲಕ್ಷ ಜನರ ಸಾವಿಗೆ ಕಾರಣ.
ಈ ಸಾವುಗಳಿಗೆ ಕೇಂದ್ರವೇ ಹೊಣೆ.