'ಪರ್ದೆ ಕೆ ಪೀಚೆ ಕ್ಯಾ ಹೆ'? ಬಿಬಿಎಂಪಿ ಕಾಮಗಾರಿ ವಿಳಂಬವನ್ನು ಮುಚ್ಚಲು ಹಸಿರು ಹೊದಿಕೆ? ನೆಟ್ಟಿಗರಿಂದ ಟೀಕೆ
"ಬೆಂಗಳೂರು ಹಸಿರು ಬಣ್ಣಕ್ಕೆ ತಿರುಗುತ್ತಿದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಟೀಕೆ ಮಾಡಿದ್ದಾರೆ. ಹಳೆ ಏರ್ಪೋರ್ಟ್ ರಸ್ತೆಯಲ್ಲಿ ಕಾಮಗಾರಿಯನ್ನು ಮುಚ್ಚಲು ಬಿಬಿಎಂಪಿ ಹಸಿರು ಪರದೆಗಳನ್ನು ಹಾಕಿದೆ.
Published: 06th May 2022 11:19 AM | Last Updated: 06th May 2022 01:47 PM | A+A A-

ಹಸಿರು ಪರದೆಯನ್ನು ಮುಚ್ಚಿರುವುದು
ಬೆಂಗಳೂರು: "ಬೆಂಗಳೂರು ಹಸಿರು ಬಣ್ಣಕ್ಕೆ ತಿರುಗುತ್ತಿದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಟೀಕೆ ಮಾಡಿದ್ದಾರೆ. ಹಳೆ ಏರ್ಪೋರ್ಟ್ ರಸ್ತೆಯಲ್ಲಿ ಕಾಮಗಾರಿಯನ್ನು ಮುಚ್ಚಲು ಬಿಬಿಎಂಪಿ ಹಸಿರು ಪರದೆಗಳನ್ನು ಹಾಕಿದೆ. ಬ್ರಾಂಡ್ ತಂತ್ರಜ್ಞ ಮತ್ತು ಹರೀಶ್ ಬಿಜೂರ್ ಕನ್ಸಲ್ಟ್ಸ್ ಇಂಕ್ನ ಸಂಸ್ಥಾಪಕ ಹರೀಶ್ ಬಿಜೂರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಐಪಿಗಳು ಬರುವಾಗ ಹಸಿರು ಪರದೆಯನ್ನು ಹಾಕಿ ಮುಚ್ಚುತ್ತಾರೆ ಎಂದು ಟೀಕೆ ಮಾಡಿದ್ದಾರೆ.
ಗುರುವಾರ ತಮ್ಮ ಟ್ವೀಟ್ನಲ್ಲಿ, ಬಿಜೂರ್ ಅವರು, “ಪರ್ಡೆ-ಕೆ-ಪೀಚೆ-ಕ್ಯಾ-ಹೈ?’ ಬೆಂಗಳೂರಿನಲ್ಲಿರುವ ನಮ್ಮ ಹೊಸ #VIPRoad ಅನ್ನು #OldAirportRoad ಎಂದು ಮರುಹೆಸರಿಸುವ ಸಮಯ! ಪ್ರತಿ ಬಾರಿ ಈ ರಸ್ತೆಯಲ್ಲಿ ವಿಐಪಿ ಸಂಚಾರ, ಹಸಿರು ಪರದೆಗಳು ಬಿಬಿಎಂಪಿ ಕಾಮಗಾರಿ ಪ್ರಗತಿಯಲ್ಲಿವೆ! ಎಂಬ ಬೋರ್ಡು ಇರುತ್ತದೆ. ವಿಐಪಿಗಳು ಈ ಪ್ರದೇಶದಲ್ಲಿ ಬಂದಾಗಲೆಲ್ಲಾ ಪರದೆಗಳು ಬರುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಹರೀಶ್ ಬಿಜೂರು.
iTWEET:"Parde-ke-peeche-kya-hai"? Time to re-name #OldAirportRoad our new #VIPRoad in Bengaluru! Everytime there is VIP movement on this road, green curtains come up to cover BBMP work-in-progress! And once the VIP has gone by, its all rolled up! Business as usual! Nice! #BBMP pic.twitter.com/vRZVFU6dOE
— Harish Bijoor (@harishbijoor) May 5, 2022
ಬಿಬಿಎಂಪಿ ಕೈಗೆತ್ತಿಕೊಳ್ಳುತ್ತಿರುವ ಸಿಗ್ನಲ್ ರಹಿತ ಕಾರಿಡಾರ್ಗಾಗಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆಲಸವು ಸೆಪ್ಟೆಂಬರ್ 2021 ರಲ್ಲಿ ಮುಕ್ತಾಯವಾಗಬೇಕಿತ್ತು, ಆದರೆ ಅದರ ಗಡುವನ್ನು ಮಾರ್ಚ್ 2022 ಕ್ಕೆ ವಿಸ್ತರಿಸಲಾಯಿತು. ಸ್ವಲ್ಪ ಕೆಲಸ ಬಾಕಿಯಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಯೋಜನೆ ವಿಭಾಗ) ಲೋಕೇಶ್ ಮಹಾದೇವಯ್ಯ ಹೇಳುತ್ತಾರೆ.
ಈ ಘಟನೆಯು ಡೊನಾಲ್ಡ್ ಟ್ರಂಪ್ ಅವರ ಗುಜರಾತ್ ಭೇಟಿಯನ್ನು ಹೋಲುತ್ತದೆ, ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೊಳಗೇರಿ ಪ್ರದೇಶಗಳ ಪರಿಸ್ಥಿತಿ ಕಾಣಬಾರದೆಂದು ತರಾತುರಿಯಲ್ಲಿ ಗೋಡೆ ನಿರ್ಮಿಸಿ ಮುಚ್ಚಲಾಗಿತ್ತು ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.