ಉಕ್ರೇನ್ ನಿಂದ ಹಿಂತಿರುಗಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಶಾಕಿರಣವಾದ ಸಿದ್ದಗಂಗಾ ಕಾಲೇಜು
ಯುದ್ಧಪೀಡಿತ ಉಕ್ರೇನ್ ನಿಂದ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆ ಮಧ್ಯೆ ಸಿದ್ದಗಂಗಾ ಮಠದ ವೈದ್ಯಕೀಯ ಕಾಲೇಜು ಬೆಳಕಿನ ಆಶಾಕಿರಣವಾಗಿದೆ.
Published: 06th May 2022 10:01 AM | Last Updated: 06th May 2022 01:44 PM | A+A A-

ಸಿದ್ದಗಂಗಾ ಮಠ
ತುಮಕೂರು: ಯುದ್ಧಪೀಡಿತ ಉಕ್ರೇನ್ ನಿಂದ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆ ಮಧ್ಯೆ ಸಿದ್ದಗಂಗಾ ಮಠದ ವೈದ್ಯಕೀಯ ಕಾಲೇಜು ಬೆಳಕಿನ ಆಶಾಕಿರಣವಾಗಿದೆ.
ನಾಲ್ಕನೇ ವರ್ಷದ ವೈದ್ಯಕೀಯ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಉಕ್ರೇನ್ ನ ಶಿಕ್ಷಣ ಸಂಸ್ಥೆಗಳಲ್ಲಿ ಆನ್ ಲೈನ್ ನಲ್ಲಿ ಓದುತ್ತಿರುವವರಿಗೆ ಕ್ಲಿನಿಕಲ್ ಪ್ರಾಯೋಗಿಕ ಅಧ್ಯಯನ ಮಾಡಲು ಸಿದ್ದಗಂಗಾ ಮಠ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (SHRC)ಯಲ್ಲಿ ಅವಕಾಶ ನೀಡಲು ಮಠ ಮುಂದೆ ಬಂದಿದೆ.
2022-23ರ ಶೈಕ್ಷಣಿಕ ವರ್ಷದಿಂದ ತಮ್ಮ ಎಂಬಿಬಿಎಸ್ ಅಧ್ಯಯನ ಪ್ರಾರಂಭಿಸಿದ ವಿದ್ಯಾರ್ಥಿಗಳು ಮತ್ತು ಕಾಲೇಜುಗಳಿಗೆ ಇದರಿಂದ ಪ್ರಯೋಜನವಾಗಲಿದೆ. ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಇಂಟರ್ನಿಗಳಾಗಿ ಕೆಲಸ ಮಾಡಬಹುದು. ಇದು ಅಧಿಕೃತ ಕೋರ್ಸ್ ಅಲ್ಲ, ಪ್ರಯೋಗಾಲಯ ಮತ್ತು ಆಸ್ಪತ್ರೆಯಲ್ಲಿ ನಮ್ಮ ಅಧ್ಯಾಪಕರ ಮಾರ್ಗದರ್ಶನದಲ್ಲಿ ಅವರು ಪಡೆಯುವ ತರಬೇತಿಗೆ ಪ್ರಮಾಣಪತ್ರವನ್ನು ನೀಡಬೇಕಾಗಿಲ್ಲ. ಉಕ್ರೇನ್‌ನಲ್ಲಿರುವ ವಿಶ್ವವಿದ್ಯಾಲಯಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರ್ಧರಿಸಬೇಕು ಎಂದು ಎಸ್‌ಎಚ್‌ಆರ್‌ಸಿ ನಿರ್ದೇಶಕ ಡಾ.ಎಸ್.ಪರಮೇಶ್ ಹೇಳಿದ್ದಾರೆ.
ಮೇಲ್ನೋಟಕ್ಕೆ ಸಿದ್ದಗಂಗಾ ಮಠದ ಮುಖ್ಯಸ್ಥ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಸೂಚನೆಗಳನ್ನು ಅನುಸರಿಸಿ ಕಾಲೇಜು ಕೈಗೊಂಡ ಉಪಕ್ರಮವು ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯವನ್ನು ನೀಡಿದೆ. ರಾಜ್ಯಾದ್ಯಂತ ಉಕ್ರೇನ್ ನಿಂದ ಬಂದಿರುವ ಅನೇಕ ವೈದ್ಯಕೀಯ ವಿದ್ಯಾರ್ಥಿಗಳನ್ನು ವಿಚಾರಿಸಿದೆವು, ಬೇರೆ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗದ ಕಾರಣ ಅವರು ತಮ್ಮದೇ ಆದ ಸೌಕರ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ಸಿಬ್ಬಂದಿ ಕಾಂತರಾಜು ಹೇಳುತ್ತಾರೆ.
16 ವಿದ್ಯಾರ್ಥಿಗಳಲ್ಲಿ ಒಬ್ಬರಾದ ಗಣೇಶ್ ಯಾದವ್ ಅವರು ತಮಗೆ ದೊರೆತ ಸಹಾಯವು ಬ್ರಿಡ್ಜ್ ಕೋರ್ಸ್‌ನಂತೆ ಕೆಲಸ ಮಾಡುತ್ತಿದೆ ಎಂದು ಕಾಲೇಜಿಗೆ ಕೃತಜ್ಞತೆ ಹೇಳುತ್ತಾರೆ. ನಮ್ಮ ಮಾರ್ಗದರ್ಶಿಯಾಗಿ ಮೂರು ದಶಕಗಳ ಅನುಭವ ಹೊಂದಿರುವ ಡಾ.ಶಾಲಿನಿಯಂತಹ ಪರಿಣಿತ ಅಧ್ಯಾಪಕರನ್ನು ಹೊಂದಿದ್ದೇವೆ. ನಾವು ರೋಗಿಗಳೊಂದಿಗೆ ಸಂವಾದ ನಡೆಸಿದ್ದೇವೆ, ಪ್ರಯೋಗಾಲಯದಲ್ಲಿ ಕ್ಲಿನಿಕಲ್ ಅನುಭವವನ್ನು ಪಡೆದುಕೊಂಡಿದ್ದೇವೆ ಎಂದು ಮತ್ತೊಬ್ಬ ವಿದ್ಯಾರ್ಥಿ ಕುಶಿ ಹೇಳುತ್ತಾರೆ.