ಆರೋಪಿ ನಾಗೇಶ್ ನ ಕೈಯಲ್ಲಿ ಪ್ಲಾಸ್ಟಿಕ್ ಚೀಲ ಕಂಡು ಆ್ಯಸಿಡ್ ದಾಳಿಗೆ ತುತ್ತಾದ ಸಂತ್ರಸ್ತೆ ಆಶಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು!
ಏಪ್ರಿಲ್ 28ರಂದು ಬೆಳಗ್ಗೆ 8.30ಕ್ಕೆ ನನ್ನ ತಂದೆ ನನ್ನನ್ನು ಕಚೇರಿ ಬಳಿ ಬಿಟ್ಟು ಹೋದ ಮೇಲೆ ನಾನು ಕಚೇರಿಯ ಬಾಗಿಲು ಬಳಿ ಕಾಯುತ್ತಾ ನಿಂತಿದ್ದೆ, ನನ್ನ ಸಹೋದ್ಯೋಗಿಗಳಿಗಾಗಿ ನಾನು ಮೊದಲ ಮಹಡಿಯಲ್ಲಿ ನಿಂತುಕೊಂಡಿದ್ದೆ.
Published: 09th May 2022 08:39 AM | Last Updated: 09th May 2022 01:48 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಏಪ್ರಿಲ್ 28ರಂದು ಬೆಳಗ್ಗೆ 8.30ಕ್ಕೆ ನನ್ನ ತಂದೆ ನನ್ನನ್ನು ಕಚೇರಿ ಬಳಿ ಬಿಟ್ಟು ಹೋದ ಮೇಲೆ ನಾನು ಕಚೇರಿಯ ಬಾಗಿಲು ಬಳಿ ಕಾಯುತ್ತಾ ನಿಂತಿದ್ದೆ, ನನ್ನ ಸಹೋದ್ಯೋಗಿಗಳಿಗಾಗಿ ನಾನು ಮೊದಲ ಮಹಡಿಯಲ್ಲಿ ನಿಂತುಕೊಂಡಿದ್ದೆ.
ನಾನು ಕಾಯುತ್ತಾ ನಿಂತಿದ್ದ ವೇಳೆ ನಾಗೇಶ್ ಪ್ಲಾಸ್ಟಿಕ್ ಚೀಲದಲ್ಲಿ ಏನೋ ಕೈಯಲ್ಲಿ ಹಿಡಿದುಕೊಂಡು ಬಂದು ನನ್ನ ಬಳಿ ಬಂದಿದ್ದ. ಏಪ್ರಿಲ್ 24ರಂದು ನಾಗೇಶ್ ನನ್ನನ್ನು ಫಾಲೋ ಮಾಡ್ಕೊಂಡು ಬರ್ತಿದ್ದ. ಪ್ರೀತಿಸುವಂತೆ ಪೀಡಿಸುತ್ತಿದ್ದ. ಏಪ್ರಿಲ್ 27ರಂದು ನನ್ನ ಕಚೇರಿಗೆ 9 ಗಂಟೆ ವೇಳೆಗೆ ಫಾಲೋ ಮಾಡಿಕೊಂಡು ಬಂದು ಮದುವೆಯಾಗು ಇಲ್ಲದಿದ್ದರೆ ನೀನು ಬೇರೆ ಯಾರಿಗೂ ಸಿಗದ ಹಾಗೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.
ಇದು ಕಳೆದ ತಿಂಗಳು ಬೆಂಗಳೂರಿನ ಸುಂಕದಕಟ್ಟೆ ಬಳಿ ನಾಗೇಶ್ ಎಂಬ ಪೈಶಾಚಿಕ ಮನಸ್ಸಿನ ಯುವಕನಿಂದ ಆಸಿಡ್ ದಾಳಿಗೆ ತುತ್ತಾಗಿ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಶಾ ನೀಡಿರುವ ಹೇಳಿಕೆ.
ಇದನ್ನೂ ಓದಿ: ಐಸಿಯುನಿಂದಲೇ ವರ್ಚುವಲ್ ಮೂಲಕ ಸಹೋದರಿ ಮದುವೆಯಲ್ಲಿ ಭಾಗಿಯಾದ ಆ್ಯಸಿಡ್ ದಾಳಿ ಸಂತ್ರಸ್ತೆ!
ಕಳೆದ 28ರಂದು ಕಚೇರಿಯಲ್ಲಿ ನಾಗೇಶ್ ನನ್ನು ನೋಡಿದ್ದೇ ತಡ ಆಶಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು. ಆಗ ನಾಗೇಶ್ ಆಶಾಳನ್ನು ಅನುಸರಿಸಿಕೊಂಡು ಬಂದು ಆ್ಯಸಿಡ್ ಎರಚಿಬಿಟ್ಟನು. ಕೂಡಲೇ ಆಶಾ ತಂದೆಗೆ ಫೋನ್ ಮಾಡಿ ಬರಲು ಹೇಳಿದಳು. ತಂದೆ ಬಂದು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದರು ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಿಂದ ತಿಳಿದುಬಂದಿದೆ.
ಆಶಾಳ ದೊಡ್ಡಮ್ಮ ನ ಮನೆಯಲ್ಲಿ ಏಳು ವರ್ಷಗಳ ಕಾಲ ಬಾಡಿಗೆಗೆ ಇದ್ದ ನಾಗೇಶ್ ಆಕೆಗೆ ಪೀಡಿಸುತ್ತಿದ್ದನಂತೆ ಎಂದು ಆಕೆಯ ಚಿಕ್ಕಪ್ಪ ಸುಂದರೇಶ್ ಹೇಳುತ್ತಾರೆ. ಆಕೆ ಆತನ ಪ್ರೀತಿಯ ನಿವೇದನೆಯನ್ನು ನಿರಾಕರಿಸಿದಾಗ ಸುಮ್ಮನಾಗಿದ್ದನು. ಮತ್ತೆ ಸ್ವಲ್ಪ ಸಮಯ ಕಳೆದು ಪೀಡಿಸಲಾರಂಭಿಸಿದನಂತೆ.
ಏಪ್ರಿಲ್ 27ರಂದು ನಾಗೇಶ್ ನನಗೆ ಬೆದರಿಕೆ ಹಾಕಿದಾಗ ನನ್ನ ದೊಡ್ಡಮ್ಮನಿಗೆ ಹೇಳಿದೆ, ಅವರು ನಾಗೇಶ್ ನ ಅಣ್ಣನಿಗೆ ತಿಳಿಸಿದ್ದಾರೆ. ತಮ್ಮನಿಗೆ ಬುದ್ದಿ ಹೇಳುತ್ತೇನೆ ಎಂದು ಹೇಳಿದ್ದಾರೆ. ಆದರೆ ಮರುದಿನವೇ ಆಶಾಳನ್ನು ಕೊಲೆ ಮಾಡುವ ಉದ್ದೇಶದಿಂದಲೇ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ ಎನ್ನುತ್ತಾರೆ.