ಸಹೋದರಿ ಮದುವೆ; ಐಸಿಯುನಿಂದಲೇ ವರ್ಚುವಲ್ ಮೂಲಕ ಆ್ಯಸಿಡ್ ದಾಳಿ ಸಂತ್ರಸ್ತೆ ಭಾಗಿ!
ಆ್ಯಸಿಡ್ ದಾಳಿ ಸಂತ್ರಸ್ತೆ ಆಶಾ (ಹೆಸರು ಬದಲಾಯಿಸಲಾಗಿದೆ) ಅವರ ಸಹೋದರಿಯ ವಿವಾಹ ಭಾನುವಾರ ನೆರವೇರಿದ್ದು, ಆಸ್ಪತ್ರೆಯ ಐಸಿಯುವಿನಿಂದಲೇ ವರ್ಚುವಲ್ ಮೂಲಕ ಆ್ಯಸಿಡ್ ದಾಳಿ ಸಂತ್ರಸ್ತೆ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದರು.
Published: 09th May 2022 09:07 AM | Last Updated: 09th May 2022 01:50 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಆ್ಯಸಿಡ್ ದಾಳಿ ಸಂತ್ರಸ್ತೆ ಆಶಾ (ಹೆಸರು ಬದಲಾಯಿಸಲಾಗಿದೆ) ಅವರ ಸಹೋದರಿಯ ವಿವಾಹ ಭಾನುವಾರ ನೆರವೇರಿದ್ದು, ಆಸ್ಪತ್ರೆಯ ಐಸಿಯುವಿನಿಂದಲೇ ವರ್ಚುವಲ್ ಮೂಲಕ ಆ್ಯಸಿಡ್ ದಾಳಿ ಸಂತ್ರಸ್ತೆ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದರು.
ಆಶಾ ಅಳದಿದ್ದರೆ ಮಾತ್ರ ಮದುವೆ ಮಾಡಿಕೊಳ್ಳುವುದಾಗಿ ಸಹೋದರಿ ಹೇಳಿದ್ದು, ಇದಕ್ಕೆ ಆಶಾ ಒಪ್ಪಿಕೊಂಡಿದ್ದರು. ಆದರೆ, ಆರತಕ್ಷತೆ ವೇಳೆ ಸಹೋದರಿಯನ್ನು ವರ್ಚುವಲ್ ಮೂಲಕ ನೋಡಿದ ಆಶಾ ಅವರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದು ಕಂಡು ಬಂದಿತು.
ದೊಡ್ಡ ಮಗಳ ವಿವಾಹ ಸಂದರ್ಭದಲ್ಲಿ ಚಿಕ್ಕ ಮಗಳು ಐಸಿಯುವಿನಲ್ಲಿದ್ದು, ವರ್ಚುವಲ್ ಮೂಲಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ್ದನ್ನು ಕಂಡು ಕುಟುಂಬಸ್ಥರೂ ಕೂಡ ಭಾವುಕರಾದರು.
ಇದನ್ನೂ ಓದಿ: ಸಹೋದರಿಯ ಮದುವೆ ಮುನ್ನಡೆಸಿ, ಮುಂದೂಡುವುದು ಬೇಡ: ಕುಟುಂಬಸ್ಥರಿಗೆ ಆ್ಯಸಿಡ್ ದಾಳಿ ಸಂತ್ರಸ್ತೆ ಮನವಿ
ಆರಕ್ಷತೆ ವೇಳೆ ಆಶಾ ಭಾವುಕಳಾಗಿದ್ದನ್ನು ಕಂಡ ಪೋಷಕರು, ಆಕೆ ಮತ್ತಷ್ಟು ನೋವು ಪಡುವುದನ್ನು ನಿಯಂತ್ರಿಸಲು ಬೆಳಿಗ್ಗೆಯ ಆರತಕ್ಷೆಯ ವೇಳೆ ವಿಡಿಯೋ ಕರೆ ಮಾಡುವ ನಿರ್ಧಾರದಿಂದ ದೂರ ಉಳಿದರು. ಆಶಾ ಅವರ ಇಚ್ಛೆಯಂತೆ, ಕುಟುಂಬ ಸದಸ್ಯರು ಮದುವೆಯ ಊಟವನ್ನು ಪ್ಯಾಕ್ ಮಾಡಿ ಕಳುಹಿಸಿದರು.
ಇನ್ನು ಆಶಾ ಅವರ ಚಿಕ್ಕಮ್ಮ, ಆರೋಪಿ ನಾಗೇಶ್ ಮನೆಯಲ್ಲಿ ಕಳೆದ ಏಳು ವರ್ಷಗಳಿಂದಲೂ ಬಾಡಿಗೆಗೆ ಇದ್ದರು ಎಂದು ತಿಳಿದುಬಂದಿದ್ದು, ಏಪ್ರಿಲ್ 28 ರಿಂದಲೂ ಆಶಾ ಅವರ ಪಕ್ಕದಲ್ಲಿಯೇ ಇದ್ದು ಆಶಾ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ.
ಇನ್ನೂ ಪತ್ತೆಯಾಗದ ಆರೋಪಿ: ಆತಂಕ ವ್ಯಕ್ತಪಡಿಸಿದ ಸಂತ್ರಸ್ತೆ
ಆ್ಯಸಿಡ್ ದಾಳಿಗೊಳಗಾಗಿರುವ ಆಶಾ ಅವರು ಆರೋಪಿ ಇನ್ನೂ ಪತ್ತೆಯಾಗದಿರುವುದಕ್ಕೆ ಆತಂಕ ವ್ಯಕ್ತಪಡಿಸುತ್ತಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಆ್ಯಸಿಡ್ ದಾಳಿ ಸಂತ್ರಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಿಂದ ಚರ್ಮದಾನ!!
ಆಶಾ ಪ್ರತೀ ಬಾರಿ ಆರೋಪಿ ನಾಗೇಶ ಸಿಕ್ಕಿದನೆಯೇ ಎಂದು ಕೇಳುತ್ತಲೇ ಇರುತ್ತಾಳೆ. ಈ ವರೆಗೂ ಪೊಲೀಸರು ನಮ್ಮ ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಸ್ನೇಹಿತರೂ ಸೇರಿ 40 ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಆದರೆ, ಆರೋಪಿ ಇರುವ ಸ್ಥಳದ ಬಗ್ಗೆ ಯಾವುದೇ ಸುಳಿವುಗಳು ಪತ್ತೆಯಾಗಿಲ್ಲ ಎಂದು ಆಶಾ ಅವರ ಚಿಕ್ಕಪ್ಪ ಸುಂದರೇಶ್ ಅವರು ಹೇಳಿದ್ದಾರೆ.
ಆಶಾಗೆ ಶುಕ್ರವಾರ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈಗಲೂ ಆಕೆ ಐಸಿಯುವಿನಲ್ಲಿಯೇ ಇದ್ದಾಳೆ. ಎರಡು ತಿಂಗಳಾದರೂ ಆಶಾ ಆಸ್ಪತ್ರೆಯಲ್ಲಿ ಇರಲೇಬೇಕೆಂದು ವೈದ್ಯರು ಹೇಳಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ: 5 ದಿನಗಳಾದರೂ ಪತ್ತೆಯಾಗಿಲ್ಲ ಆ್ಯಸಿಡ್ ದಾಳಿ ಆರೋಪಿ: 7 ತಂಡ ರಚನೆ ಮಾಡಿದ ಕರ್ನಾಟಕ ಪೊಲೀಸ್!!
ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಅವರು ಮಾತನಾಡಿ, ಆರೋಪಿ ನಾಗೇಶ್ ಅವರ ಸಂಬಂಧಿಕರೂ ನನಗೆ ಕರೆ ಮಾಡುತ್ತಿದ್ದು, ನಾಗೇಶ್ ಜೊತೆಗೆ ಸಂಪರ್ಕವಿಲ್ಲದಿದ್ದರೂ, ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಹೇಳುತ್ತಿದ್ದಾರೆಂದು ಹೇಳಿದ್ದಾರೆ.
ಅವರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು, ಏಪ್ರಿಲ್ 28 ರಿಂದ ಆಶಾ ಅವರ ಪಕ್ಕದಲ್ಲಿದ್ದಾರೆ ಎಂದು ಆಶಾ ಅವರ ಚಿಕ್ಕಪ್ಪ ಸುಂದರೇಶ್ ಹೇಳಿದರು.