ಆಜಾನ್-ಸುಪ್ರಭಾತ ಅಭಿಯಾನ: ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ ಮತ್ತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
ರಾಜ್ಯದಾದ್ಯಂತ ಇಂದು ಸೋಮವಾರ ಆಜಾನ್ v/s ಸುಪ್ರಭಾತ ಸಂಘರ್ಷ ಹೊತ್ತಲ್ಲಿ ಕಾಂಗ್ರೆಸ್ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದೆ.
Published: 09th May 2022 11:04 AM | Last Updated: 09th May 2022 01:53 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಜ್ಯದಾದ್ಯಂತ ಇಂದು ಸೋಮವಾರ ಆಜಾನ್ v/s ಸುಪ್ರಭಾತ ಸಂಘರ್ಷ ಹೊತ್ತಲ್ಲಿ ಕಾಂಗ್ರೆಸ್ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದೆ. ವಿಪಕ್ಷ ಉಪನಾಯಕ ಯು.ಟಿ.ಖಾದರ್ ನೇತೃತ್ವದಲ್ಲಿ ಇಂದು ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ನಿಯೋಗ ಸಿಎಂ ಭೇಟಿ ಮಾಡಿದ್ದಾರೆ.
ಕಾಂಗ್ರೆಸ್ ನಿಯೋಗವು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಸಿಎಂ ಬೊಮ್ಮಾಯಿ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಶಾಸಕರಾದ ಎನ್.ಎ.ಹ್ಯಾರಿಸ್, MLC ನಜೀರ್ ಅಹ್ಮದ್ ಭೇಟಿ ನೀಡಿದ್ದಾರೆ. ಶ್ರೀರಾಮಸೇನೆ ಮಸೀದಿಗಳ ಮೇಲಿನ ಮೈಕ್ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಅಭಿಯಾನ ಸುಪ್ರಭಾತ ಹೋರಾಟವಾಗಿದೆ. ರಾಜ್ಯದ ಹಲವೆಡೆ ಸುಪ್ರಭಾತ ಅಭಿಯಾನ ಆರಂಭವಾಗಿದೆ. ಯಾವುದೇ ಅನಾಹುತ ನಡೆಯದಂತೆ ಕ್ರಮಕ್ಕೆ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಧರ್ಮ ದಂಗಲ್: ನಾಳೆ ಬೆಳಗ್ಗೆ 5 ಗಂಟೆಗೆ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ, ಸುಪ್ರಭಾತ!
ಸಿಎಂ ಭೇಟಿಯಾದ ಕಮಿಷನರ್ ಕಮಲ್ ಪಂತ್: ಇನ್ನು ಆಜಾನ್ ಮತ್ತು ಸುಪ್ರಭಾತ ಸಂಘರ್ಷ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಕೈಗೊಂಡಿರುವ ಕ್ರಮಗಳು ಮತ್ತು ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ.
ದೇಗುಲ ಮತ್ತು ಮಸೀದಿಗಳ ಬಳಿ ಕೈಗೊಂಡಿರುವ ಭದ್ರತೆ ಕುರಿತು ಮುಖ್ಯಮಂತ್ರಿಗಳಿಗೆ ಪೊಲೀಸ್ ಆಯುಕ್ತರು ಮಾಹಿತಿ ವಿವರ ನೀಡಿದ್ದಾರೆ.
ಇದನ್ನೂ ಓದಿ: ಶಬ್ದಮಾಲಿನ್ಯ ತಡೆಗೆ ಕೋರ್ಟ್ ಆದೇಶದ ಪ್ರಕಾರ ಕಟ್ಟುನಿಟ್ಟಿನ ಕ್ರಮ: ಅಜಾನ್ v/s ಸುಪ್ರಭಾತ ಸಂಘರ್ಷಕ್ಕೆ ಗೃಹ ಸಚಿವರ ಪ್ರತಿಕ್ರಿಯೆ