ನಾನು ಮಾಡಿದ ಉತ್ತಮ ಕಾರ್ಯಗಳನ್ನು ಜನರಿಗೆ ತಿಳಿಸಿ: ಮಾಧ್ಯಮಗಳಿಗೆ ಪಿಎಸ್ಐ ನೇಮಕಾತಿ ಹಗರಣದ ಕಿಂಗ್ ಪಿನ್ ಮನವಿ
ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿಯಾಗಿರುವ ಆರ್.ಡಿ.ಪಾಟೀಲ್ ಸಿಐಡಿ ಕಸ್ಟಡಿ ಭಾನುವಾರ ಅಂತ್ಯಗೊಡ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Published: 09th May 2022 01:12 PM | Last Updated: 09th May 2022 01:57 PM | A+A A-

ಪಿಎಸ್ಐ ಸಿಇಟಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರನ್ನು ಸಿಐಡಿ ಅಧಿಕಾರಿಗಳು ಸ್ಥಳ ಭೇಟಿಗಾಗಿ ಅವರ ನಿವಾಸಕ್ಕೆ ಮತ್ತು ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗೆ ಭಾನುವಾರ ಕರೆದೊಯ್ದರು.
ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿಯಾಗಿರುವ ಆರ್.ಡಿ.ಪಾಟೀಲ್ ಸಿಐಡಿ ಕಸ್ಟಡಿ ಭಾನುವಾರ ಅಂತ್ಯಗೊಡ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪಾಟೀಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಅಧಿಕಾರಿಗಳು ಸಿಐಡಿ ಕಚೇರಿಯಿಂದ ಹೊರಗೆ ಕರೆದೊಯ್ಯುತ್ತಿದ್ದಾಗ, ಮಾಧ್ಯಮದವರನ್ನು ನೋಡಿದ ಆರೋಪಿ, ನಾನು ಜನರಿಗೆ ಮಾಡಿದ ಒಳ್ಳೆಯ ಕೆಲಸಗಳನ್ನು ತೋರಿಸಿ ಎಂದು ಮನವಿ ಮಾಡಿಕೊಂಡನು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ: ಟಾಪರ್ಸ್'ಗಳ ವಿಚಾರಣೆ, ಒಂದೂ ಪ್ರಶ್ನೆಗೂ ಸರಿ ಉತ್ತರ ನೀಡದ ಆರೋಪಿಗಳು!
ಇನ್ನು ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಅವ್ಯವಹಾರ ಹಾಗೂ ಒಎಂಆರ್ ಶೀಟ್ ದುರ್ಬಳಕೆ ಮಾಡಿದ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಪಾಟೀಲ್ ಅವರ ವಿಚಾರಣೆ ಪೂರ್ಣಗೊಳಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಆದರೆ, ಎಂಎಸ್ಐ ಡಿಗ್ರಿ ಕಾಲೇಜಿನ ಹಗರಣ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ಹಗರಣದ ಮತ್ತೊಬ್ಬ ಆರೋಪಿಯಾಗಿರುವ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲಾ ಕೇಂದ್ರದ ಕಾರ್ಯದರ್ಶಿ ದಿವ್ಯಾ ಹಾಗರಗಿ ಅವರನ್ನು ಅಧಿಕಾರಿಗಳು ಸ್ಥಳ ಭೇಟಿಗಾಗಿ ಅವರ ನಿವಾಸ ಮತ್ತು ಶಾಲೆಗೆ ಭಾನುವಾರ ಕರೆದೊಯ್ದರು.
ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕೇಂದ್ರದಲ್ಲಿ ಅವ್ಯವಹಾರ ನಡೆಸಲು ಅಭ್ಯರ್ಥಿಗಳಿಗೆ ಸಹಾಯ ಮಾಡಿದ ಆರೋಪ ದಿವ್ಯಾ ಹಾಗರಗಿ ಮೇಲಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಕೆಎಸ್ಆರ್ ಪಿ ಅಸಿಸ್ಟೆಂಟ್ ಕಮಾಂಡೆಂಟ್ ವೈಜಿನಾಥ್ 7 ದಿನ ಸಿಐಡಿ ವಶಕ್ಕೆ!
ನ್ಯಾಯಾಂಗ ಬಂಧನದಲ್ಲಿದ್ದರೂ ವೇತನ ಪಡೆದ ಆರೋಪಿ
ಪಿಡಬ್ಲೂಡಿ ಜೆ.ಇ ಮತ್ತು ಎ.ಇ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಜೈಲುಪಾಲಾಗಿದ್ದ ಪಿಎಸ್ಐ ನೇಮಕ ಅಕ್ರಮದ ಕಿಂಗ್ಪಿನ್, ನೀರಾವರಿ ಇಲಾಖೆಯ ಎಂಜಿನಿಯರ್ ಮಂಜುನಾಥ ಮೇಳಕುಂದಿ ತನ್ನ ಬಂಧನದ ವಿಚಾರವನ್ನು ಇಲಾಖೆಗೆ ತಿಳಿಸದೇ ಅಧಿಕಾರಿಗಳನ್ನೇ ಯಾಮಾರಿಸಿರುವುದು ಇದೀಗ ಬೆಳಕಿಗೆ ಬಂದಿದೆ.
ಜೈಲಿನಲ್ಲಿ ಇದ್ದ ದಿನಗಳನ್ನು ವೈದ್ಯಕೀಯ ರಜೆ ಎಂದು ಪರಿಗಣಿಸಿ ಸಂಬಳ ನೀಡುವಂತೆ ಕೋರಿ ಮೇಲಾಧಿಕಾರಿಗಳಿಗೆ ದಾಖಲೆಗಳೊಂದಿಗೆ ಪತ್ರ ಬರೆದಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಪಿಎಸ್ಐ ಹಗರಣ: ಬೇರುಮಟ್ಟದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರು ಮುಟ್ಟಿ ನೋಡಿಕೊಳ್ಳುವಂತೆ ಮಾಡ್ತೀವಿ- ಆರಗ ಜ್ಞಾನೇಂದ್ರ
2021ರ ಡಿಸೆಂಬರ್ 20ರಂದು ಕಲಬುರಗಿಯಲ್ಲೇ ಬಂಧನಕ್ಕೆ ಒಳಗಾಗಿದ್ದ ಮಂಜುನಾಥ, 2022ರ ಜನವರಿ 7ರವರೆಗೆ ಬೆಂಗಳೂರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ. ಜೈಲಿನಲ್ಲಿದ್ದರೂ ವೈದ್ಯರು ತಮ್ಮಲ್ಲಿ ಚಿಕಿತ್ಸೆ ಪಡೆದಿರುವ ಬಗ್ಗೆ ಸರ್ಟಿಫಿಕೇಟ್ ನೀಡಿದ್ದಾರೆ. ಈ ಪ್ರಮಾಣಪತ್ರವನ್ನೇ ಅಧಿಕಾರಿಗಳಿಗೆ ನೀಡಿರುವ ಆರೋಪಿ, ವೈದ್ಯಕೀಯ ರಜೆ ಎಂದು ಪರಿಗಣಿಸಿ ಸಂಬಳ ನೀಡುವಂತೆ ಮನವಿ ಮಾಡಿಕೊಂಡಿದ್ದಾನೆ. ಇದನ್ನು ಮಾನ್ಯ ಮಾಡಿದ್ದ ಮೇಲಧಿಕಾರಿಗಳು ರಜೆ ಮಂಜೂರು ಮಾಡಿದ್ದಾರೆಂದು ವರದಿಗಳು ತಿಳಿಸಿವೆ.