ಆಜಾನ್ಗೆ ಪ್ರತಿಯಾಗಿ ಸುಪ್ರಭಾತ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು: ಬಿ ಕೆ ಹರಿಪ್ರಸಾದ್
ಮುಸ್ಲಿಂ ಧರ್ಮದವರು ಮಾಡುವ ಆಜಾನ್ಗೆ ಪ್ರತಿಯಾಗಿ ಶ್ರೀರಾಮ ಸೇನೆ ಸೇರಿದಂತೆ ಹಿಂದೂ ಸಂಘಟನೆಗಳು ಇಂದು ಸೋಮವಾರ ರಾಜ್ಯಾದ್ಯಂತ ಆರಂಭಿಸಿರುವ ಹನುಮಾನ್ ಚಾಲೀಸ ಸುಪ್ರಭಾತ ಅಭಿಯಾನ ರಾಜಕೀಯ ತಿರುವುಗಳನ್ನು, ಇನ್ನಷ್ಟು ವಾಗ್ವಾದ, ಗೊಂದಲ, ಸಂಘರ್ಷಗಳಿಗೆ ಎಡೆಮಾಡಿಕೊಡುತ್ತಿದೆ.
Published: 09th May 2022 01:51 PM | Last Updated: 09th May 2022 01:58 PM | A+A A-

ಬಿ ಕೆ ಹರಿಪ್ರಸಾದ್
ಬೆಂಗಳೂರು: ಮುಸ್ಲಿಂ ಧರ್ಮದವರು ಮಾಡುವ ಆಜಾನ್ಗೆ ಪ್ರತಿಯಾಗಿ ಶ್ರೀರಾಮ ಸೇನೆ ಸೇರಿದಂತೆ ಹಿಂದೂ ಸಂಘಟನೆಗಳು ಇಂದು ಸೋಮವಾರ ರಾಜ್ಯಾದ್ಯಂತ ಆರಂಭಿಸಿರುವ ಹನುಮಾನ್ ಚಾಲೀಸ ಸುಪ್ರಭಾತ ಅಭಿಯಾನ ರಾಜಕೀಯ ತಿರುವುಗಳನ್ನು, ಇನ್ನಷ್ಟು ವಾಗ್ವಾದ, ಗೊಂದಲ, ಸಂಘರ್ಷಗಳಿಗೆ ಎಡೆಮಾಡಿಕೊಡುತ್ತಿದೆ.
ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ವಿಧಾನ ಪರಿಷತ್ ನಾಯಕ ಬಿ ಕೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದು ರಾಜ್ಯದಲ್ಲಿನ ಧರ್ಮ ಸಂಘರ್ಷದ ಕಿಚ್ಚಿಗೆ ತುಪ್ಪ ಸುರಿದಂತೆ ಆಗಿದೆ.
ಇದನ್ನೂ ಓದಿ: ಶಬ್ದಮಾಲಿನ್ಯ ತಡೆಗೆ ಕೋರ್ಟ್ ಆದೇಶದ ಪ್ರಕಾರ ಕಟ್ಟುನಿಟ್ಟಿನ ಕ್ರಮ: ಅಜಾನ್ v/s ಸುಪ್ರಭಾತ ಸಂಘರ್ಷಕ್ಕೆ ಗೃಹ ಸಚಿವರ ಪ್ರತಿಕ್ರಿಯೆ
ಈ ಅಭಿಯಾನ ಪ್ರಾರಂಭ ಮಾಡುತ್ತಿರುವವರು ಅವರನ್ನು ಭಯೋತ್ಪಾದಕರು ಎಂದು ಕರೆಯಬೇಕು. ಅಭಿಯಾನ ನಡೆಸುತ್ತಿರುವವರನ್ನು ಯುಎಪಿಎ (UAPA Act) ಕಾಯ್ದೆಯಡಿ ಬಂಧಿಸಬೇಕು. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಮಾಜ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವರೆಲ್ಲರೂ ಸಂಘ ಪರಿವಾರದವರ ವಿವಿಧ ಆಕ್ಟೋಪಸ್ ಇದ್ದಂತೆ. ಸಮಾಜದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನ ಮಾಡುತ್ತಿರುವ ಇವರನ್ನೆಲ್ಲ ಯುಎಪಿಎ ಅಡಿಯಲ್ಲಿ ಅರೆಸ್ಟ್ ಮಾಡಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.