ಉತ್ತರ ಬೆಂಗಳೂರು ಮುಂದಿನ ಉದ್ಯಮ ಕೇಂದ್ರವಾಗಿ ಹೊರಹೊಮ್ಮಲಿದೆ: ಅಧ್ಯಯನ

ಅನೇಕ ಉದ್ಯಮಗಳ ಕಾರ್ಯನಿರ್ವಹಣೆಯೊಂದಿಗೆ ಉತ್ತರ ಬೆಂಗಳೂರು ಹೊಸ ಉದ್ಯಮ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಪ್ರಸ್ತುತ ಇಲ್ಲಿ ಸುಮಾರು 5 ಲಕ್ಷ ಜನರು ಉದ್ಯೋಗದಲ್ಲಿದ್ದಾರೆ ಮತ್ತೆ ಕನಿಷ್ಠ 3,50,000ಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯಿದೆ.

Published: 10th May 2022 01:51 PM  |   Last Updated: 10th May 2022 06:30 PM   |  A+A-


BMRCL Route map of airport line from KR Puram to KIA. (Photo | EPS)

KR ಪುರಂ ನಿಂದ KIA ಗೆ BMRCL ವಿಮಾನ ನಿಲ್ದಾಣದ ಮಾರ್ಗದ ನಕ್ಷೆ.

The New Indian Express

ಬೆಂಗಳೂರು: ಅನೇಕ ಉದ್ಯಮಗಳ ಕಾರ್ಯನಿರ್ವಹಣೆಯೊಂದಿಗೆ ಉತ್ತರ ಬೆಂಗಳೂರು ಹೊಸ ಉದ್ಯಮ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಪ್ರಸ್ತುತ ಇಲ್ಲಿ ಸುಮಾರು 5 ಲಕ್ಷ ಜನರು ಉದ್ಯೋಗದಲ್ಲಿದ್ದಾರೆ ಮತ್ತೆ ಕನಿಷ್ಠ 3,50,000ಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯಿದೆ. ಮಾರುಕಟ್ಟೆ ಸಂಶೋಧನಾ ಅಧ್ಯಯನವೊಂದರ ಪ್ರಕಾರ 2025 ರೊಳಗೆ ಎಲ್ಲಾ ಆಫೀಸ್ ಗಳಲ್ಲಿ  ಶೇ.35 ರಷ್ಟು ಉದ್ಯೋಗಿಗಳು ಇರಲಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನೆ ಪ್ರಾಧಿಕಾರ ವಲಯದಲ್ಲಿ ಪ್ರಸ್ತುತ 35,000 ಉದ್ಯೋಗಳಿದ್ದು,  ಉಪಗ್ರಹ ಕಚೇರಿಗಳು ಮತ್ತು ವಸತಿ ಘಟಕಗಳಿಗೆ ಹೆಚ್ಚಿನ ಬೇಡಿಕೆಯೊಂದಿಗೆ ಭಾರತದ ಮೊದಲ ಏರೋಟ್ರೋಪೊಲಿಸ್ ಅಭಿವೃದ್ದಿಯೊಂದಿಗೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಬ್ರಿಗೇಡ್ ಗ್ರೂಪ್ ಮತ್ತು ಮೆರಾಕಿ ಸಂಶೋಧನೆ ನಡೆಸಿರುವ ಸಂಶೋಧನೆಯಲ್ಲಿ ಸಲಹೆ ನೀಡಲಾಗಿದೆ.

2030ರೊಳಗೆ ಸಂಪೂರ್ಣ ಅಭಿವೃದ್ಧಿಯೊಂದಿಗೆ ಈ ಪ್ರದೇಶವೊಂದರಲ್ಲಿಯೇ ಸುಮಾರು 2,50,000 ಜನರಿಗೆ ಉದ್ಯೋಗ ದೊರೆಯಲಿದೆ. ಹೆಚ್ಚುವರಿಯಾಗಿ  ಮೆಟ್ರೋ ರೈಲು 2ಬಿ ಹಂತ, ಫೆರಿಪೆರಲ್ ರಿಂಗ್ ರಸ್ತೆ, ಸ್ಯಾಟಲೈಟ್ ರಿಂಗ್ ರಸ್ತೆಗಳು ಒಳಗೊಂಡಂತೆ ಬೆಂಗಳೂರು ಉತ್ತರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗುವ ವಿಶ್ವಾಸವಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಉತ್ತರ ಬೆಂಗಳೂರಿನಲ್ಲಿ ವರ್ಕ್ ಪ್ರೊಫೈಲ್ ಐಟಿ/ಬಿಪಿಎಂನಿಂದ ಹೈ ವ್ಯಾಲ್ಯೂ ಕನ್ಸಲ್ಟಿಂಗ್, ಅನಾಲಿಟಿಕ್ಸ್ ಮತ್ತು ರಕ್ಷಣಾ ಮತ್ತು ಅಭಿವೃದ್ಧಿ ಕೇಂದ್ರಿತ ಉದ್ಯೋಗಗಳತ್ತ ಹೊರಳಲಿದೆ. ಈ ಪ್ರದೇಶದಲ್ಲಿ  ವಸತಿಗಿಂತಲೂ ವಾಣಿಜ್ಯ ಅಭಿವೃದ್ದಿ ಹೆಚ್ಚಾಗಲಿದೆ.  2025 ರೊಳಗೆ ಉದ್ಯಮಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಉತ್ತರ ಬೆಂಗಳೂರು ಎರಡು ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳ ಕೇಂದ್ರಬಿಂದುವಾಗಿದೆ. ಬೆಂಗಳೂರು- ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಮತ್ತು ಚೆನ್ನೈ -ಬೆಂಗಳೂರು ಇಂಡಸ್ಟ್ರೀಯಲ್ ಕಾರಿಡಾರ್ ಗಳಿಂದ ವಾಣಿಜ್ಯೋದ್ಯಮ ಮತ್ತಷ್ಟು ಹೆಚ್ಚಾಗಲಿದೆ. ಕೋವಿಡ್ ನಂತರ ಕಚೇರಿ ಮಾರುಕಟ್ಟೆಯು ಪ್ರಗತಿಪರವಾಗಿದೆ ಮತ್ತು ಮುಖ್ಯವಾಗಿ ಉಪಗ್ರಹ ಕಚೇರಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೇಡಿಕೆ ಮುಂದುವರಿಯುವ ನಿರೀಕ್ಷೆಯಿದೆ.

ಉತ್ತರ ಬೆಂಗಳೂರು ಮುಂದಿನ ಉದ್ಯಮ ಕೇಂದ್ರವಾಗಲಿದೆ. ಏಕೆಂದರೆ ಮುಂದಿನ ಕೆಲವು ವರ್ಷಗಳಲ್ಲಿ ವಾಣಿಜ್ಯ ಸಂಸ್ಥೆಗಳು ಸ್ಥಿರವಾದ ಬೆಳವಣಿಗೆಗೆ ಸಾಕ್ಷಿಯಾಗುತ್ತವೆ ಮತ್ತು ಹೆಚ್ಚುವರಿ ವಸತಿ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ ಎಂದು ಬ್ರಿಗೇಡ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ನಿರುಪಾ ಶಂಕರ್ ಹೇಳಿದ್ದಾರೆ.


Stay up to date on all the latest ರಾಜ್ಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp