ತಮಿಳುನಾಡಿನ ತನ್ನ ಹುಟ್ಟೂರಲ್ಲೂ ಮಹಿಳೆಗೆ ಕಿರುಕುಳ ನೀಡಿದ್ದ ಆಸಿಡ್ ದಾಳಿಕೋರ ನಾಗೇಶ್
ಇತ್ತೀಚೆಗೆ ನಗರದಲ್ಲಿ ಹಾಡಹಗಲೇ 24 ವರ್ಷದ ಆಶಾ (ಹೆಸರು ಬದಲಾಯಿಸಲಾಗಿದೆ) ಮೇಲೆ ಆಘಾತಕಾರಿ ಆಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿರುವ ಆರೋಪಿ 27 ವರ್ಷದ ನಾಗೇಶ್, ತಮಿಳುನಾಡಿನ ತನ್ನ ನೆರೆಹೊರೆಯವರೂ ಸೇರಿದಂತೆ ಅನೇಕ ಮಹಿಳೆಯರಿಗೂ ಕಿರುಕುಳ ನೀಡಿರುವುದು ವರದಿಯಾಗಿದೆ.
Published: 12th May 2022 09:55 AM | Last Updated: 12th May 2022 09:55 AM | A+A A-

ಆರೋಪಿ ನಾಗೇಶ್
ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಹಾಡಹಗಲೇ 24 ವರ್ಷದ ಆಶಾ (ಹೆಸರು ಬದಲಾಯಿಸಲಾಗಿದೆ) ಮೇಲೆ ಆಘಾತಕಾರಿ ಆಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿರುವ ಆರೋಪಿ 27 ವರ್ಷದ ನಾಗೇಶ್, ತಮಿಳುನಾಡಿನ ತನ್ನ ನೆರೆಹೊರೆಯವರೂ ಸೇರಿದಂತೆ ಅನೇಕ ಮಹಿಳೆಯರಿಗೂ ಕಿರುಕುಳ ನೀಡಿರುವುದು ವರದಿಯಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೊಡಿಯಾಲಂ ಮೂಲದ ನಾಗೇಶ್ ತನ್ನ ನೆರೆಯ ಮಹಿಳೆಗೆ ಕಿರುಕುಳ ನೀಡಿದ್ದು, ಅಲ್ಲಿನ ಪೊಲೀಸರಿಗೆ ತಿಳಿಸಲಾಗಿತ್ತು. ಆದರೆ, ಮಹಿಳೆ ದೂರು ನೀಡದ ಕಾರಣ ಆತನನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ ನಾಗೇಶ್ ಬಂಧಿಸಲು ರಚಿಸಲಾದ ಏಳು ಪೊಲೀಸ್ ತಂಡಗಳು ಪ್ರಮುಖ ಯಾತ್ರಾ ಕೇಂದ್ರಗಳ ಎಲ್ಲಾ ಹೋಟೆಲ್ಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಪೊಲೀಸರು ಈಗ ಆತನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ಆತ ತಲೆಮರೆಸಿಕೊಳ್ಳುವ ಮೊದಲು ಯಾವುದನ್ನಾದರೂ ಅಳಿಸಿದ್ದರೆ ಅದನ್ನು ಕೂಡಾ ಪರಿಶೀಲಿಸುತ್ತಿದ್ದಾರೆ.
ನಾಗೇಶ್ ಏಳು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಆಶಾ ಅವರ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ. ಆಶಾಗೆ ಕಿರುಕುಳ ನೀಡಿದ ಬಳಿಕ ಮನೆ ಖಾಲಿ ಮಾಡುವಂತೆ ಹೇಳಿದ್ದರು. ನಂತರ ಎರಡು ವರ್ಷಗಳ ಹಿಂದೆ ತನ್ನ ಊರಿಗೆ ಬಂದು ನೆರೆಮನೆಯವರಿಗೆ ಕಿರುಕುಳ ನೀಡತೊಡಗಿದ. ಅಲ್ಲಿನ ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಬೆಂಗಳೂರಿಗೆ ಹಿಂತಿರುಗಿ ಮತ್ತೆ ಆಶಾ ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದ ಎನ್ನಲಾಗಿದೆ.
ಮೂಲಗಳ ಪ್ರಕಾರ, ಪೊಲೀಸರು ತಿರುಪತಿ, ಸೇಲಂ ಮತ್ತು ಧರ್ಮಸ್ಥಳದ ಲಾಡ್ಜ್ಗಳಲ್ಲಿ ನಾಗೇಶ್ಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಯನ್ನು ನೋಡಿದ ಬಗ್ಗೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ಕರೆ ಬಂದ ನಂತರ ತಂಡವೊಂದು ಡೆಹ್ರಾಡೂನ್ಗೆ ತೆರಳಿದೆ.
ಈ ಮಧ್ಯೆ ಪೊಲೀಸ್ ಗೆ ಸುಳಿವು ಬರದಂತೆ ಇರಲು ನಾಗೇಶ್ ತನ್ನ ಎಟಿಎಂ ಕಾರ್ಡ್ ಅನ್ನು ಸಹ ಬಳಸಿಲ್ಲ ಅಥವಾ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿಲ್ಲ. ಸಂಜೀವಿನಿ ನಗರ, ಹೆಗ್ಗನಹಳ್ಳಿ ಕ್ರಾಸ್ ನಿವಾಸಿ ನಾಗೇಶ್ ಏಪ್ರಿಲ್ 28 ರಂದು ಸುಂಕದಕಟ್ಟೆಯಲ್ಲಿ 24 ವರ್ಷದ ಸಂತ್ರಸ್ತೆಯ ಮೇಲೆ ಆಸಿಡ್ ದಾಳಿ ನಡೆಸಿದ ನಂತರ ತಲೆಮರೆಸಿಕೊಂಡಿದ್ದಾನೆ.